ಭಾರತ-ಪಾಕ್ ಮ್ಯಾಚ್​ಗೆ ಡಿಮ್ಯಾಂಡೇ ಇಲ್ಲ! ಅದಕ್ಕೆ 4 ಕಾರಣ

ಯಾವುದೇ ಐಸಿಸಿ ಟೂರ್ನಿ ಬರಲಿ ಅಥವಾ ಏಷ್ಯಾಕಪ್​ ಟೂರ್ನಿಯೇ ನಡೀಲಿ. ಅಲ್ಲಿ ಉಳಿದೆಲ್ಲಾ ಪಂದ್ಯಗಳದ್ದು ಒಂದು ತೂಕವಾದ್ರೆ, ಇಂಡೋ-ಪಾಕ್​ ಬ್ಯಾಟಲ್​ನದ್ದೇ ಒಂದು ತೂಕ. ಈ ಒಂದು ಪಂದ್ಯವನ್ನ ನೋಡಲು ವಿಶ್ವವೇ ಕಾದು ಕುಳಿತಿರುತ್ತೆ.

author-image
Ganesh Kerekuli
India vs pakisthan (1)
Advertisment

ಯಾವುದೇ ಐಸಿಸಿ ಟೂರ್ನಿ ಬರಲಿ ಅಥವಾ ಏಷ್ಯಾಕಪ್​ ಟೂರ್ನಿಯೇ ನಡೀಲಿ. ಅಲ್ಲಿ ಉಳಿದೆಲ್ಲಾ ಪಂದ್ಯಗಳದ್ದು ಒಂದು ತೂಕವಾದ್ರೆ, ಇಂಡೋ-ಪಾಕ್​ ಬ್ಯಾಟಲ್​ನದ್ದೇ ಒಂದು ತೂಕ. ಈ ಒಂದು ಪಂದ್ಯವನ್ನ ನೋಡಲು ವಿಶ್ವವೇ ಕಾದು ಕುಳಿತಿರುತ್ತೆ. ಈ ಕ್ರಿಕೆಟ್​ ಫೈಟ್​ನಲ್ಲಿ ಸೋಲು ಅನ್ನೋ ಪದವನ್ನೇ ಯಾರೂ ಸಹಿಸಲ್ಲ. ಇದೊಂದು ಪ್ರತಿಷ್ಟೆಯ ಕಾಳಗ. ಟ್ರೋಫಿ ಗೆಲ್ಲೋದೂ ಬಿಡೋದು ಸೆಕೆಂಡರಿ. ಆದರೆ.. 

ಟಿಕೆಟ್ಸ್​ಗೆ ಇಲ್ವೇ ಇಲ್ಲ, ಡಿಮ್ಯಾಂಡ್!

ಇಂಡೋ-ಪಾಕ್​ ಕದನ ಅಂದ್ರೆ ನೆಕ್ಸ್ಟ್​​ ಲೆವೆಲ್​ ಕ್ರೇಜ್ ಇರುತ್ತೆ. ಈ ಬಾರಿ ಕ್ರೇಜ್​ ಇಲ್ವೇ ಇಲ್ಲ. ಕೆಲವೇ ಗಂಟೆಗಳಲ್ಲಿ ಸೋಲ್ಡ್​​ ಔಟ್​ ಆಗುತ್ತಿದ್ದ ಟಿಕೆಟ್ಸ್​ ಇನ್ನೂ ಹಾಗೇ ಉಳಿದಿವೆ. ಇದೇ ದುಬೈನಲ್ಲಿ ಇದೇ ವರ್ಷ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿ ಟಿಕೆಟ್ಸ್​​ ಜಸ್ಟ್​ 15 ನಿಮಿಷದಲ್ಲಿ ಸೋಲ್ಡ್​ ಔಟ್​ ಆಗಿದ್ವು. ಏಷ್ಯಾಕಪ್​ ಟಿಕೆಟ್ಸ್​ ಇನ್ನೂ ಹಾಗೇ ಉಳಿದಿವೆ. ಡಿಮ್ಯಾಂಡ್​ ಕಡಿಮೆಯಾಗೋದಕ್ಕೆ ಹಲವು ಕಾರಣಗಳಿವೆ. 

ಟಿಕೆಟ್​ ಬೆಲೆ ಬೇಕಾಬಿಟ್ಟಿ ಏರಿಸಿದ್ದೇ ಮುಳುವಾಯ್ತಾ?

ಏಷ್ಯಾಕಪ್​ ಟಿಕೆಟ್​ ಬೆಲೆಯನ್ನ ದುಪ್ಪಟ್ಟು ಏರಿಕೆ ಮಾಡಲಾಗಿದೆ. ಅನ್​ಲಿಮಿಟೆಡ್​ ಫುಡ್​​, ಡ್ರಿಂಕ್ಸ್​, ವಿಐಪಿ ಲಾಂಜ್​ನಂತ ಐಷಾರಾಮಿ ಸೌಲಭ್ಯ ಹೊಂದಿರೋ ಸ್ಟ್ಯಾಂಡ್​​ನ 2 ಟಿಕೆಟ್​​ ಬೆಲೆಯನ್ನ ಬರೋಬ್ಬರಿ 2.57 ಲಕ್ಷಕ್ಕೆ ಏರಿಸಲಾಗಿದೆ. ರಾಯಲ್ ಬಾಕ್ಸ್​ನ ಟಿಕೆಟ್​ ಬೆಲೆ 2.30 ಲಕ್ಷ ಆಗಿದ್ರೆ, ಸ್ಕೈ ಬಾಕ್ಸ್​​ ಈಸ್ಟ್​ನ ಸ್ಟ್ಯಾಂಡ್​ನ ಒಂದು ಟಿಕೆಟ್​​ಗೆ 1.67 ಲಕ್ಷ, ಪ್ಲಾಟಿನಮ್​ ಟಿಕೆಟ್​​ಗೆ 75 ಸಾವಿರ, ಗ್ರ್ಯಾಂಡ್​ ಲಾಂಜ್​​ಗೆ 41 ಸಾವಿರ, ಪೆವಿಲಿಯನ್​ ವೆಸ್ಟ್​ನ ಒಂದು ಟಿಕೆಟ್​ ಬೆಲೆಯನ್ನ 28 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹೀಗೆ ದುಪ್ಪಟ್ಟು ಬೆಲೆ ನಿಗಧಿ ಮಾಡಿರೋದೇ ಟಿಕೆಟ್​ ಡಿಮ್ಯಾಂಡ್​ ತಗ್ಗಲು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ:ಗಿಲ್, ಅಭಿ ಸ್ನೇಹದ ಬಗ್ಗೆ ನಿಮಗೆ ಗೊತ್ತಾ..? ಇದು ನಿನ್ನೆ ಮೊನ್ನೆಯ ಗೆಳತನವಲ್ಲ..!

ಕೊಹ್ಲಿ ಇಲ್ಲ.. ರೋಹಿತ್​ ಇಲ್ಲ.. 

ಈ ಹಿಂದೆಯೋ ಇಂಡೋ-ಪಾಕ್​​ ಪಂದ್ಯದ ಟಿಕೆಟ್ ಬೆಲೆ ಗಗನಕ್ಕೇರಿಯಾಗ್ತಿತ್ತು. ಆದ್ರೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್​ ಪಡೆದುಕೊಳ್ತಾ ಇದ್ರು. ಸ್ಟಾರ್​ಗಳು ಕಣದಲ್ಲಿದ್ದಾರೆ ಅನ್ನೋದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಈ ಬಾರಿಯ ಏಷ್ಯಾಕಪ್​ನಲ್ಲಿ ಸ್ಟಾರ್​ಗಳೇ ಇಲ್ಲ. ಪ್ರಮುಖವಾಗಿ ಕಿಂಗ್​ ವಿರಾಟ್​ ಕೊಹ್ಲಿ, ಹಿಟ್​ ಮ್ಯಾನ್​​ ರೋಹಿತ್​ ಶರ್ಮಾ ಆಡ್ತಿಲ್ಲ. ಫ್ಯಾನ್ಸ್​ ಬರೋದೆ ಸ್ಟಾರ್​ಗಳನ್ನ ಕಣ್ತುಂಬಿಕೊಳ್ಳೋಕೆ. ಈಗ ನೋಡಿದ್ರೆ ಸ್ಟಾರ್​ಗಳೇ ಇಲ್ಲ. ಅಂತದ್ರಲ್ಲಿ ಟಿಕೆಟ್​ ಪ್ರೈಸ್​ ದುಪ್ಪಟ್ಟು ಮಾಡಿದ್ರೆ, ಅಭಿಮಾನಿಗಳು ಎಲ್ಲಿಂದ ಬರ್ತಾರೆ.

ಪಾಕಿಸ್ತಾನದ ಹೀನಾಯ ಪ್ರದರ್ಶನ

ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಅಂದ್ರೆ ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆ ಅಭಿಮಾನಿಗಳಲ್ಲಿ ಇರುತ್ತೆ. ಕಳೆದ ವರ್ಷ ನಡೆದ ಏಷ್ಯಾಕಪ್​, ವಿಶ್ವಕಪ್​​ ಮುಖಾಮುಖಿಗಳೆಲ್ಲಾ ಒನ್​ ಸೈಡೆಡ್​ ಆಗಿ ಅಂತ್ಯವಾಗಿವೆ. ಟೀಮ್​ ಇಂಡಿಯಾದ ಅಬ್ಬರದ ಪರ್ಫಾಮೆನ್ಸ್​ ನೀಡಿದ್ರೆ, ಪಾಕಿಸ್ತಾನ ಕನಿಷ್ಟ ಹೋರಾಟವನ್ನೂ ನಡೆಸದೆ ಶರಣಾಗಿದೆ. ಈ ಬಾರಿ ಬಾಬರ್​ ಅಝಂ, ಮೊಹಮ್ಮದ್​ ರಿಜ್ವಾನ್​ರಂತಾ ಸ್ಟಾರ್​ಗಳು ತಂಡದಲ್ಲಿ ಇಲ್ಲ. ಇದು ಅಭಿಮಾನಿಗಳಲ್ಲಿ ಎಕ್ಸೈಟ್​ಮೆಂಟ್​ ಕಡಿಮೆ ಮಾಡಿದೆ.

ಇದನ್ನೂ ಓದಿ:ದ್ರಾವಿಡ್, ಸಂಜು ಬಳಿಕ ರಾಜಸ್ಥಾನ್​ ರಾಯಲ್ಸ್​​ನಲ್ಲಿ ಮತ್ತೊಂದು ವಿಕೆಟ್​ ಪತನ..!

ಸೋಷಿಯಲ್​ ಮೀಡಿಯಾದಲ್ಲಿ ವಿರೋಧ 

ಪೆಹಲ್ಗಾಮ್​ ಟೆರರಿಸ್ಟ್​ ಅಟ್ಯಾಕ್​ನ ಭೀಕರತೆ ಇನ್ನೂ ಭಾರತೀಯರ ಮನದಲ್ಲಿ ಹಾಗೆ ಉಳಿದಿದೆ. ಸೋಷಿಯಲ್​ ಮೀಡಿಯಾಗಳಲ್ಲಿ ಟೀಮ್​ ಇಂಡಿಯಾ, ಪಾಕಿಸ್ತಾನ ವಿರುದ್ಧ ಪಂದ್ಯವನ್ನಾಡೋಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ. ಈ ಪಂದ್ಯವನ್ನ ಬಾಯ್ಕಾಟ್​ ಮಾಡುವ ಕ್ಯಾಂಪೇನ್​ ನಡೀತಿದ್ದು, ಇದರ ಏಫೆಕ್ಟ್​​ ಟಿಕೆಟ್​ ಸೇಲಿಂಗ್​ನಲ್ಲಿ ಪರಿಣಾಮ ಬೀರಿದೆ. 

ಹಲವು ಕಾರಣಗಳಿಂದ ಇಂಡೋ-ಪಾಕ್​ ಪಂದ್ಯದ ಟಿಕೆಟ್​ಗಳು ಸೇಲ್​ ಆಗದೇ ಉಳಿದಿವೆ. ಸೂಪರ್​​​ ಸಂಡೇ ನಡೆಯೋ ಲೀಗ್​ ಮ್ಯಾಚ್​​ನಲ್ಲಿ ಜಿದ್ದಾ-ಜಿದ್ದಿನ ಹೋರಾಟ ನಡೆದ್ರೆ ಮಾತ್ರ, ಸೂಪರ್​​ 4 ಹಂತದ ಪಂದ್ಯದ ವೇಳೆಗೆ ಕ್ರೇಜ್​ ಬರಲಿದೆ. ಇಲ್ಲದಿದ್ರೆ ಇಂಡೋ-ಪಾಕ್​ ಫೈಟ್​ನ ಫೀವರ್​ ಮತ್ತಷ್ಟು ಕಡಿಮೆಯಾಗೋದ್ರಲ್ಲಿ ಡೌಟಿಲ್ಲ. 

ಇದನ್ನೂ ಓದಿ:ಭಾರತ-ಪಾಕ್ ಮಧ್ಯೆ ಪಂದ್ಯ.. ಹುಸಿಯಾದ ನಿರೀಕ್ಷೆ! ಯಾಕೆ ಹೀಗೆ ಆಯ್ತು..?


ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup 2025 Ind vs Pak India A squad
Advertisment