ಭಾರತ-ಪಾಕ್ ಮಧ್ಯೆ ಪಂದ್ಯ.. ಹುಸಿಯಾದ ನಿರೀಕ್ಷೆ! ಯಾಕೆ ಹೀಗೆ ಆಯ್ತು..?

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್​ ಪಂದ್ಯ ಅಂದ್ರೆ ಸಾಕು ಕ್ರಿಕೆಟ್​ ಲೋಕ ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತೆ. ಯಾವುದೇ ಟೂರ್ನಮೆಂಟ್​ ಬರಲಿ. ಈ ಪಂದ್ಯದ ಕ್ರೇಜ್​ ನೆಕ್ಸ್ಟ್​​ ಲೆವೆಲ್​ ಇರುತ್ತೆ. ಅಕ್ಷರಶಃ ವಾರ್​ ಎಂಬಂತೆ ಈ ಪಂದ್ಯ ಬಿಂಬಿತವಾಗುತ್ತೆ.

author-image
Ganesh Kerekuli
India vs pakisthan
Advertisment

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್​ ಪಂದ್ಯ ಅಂದ್ರೆ ಸಾಕು ಕ್ರಿಕೆಟ್​ ಲೋಕ ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತೆ. ಯಾವುದೇ ಟೂರ್ನಮೆಂಟ್​ ಬರಲಿ. ಈ ಪಂದ್ಯದ ಕ್ರೇಜ್​ ನೆಕ್ಸ್ಟ್​​ ಲೆವೆಲ್​ ಇರುತ್ತೆ. ಅಕ್ಷರಶಃ ವಾರ್​ ಎಂಬಂತೆ ಈ ಪಂದ್ಯ ಬಿಂಬಿತವಾಗುತ್ತೆ. ಈ ಬಾರಿಯ ಏಷ್ಯಾಕಪ್​ನಲ್ಲಿ ಈ ವಾರ್​ನ ಫೀವರ್​​ ಕಡಿಮೆಯಾಗಿದೆ. ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್​ ಆಗ್ತಿದ್ದ ಟಿಕೆಟ್ಸ್​ ಇನ್ನೂ ಸೇಲಾಗಿಲ್ಲ..ಯಾಕೆ ಗೊತ್ತಾ?

ಇದನ್ನೂ ಓದಿ: ಗಿಲ್, ಅಭಿ ಸ್ನೇಹದ ಬಗ್ಗೆ ನಿಮಗೆ ಗೊತ್ತಾ..? ಇದು ನಿನ್ನೆ ಮೊನ್ನೆಯ ಗೆಳತನವಲ್ಲ..!

ಯಾವುದೇ ಐಸಿಸಿ ಟೂರ್ನಿ ಬರಲಿ.. ಅಥವಾ ಏಷ್ಯಾಕಪ್​ ಟೂರ್ನಿಯೇ ನಡೀಲಿ.. ಅಲ್ಲಿ ಉಳಿದೆಲ್ಲಾ ಪಂದ್ಯಗಳದ್ದು ಒಂದು ತೂಕವಾದ್ರೆ, ಇಂಡೋ-ಪಾಕ್​ ಬ್ಯಾಟಲ್​ನದ್ದೇ ಒಂದು ತೂಕ. ಈ ಒಂದು ಪಂದ್ಯವನ್ನ ನೋಡಲು ವಿಶ್ವವೇ ಕಾದು ಕುಳಿತಿರುತ್ತೆ. ಈ ಕ್ರಿಕೆಟ್​ ಫೈಟ್​ನಲ್ಲಿ ಸೋಲು ಅನ್ನೋ ಪದವನ್ನೇ ಯಾರೂ ಸಹಿಸಲ್ಲ. ಇದೊಂದು ಪ್ರತಿಷ್ಟೆಯ ಕಾಳಗ. ಟ್ರೋಫಿ ಗೆಲ್ಲೋದೂ ಬಿಡೋದು ಸೆಕೆಂಡರಿ. ಈ ಪಂದ್ಯವನ್ನ ಗೆಲ್ಲಬೇಕಷ್ಟೇ. 

ಟಿಕೆಟ್ಸ್​ಗೆ ಇಲ್ವೇ ಇಲ್ಲ ಡಿಮ್ಯಾಂಡ್

ಇಂಡೋ-ಪಾಕ್​ ಕದನ ಅಂದ್ರೆ ನೆಕ್ಸ್ಟ್​​ ಲೆವೆಲ್​ ಕ್ರೇಜ್ ಇರುತ್ತೆ. ಈ ಬಾರಿ ಕ್ರೇಜ್​ ಇಲ್ವೇ ಇಲ್ಲ. ಕೆಲವೇ ಗಂಟೆಗಳಲ್ಲಿ ಸೋಲ್ಡ್​​ ಔಟ್​ ಆಗ್ತಾ ಇದ್ದ ಟಿಕೆಟ್ಸ್​ ಇನ್ನೂ ಹಾಗೇ ಉಳಿದಿವೆ. ಇದೇ ದುಬೈನಲ್ಲಿ ಇದೇ ವರ್ಷ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿ ಟಿಕೆಟ್ಸ್​​ ಜಸ್ಟ್​ 15 ನಿಮಿಷದಲ್ಲಿ ಸೋಲ್ಡ್​ ಔಟ್​ ಆಗಿದ್ವು. ಏಷ್ಯಾಕಪ್​ ಟಿಕೆಟ್ಸ್​ ಇನ್ನೂ ಹಾಗೇ ಉಳಿದಿವೆ. ಡಿಮ್ಯಾಂಡ್​ ಕಡಿಮೆಯಾಗೋದಕ್ಕೆ ಹಲವು ಕಾರಣಗಳಿವೆ. 

ಟಿಕೆಟ್​ ಬೆಲೆ ಬೇಕಾಬಿಟ್ಟಿ ಏರಿಸಿದ್ದೇ ಮುಳುವಾಯ್ತಾ?

ಏಷ್ಯಾಕಪ್​ ಟಿಕೆಟ್​ ಬೆಲೆಯನ್ನ ದುಪ್ಪಟ್ಟು ಏರಿಕೆ ಮಾಡಲಾಗಿದೆ. ಅನ್​ಲಿಮಿಟೆಡ್​ ಫುಡ್​​, ಡ್ರಿಂಕ್ಸ್​, ವಿಐಪಿ ಲಾಂಜ್​ನಂತ ಐಷಾರಾಮಿ ಸೌಲಭ್ಯ ಹೊಂದಿರೋ ಸ್ಟ್ಯಾಂಡ್​​ನ 2 ಟಿಕೆಟ್​​ ಬೆಲೆಯನ್ನ ಬರೋಬ್ಬರಿ 2.57 ಲಕ್ಷಕ್ಕೆ ಏರಿಸಲಾಗಿದೆ. ಇನ್ನು ರಾಯಲ್ ಬಾಕ್ಸ್​ನ ಟಿಕೆಟ್​ ಬೆಲೆ 2.30 ಲಕ್ಷ ಆಗಿದ್ರೆ, ಸ್ಕೈ ಬಾಕ್ಸ್​​ ಈಸ್ಟ್​ನ ಸ್ಟ್ಯಾಂಡ್​ನ ಒಂದು ಟಿಕೆಟ್​​ಗೆ 1.67 ಲಕ್ಷ, ಪ್ಲಾಟಿನಮ್​ ಟಿಕೆಟ್​​ಗೆ 75 ಸಾವಿರ, ಗ್ರ್ಯಾಂಡ್​ ಲಾಂಜ್​​ಗೆ 41 ಸಾವಿರ, ಪೆವಿಲಿಯನ್​ ವೆಸ್ಟ್​ನ ಒಂದು ಟಿಕೆಟ್​ ಬೆಲೆಯನ್ನ 28 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹೀಗೆ ದುಪ್ಪಟ್ಟು ಬೆಲೆ ನಿಗಧಿ ಮಾಡಿರೋದೇ ಟಿಕೆಟ್​ ಡಿಮ್ಯಾಂಡ್​ ತಗ್ಗಲು ಪ್ರಮುಖ ಕಾರಣವಾಗಿದೆ. ಅಂದ್ಹಾಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಸೆಪ್ಟೆಂಬರ್ 14 ರಂದು ನಡೆಯಲಿದೆ. 

ಇದನ್ನೂ ಓದಿ:ದ್ರಾವಿಡ್, ಸಂಜು ಬಳಿಕ ರಾಜಸ್ಥಾನ್​ ರಾಯಲ್ಸ್​​ನಲ್ಲಿ ಮತ್ತೊಂದು ವಿಕೆಟ್​ ಪತನ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Asia Cup 2025 Ind vs Pak India A squad
Advertisment