/newsfirstlive-kannada/media/media_files/2025/09/01/dravid-sanju-samson-2025-09-01-18-28-28.jpg)
ಮುಂಬರುವ ಐಪಿಎಲ್ಗೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಬಿಗ್ ವಿಕೆಟ್ ಪತನವಾಗಿದೆ. ಹೆಡ್ ಕೋಚ್ ರಾಹುಲ್ ದ್ರಾವಿಡ್ ಬಳಿಕ ಸಿಇಒ ಜೆಕ್ ಲುಸ್ ಮ್ಯಾಕ್ರಮ್ ಫ್ರಾಂಚೈಸಿಗೆ ಗುಡ್ ಬೈ ಹೇಳಿದ್ದಾರೆ.
2017ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜನರಲ್ ಮ್ಯಾನೇಜರ್ ಆಗಿ ಫ್ರಾಂಚೈಸಿ ಸೇರಿದ್ದ ಮ್ಯಾಕ್ರಮ್ 2021ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ರು. ಕೆಲ ದಿನಗಳ ಹಿಂದಷ್ಟೇ ರಾಹುಲ್ ದ್ರಾವಿಡ್ ತಂಡ ತೊರೆದಿದ್ದಾರೆ. ನಾಯಕ ಸಂಜು ಸ್ಯಾಮ್ಸನ್ ಕೂಡ ಮುಂದಿನ ಸೀಸನ್ಗೂ ಮುನ್ನ ತಂಡದಿಂದ ಹೊರಬರಲು ನಿರ್ಧರಿಸಿದ್ದಾರೆ. ಬೆನ್ನಲ್ಲೇ ಜೆಕ್ ಲುಸ್ ಮ್ಯಾಕ್ರಮ್ ಕೂಡ ತಂಡದಿಂದ ಹೊರಬಂದಿರೋದು ತೀವ್ರ ಕುತೂಹಲ ಮೂಡಿಸಿದೆ.
ಕಳೆದ ವರ್ಷವಷ್ಟೇ ರಾಜಸ್ಥಾನ್ ರಾಯಲ್ಸ್ ತಂಡದ ಹೆಡ್ ಕೋಚ್ ಹುದ್ದೆಗೇರಿದ್ದ ರಾಹುಲ್ ದ್ರಾವಿಡ್ 10 ವರ್ಷಗಳ ಬಳಿಕ ನೆಚ್ಚಿನ ತಂಡಕ್ಕೆ ರೀ ಎಂಟ್ರಿ ನೀಡಿದ್ದರು. 2 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ರಾಹುಲ್ ದ್ರಾವಿಡ್, ಈಗ 2026ರ ಐಪಿಎಲ್ಗೂ ಮುನ್ನವೇ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಹುಲ್ ದ್ರಾವಿಡ್ ರಾಜೀನಾಮೆಯ ಸುತ್ತ ಅನುಮಾನದ ಹುತ್ತಗಳೇ ಬೆಳೆದು ನಿಂತಿದೆ. ಇದೀಗ ಜೆಕ್ ಲುಸ್ ಮ್ಯಾಕ್ರಮ್ ಕೂಡ ಹೊರ ಬಿದ್ದಿರೋದ್ರಿಂದ ರಾಜಸ್ಥಾನ್ ರಾಯಲ್ಸ್ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಸಾಬೀತಾಗಿದೆ.
ಇದನ್ನೂ ಓದಿ:ದ್ರಾವಿಡ್ಗೆ ತಾನೇ ಸಾಕಿದ ಗಿಣಿ ಹದ್ದಾಗಿ ಬಂದು ಕುಕ್ಕಿದೆ.. ಯಾಕೆ ಹೀಗೆ ಆಯ್ತು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ