/newsfirstlive-kannada/media/media_files/2025/08/31/rahul-dravid-1-2025-08-31-08-51-20.jpg)
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ಬಿಡ್ತಾರಾ? ಎಂಬ ಪ್ರಶ್ನೆಯಿಂದಲೇ ಸುದ್ದಿಯಾಗಿತ್ತು. ಆದ್ರೀಗ ದಿ ಜಂಟಲ್​​ಮನ್ ರಾಹುಲ್ ದ್ರಾವಿಡ್​ರಿಂದ ಸದ್ದು ಮಾಡ್ತಿದೆ. ದ್ರಾವಿಡ್​ಗೆ ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿದೆ.
ಹೆಡ್ ಕೋಚ್ ಹುದ್ದೆಗೆ ದ್ರಾವಿಡ್​ ಗುಡ್​ ಬೈ
ಕಳೆದ ವರ್ಷವಷ್ಟೇ ರಾಜಸ್ಥಾನ್ ರಾಯಲ್ಸ್​ ತಂಡದ ಹೆಡ್ ಕೋಚ್ ಹುದ್ದೆಗೇರಿದ್ದ ರಾಹುಲ್ ದ್ರಾವಿಡ್ 10 ವರ್ಷಗಳ ಬಳಿಕ ನೆಚ್ಚಿನ ತಂಡಕ್ಕೆ ರೀ ಎಂಟ್ರಿ ನೀಡಿದ್ದರು. 2 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ರಾಹುಲ್ ದ್ರಾವಿಡ್, ಈಗ 2026ರ ಐಪಿಎಲ್​ಗೂ ಮುನ್ನವೇ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಹುಲ್ ದ್ರಾವಿಡ್ ರಾಜೀನಾಮೆಯ ಸುತ್ತ ಅನುಮಾನದ ಹುತ್ತಗಳೇ ಬೆಳೆದು ನಿಂತಿದೆ.
ಇದನ್ನೂ ಓದಿ:ಟೀಮ್ ಇಂಡಿಯಾ ಆಟಗಾರರಿಗೆ 'ಬ್ರಾಂಕೋ ಟೆಸ್ಟ್' ವರದಾನವಾಗುತ್ತಾ..?
ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿಯೇ ಹೇಳಿದಂತೆ ಹೆಡ್ ಕೋಚ್​ ದ್ರಾವಿಡ್​ಗೆ ಬಿಗ್ ಆಫರ್ ನೀಡಿದೆ. ಹೆಡ್ ಕೋಚ್ ಬದಲಾಗಿ ಕುಮಾರ ಸಂಗಕ್ಕಾರ, ನಿರ್ವಹಿಸುತ್ತಿದ್ದ ಡೈರೆಕ್ಟರ್ ಹುದ್ದೆ ವಹಿಸಲು ಮುಂದಾಗಿತ್ತು. ಈ ಆಫರ್​ನ ದ್ರಾವಿಡ್ ನಿರಾಕರಿಸಿದ್ದಾರೆ. ಹೆಡ್ ಕೋಚ್ ಹುದ್ದೆಗೂ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಸಹಜವಾಗೇ ಹೊಸ ಪ್ರಶ್ನೆಗಳಿಗೆ ನಾಂದಿಯಾಡಿದೆ. ಹೆಡ್ ಕೋಚ್ ಹುದ್ದೆಯಿಂದ ದ್ರಾವಿಡ್​​ ದೂರ ಇದ್ರೆ ಆಟಗಾರರ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಬೀಳುತ್ತೆ. ಈ ಕಾರಣಕ್ಕಾಗಿಯೇ ರಾಜಸ್ಥಾನ್ ರಾಯಲ್ಸ್​ ದೊಡ್ಡ ಹುದ್ದೆಯ ಆಫರ್ ನೀಡಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಇದಕ್ಕೆ ಕಾರಣ ಸೀಸನ್​​-18ರಿಂದ ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿ ನಡೀತಿರುವ ಬೆಳವಣಿಗೆಗಳು.
ಆರ್​ಆರ್ ತಂಡದಲ್ಲಿ ಭಿನ್ನಮತ
ಸೀಸನ್​-18 ಮಿಡ್ ಸೀಸನ್​ನಿಂದಲೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಸಮಾಧಾನದ ಹೊಗೆಯಾಡ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್​ ಎದುರಿನ ಪಂದ್ಯವನ್ನ ರಾಜಸ್ಥಾನ್ ಟೈ ಮಾಡಿಕೊಂಡಿತ್ತು. ಈ ವೇಳೆ ಸೂಪರ್ ಓವರ್​ನ ಡಿಸ್ಕಷನ್​ ವೇಳೆ ನಡೆದ ಕೆಲ ಘಟನೆಗಳು ಎಲ್ಲವೂ ಸರಿ ಇಲ್ಲ ಎಂಬ ಅನುಮಾನಕ್ಕೆ ನಾಂದಿಯಾಡಿತ್ತು. ದ್ರಾವಿಡ್ ಸಪೋರ್ಟ್​ ಸ್ಟಾಫ್​ ಹಾಗೂ ಆಟಗಾರರ ಜೊತೆ ಗೇಮ್​​ ಪ್ಲಾನ್​ ಮಾಡ್ತಿದ್ರೆ, ಇತ್ತ ಸಂಜು ತನಗೇನು ಸಂಬಂಧ ಇಲ್ಲವೆಂಬಂತೆ ನಡೆದುಕೊಂಡಿದ್ದರು. ಸಹ ಆಟಗಾರ ಟೀಮ್​​​​​ ಮೀಟಿಂಗ್​ಗೆ ಬರುವಂತೆ ಸನ್ನೆ ಮಾಡಿದ್ರು. ಇದಕ್ಕೆ ಸನ್ನೆಯಲ್ಲೇ ಉತ್ತರ ನೀಡಿ ಮೀಟಿಂಗ್​ನಿಂದ ದೂರ ಉಳಿದ್ದಿದ್ದರು. ಇದು ಆರ್​ಆರ್​ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನೇ ನೀಡಿತ್ತು.
ಇದನ್ನೂ ಓದಿ:ವಿರುಷ್ಕಾ ನೆಚ್ಚಿನ ಶ್ವಾನದ ಹೆಸರೇನು? KL ರಾಹುಲ್ ಏನೆಂದು ಕರೀತಾರೆ?
ಸೀಸನ್​-18 ಅಂತ್ಯದ ಬೆನ್ನಲ್ಲೇ ಸಂಜು, ಆರ್​ಆರ್ ತೊರೆಯಲು ಸನ್ನದ್ಧರಾಗಿದ್ದರು. ಸ್ವತಃ ರಿಲೀಸ್ ಮಾಡಲು ಫ್ರಾಂಚೈಸಿಗೆ ಮನವಿ ಮಾಡಿದ್ದರು. ಸಂಜು ರಿಲೀಸ್​ಗೆ ಆರ್​ಆರ್​ ಹಿಂದೇಟು ಹಾಕಿತ್ತು. ಇದೇ ಕಾರಣಕ್ಕೆ ಆರ್​ಆರ್​, ದೊಡ್ಡ ಹುದ್ದೆಯ ಆಫರ್ ದ್ರಾವಿಡ್​ಗೆ ನೀಡಿತ್ತು. ಇದೆನ್ನೆಲ್ಲವನ್ನು ಅರಿತಿದ್ದ ದ್ರಾವಿಡ್ ದೊಡ್ಡ ಹುದ್ದೆಯನ್ನೇ ಅಲ್ಲ. ಹೆಡ್ ಕೋಚ್ ಹುದ್ದೆಗೂ ಗುಡ್ ಬೈ ಹೇಳಿದ್ದಾರೆ. ಗೌರವ ಇದ್ದಡೆ ಮಾತ್ರ ದ್ರಾವಿಡ್ ಎಂಬ ಲೆಜೆಂಡ್ ಇರ್ತಾರೆ ಎಂಬ ಸಂದೇಶ ಸಾರಿದ್ದಾರೆ.
ಸಂಜು ಎಂಬ ಯುವ ಪ್ರತಿಭೆಗೆ ಅವಕಾಶ ನೀಡಿ ಕ್ರಿಕೆಟ್ ಲೋಕಕ್ಕೆ ಪರಿಚಯಿಸಿದ್ದ ದ್ರಾವಿಡ್​​​​ಗೆ, ಇವತ್ತು ಸಂಜು ಸ್ಯಾಮ್ಸನ್​​ ಹದ್ದಾಗಿ ಕುಕ್ಕಿದೆ. ರಾಹುಲ್ ದ್ರಾವಿಡ್ ರಾಜೀನಾಮೆ ಕಾರಣರಾಗಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ