/newsfirstlive-kannada/media/media_files/2025/09/12/shubman_gill-6-2025-09-12-18-38-46.jpg)
ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ಶುಭ್​ಮನ್ ಗಿಲ್​ ಈಗ ಕ್ರಿಕೆಟ್​ ಲೋಕದ ಯುವರಾಜ. ಸಾಮಾನ್ಯ ಆಟಗಾರನಾಗಿ ಕ್ರಿಕೆಟ್​ ಆಡಲು ಆರಂಭಿಸಿದ ಗಿಲ್​ ಯುವರಾಜನ ಪಟ್ಟವೇರಿದ ಜರ್ನಿಯೇ ರೋಚಕ. ಈ ಜರ್ನಿಯಲ್ಲಿ ಹಲವರ ಶ್ರಮವಿದೆ. ಅದರಲ್ಲಿ ಒಬ್ಬ ಅವಿನಾಶ್​ ಕುಮಾರ್​. ಜ್ಯೂಸ್​ ಮಾರುತ್ತಿದ್ದ ವ್ಯಕ್ತಿಯೊಬ್ಬನ ಮಗ ಶುಭ್​ಮನ್​ ಗಿಲ್​ ಸಕ್ಸಸ್​ಗೆ ಕಾರಣವಾದ ಸ್ಪೆಷಲ್​ ಸ್ಟೋರಿ ಇಲ್ಲಿದೆ.
ಶುಭ್​ಮನ್​ ಗಿಲ್​ ಕ್ರಿಕೆಟ್​ ಲೋಕದ ಯುವ ಆಟಗಾರ. ಟೆಸ್ಟ್​, ಟಿ20, ಏಕದಿನ.. ಮೂರೂ ಫಾರ್ಮೆಟ್​ನಲ್ಲಿ ಮಿಂಚು ಹರಿಸಿರೋ ಗಿಲ್​ ಕೇವಲ 26 ವರ್ಷಕ್ಕೆ ಸೂಪರ್​ ಸ್ಟಾರ್​ ಪಟ್ಟವೇರಿದ್ದಾರೆ. ಆದ್ರೆ, ಪಂಜಾಬ್ ಅಂಡರ್​ 14 ತಂಡದಿಂದ ಟೀಮ್​ ಇಂಡಿಯಾವರೆಗಿನ ಈ ಶುಭ್​ಮನ್​ ಗಿಲ್ ಜರ್ನಿ ಸುಲಭದ್ದಾಗಿರಲಿಲ್ಲ. ಇದ್ರ ಹಿಂದೆ ಹಲವರ ಶ್ರಮವಿದೆ. ತ್ಯಾಗವಿದೆ. ತಂದೆ, ತಾಯಿಯ ತ್ಯಾಗ, ಗುರುಗಳು, ಮೆಂಟರ್​ಗಳ ಪಾಠದ ಕತೆ ಎಲ್ಲರಿಗೂ ಗೊತ್ತು. ಆದ್ರೆ, ಈ ಜ್ಯೂಸ್​ ಮಾರುತ್ತಿದ್ದ ವ್ಯಕ್ತಿಯೊಬ್ಬರ ಪುತ್ರನ ಕಥೆ ಬಹುತೇಕರಿಗೆ ಗೊತ್ತಿಲ್ಲ.
ಶುಭ್​ಮನ್​ ಗಿಲ್​ಗಾಗಿ ಅವಿನಾಶ್ ಕುಮಾರ್​ ಮಾಡಿದ್ದೇನು.?
ಪ್ರತಿಯೊಬ್ಬ ಕ್ರಿಕೆಟರ್​​ ಸಕ್ಸಸ್​​ ಹಿಂದೆ ಹಲವು ಕಾಣದ ಕೈಗಳಿರುತ್ತವೆ. ಅದೇ ರೀತಿ ಶುಭ್​ಮನ್​ ಗಿಲ್ ಯಶಸ್ಸಿನ ಹಿಂದೆ ಈ ಹುಡುಗನ ಶ್ರಮವಿದೆ. ಆ ಹುಡುಗನ ಹೆಸ್ರು ಅವಿನಾಶ್​ ಕುಮಾರ್​. ಈತ ಕೂಡ ಕ್ರಿಕೆಟರ್​​ ಎಂಬ ದೊಡ್ಡ ಕನಸನ್ನ ಚಿಕ್ಕ ವಯಸ್ಸಲ್ಲೇ ಕಂಡವನು. ಆದ್ರೆ, ಏನು ಮಾಡೋದು ಬಡತನದ ಮುಂದೆ ಈತನ ದೊಡ್ಡ ಕನಸು ಕನಸಾಗೇ ಉಳೀತು. ಫಾಸ್ಟ್​ ಬೌಲರ್​ ಆಗಬೇಕು ಅಂದುಕೊಂಡಿದ್ದವನು ಕೊನೆಗೆ ಆಗಿದ್ದು ಥ್ರೋ ಡೌನ್​ ಸ್ಪೆಷಲಿಸ್ಟ್​.!
ಪಂಜಾಬ್​ನ ಮೊಹಾಲಿ ಸ್ಟೇಡಿಯಂ ಇದ್ಯಲ್ಲ, ಅದ್ರ ಗೇಟ್​ ನಂಬರ್​ 1ರ ಬಳಿ ಈ ಅವಿನಾಶ್​ ಕುಮಾರ್​ ತಂದೆ ರಾಮ್​ ವಿಲಾಸ್​ ಶಾ ಜ್ಯೂಸ್​ ಮಾರ್ತಾ ಇದ್ರು. ಉತ್ತರ ಪ್ರದೇಶದ ಇವ್ರು ತಳ್ಳೋ ಗಾಡಿಯಲ್ಲಿ ಜ್ಯೂಸ್​ ಮಾರ್ತಾ ಜೀವನ ಕಟ್ಟಿಕೊಂಡಿದ್ರು. ಅವಿನಾಶ್​ ಸಿಂಗ್​ ಫಾಸ್ಟ್​​​ ಬೌಲರ್​ ಆಗೋ ಕನಸು ಕಟ್ಟಿಕೊಂಡು ದಿನವೂ ಮೈದಾನದಲ್ಲಿ ಅಭ್ಯಾಸ ನಡೆಸ್ತಾ ಇದ್ರು. ಗಿಲ್​ ಕೂಡ ಅಲ್ಲೇ ಪ್ರಾಕ್ಟಿಸ್​ ಮಾಡ್ತಿದ್ರು. ದಿನವೂ ಮೈದಾನದಲ್ಲಿ ಅಭ್ಯಾಸ ನಡೆಸಿದ ಬಳಿಕ ಮನೆಗೆ ತೆರಳುವಾಗ ಶುಭ್​ಮನ್​ ಗಿಲ್ ಹಾಗೂ ಅವರ ತಂದೆ ಲಕ್ವಿಂದರ್​ ಸಿಂಗ್​ ರಾಮ್​ ವಿಲಾಸ್​​ ಜ್ಯೂಸ್​ ಕುಡೀತಾ ಇದ್ರು, ಇದ್ರಿಂದಾಗಿ ಇವ್ರ ನಡುವೆ ಪರಿಚಯ ಬೆಳೆದಿತ್ತು.
2014ರಲ್ಲಿ ಒಂದು ದಿನ ರಾಮ್​​ ವಿಲಾಸ್​ ಶಾ ಆನಾರೋಗ್ಯಕ್ಕೆ ಗುರಿಯಾದ್ರು. ತಂದೆ ಹಾಸಿಗೆ ಹಿಡಿದ ಮೇಲೆ ಕ್ರಿಕೆಟ್​ ಕನಸು ಕೈ ಬಿಟ್ಟು ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡೋಕೆ ಅವಿನಾಶ್​ ಮುಂದಾದ್ರು. ಈ ನಡುವೆ ಗಿಲ್​ ತಂದೆ ಬಳಿ ಇದೆನ್ನೆಲ್ಲಾ ಹೇಳಿಕೊಂಡಿದ್ರಂತೆ. ಆಗ ಕ್ರಿಕೆಟ್​ ಬಿಡಬೇಡ ಎಂದ ಗಿಲ್​ ತಂದೆ ಥ್ರೋಡೌನ್​ ಸ್ಪೆಷಲಿಸ್ಟ್​ ಆಗೋ ಸಲಹೆ ನೀಡಿದ್ರಂತೆ. ಆ ಸಲಹೆಯನ್ನ ಗಂಭೀರವಾಗಿ ಪರಿಗಣಿಸಿದ ಅವಿನಾಶ್​ ಫಾಸ್ಟ್​ ಬೌಲರ್​ ಬದಲು ಥ್ರೋ ಡೌನ್​ ಸ್ಪೆಷಲಿಸ್ಟ್​ ಆಗೋ ನಿರ್ಧಾರ ಮಾಡಿದ. ಇಲ್ಲಿಂದ ಶುರುವಾಗಿದ್ದು ನೋಡಿ ಗಿಲ್​, ಅವಿನಾಶ್​ ಫ್ರೆಂಡ್​ಶಿಪ್​.
ತಂದೆ ಆಸ್ಪತ್ರೆಯಲ್ಲಿದ್ದಾಗ ಅವಿನಾಶ್​ಗೆ ಆರ್ಥಿಕ ನೆರವು.!
ಸ್ಟೈಡ್​ ಆರ್ಮ್​ ಥ್ರೋವರ್​​ ಆಗಿ ಹೊಸ ಕೆಲಸ ಆರಂಭಿಸಿದ ಅವಿನಾಶ್, ಹಲವು ಆಟಗಾರರ ಅಭ್ಯಾಸಕ್ಕೆ ನೆರವಾಗ್ತಿದ್ರು. ಇದಕ್ಕಾಗಿ​ 150ರಿಂದ 200 ರೂಪಾಯಿಗಳವರೆಗೆ ಚಾರ್ಜ್​ ಮಾಡ್ತಾ ಇದ್ರು. ಇದೇ ವೇಳೆ ಶುಭ್​ಮನ್​ ಗಿಲ್​ ಅಭ್ಯಾಸಕ್ಕೂ ಥ್ರೋ ಡೌನ್​ ಮಾಡ್ತಾ ನೆರವಾಗ್ತಾ ಇದ್ರಂತೆ. ಆದ್ರೆ, ಗಿಲ್​ ಬಳಿ ಮಾತ್ರ ಹಣ ಪಡೀತಾ ಇರಲಿಲ್ಲ.. ಯಾಕಂದ್ರೆ, ಗಿಲ್​ ಹಾಗೂ ಗಿಲ್​ ತಂದೆ ಮಾಡಿದ ಸಹಾಯದ ಋಣ ಅವಿನಾಶ್​ ಮೇಲಿತ್ತು. ಅವಿನಾಶ್​​ ತಂದೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆ ಸೇರಿದ ಸಮಯದಲ್ಲಿ ಗಿಲ್​ ತಂದೆ ಲಕ್ವಿಂದರ್​ ಆರ್ಥಿಕವಾಗಿ ಸಹಾಯ ಮಾಡಿದ್ರಂತೆ. ಜೊತೆಗೆ ಥ್ರೋ ಡೌನ್​ ಸ್ಪೆಷಲಿಸ್ಟ್​ ಆಗಿ ಹೊಸ ವೃತ್ತಿ ಬದುಕು ರೂಪಿಸಿಕೊಳ್ಳುವಲ್ಲೂ ನೆರವಾಗಿದ್ರಂತೆ.
ಇದನ್ನೂ ಓದಿ:ನನ್ನ ಮಗನನ್ನ ಲವ್ ಮಾಡು ಅಂತ ನಾನು ಹೇಳಿದ್ನಾ.. ಸೊಸೆ ಬಗ್ಗೆ ಎಸ್ ನಾರಾಯಣ್ ಹೇಳಿದ್ದೇನು?
/filters:format(webp)/newsfirstlive-kannada/media/media_files/2025/09/12/gill_friend-2025-09-12-18-39-14.jpg)
ಗಿಲ್​ ಬ್ಯಾಟಿಂಗ್​ ಬದಲಾವಣೆಯಲ್ಲಿ ಅವಿನಾಶ್​ ಶ್ರಮ.!
ಅಂಡರ್​ 19 ಸಮಯದಿಂದಲೂ ಶುಭ್​ಮನ್​ ಗಿಲ್​, ಅವಿನಾಶ್​ ಜೊತೆಗೆ ಬ್ಯಾಟಿಂಗ್​ ಅಭ್ಯಾಸ ನಡೆಸ್ತಿದ್ದಾರೆ. ಯಾವಾಗೆಲ್ಲಾ ಗಿಲ್​ಗೆ ಫಾರ್ಮ್​ ಸಮಸ್ಯೆ ಎದುರಾಗುತ್ತೋ ಆಗೆಲ್ಲಾ ಅವಿನಾಶ್​​ ಜೊತೆಗೆ ಸುದೀರ್ಘ ಅಭ್ಯಾಸ ನಡೆಸ್ತಾರೆ. ಕರಿಯರ್​ನ ಆರಂಭಿಕ ಹಂತದಿಂದ ಈವರೆಗೆ ಗಿಲ್​​ ಬ್ಯಾಟಿಂಗ್​ನಲ್ಲಿ ಆಗಿರೋ ಬದಲಾವಣೆಯ ಹಿಂದೆ ಅವಿನಾಶ್​​ರ ಅಪಾರ ಶ್ರಮವಿದೆ. ತನಗೆ ಕಷ್ಟ ಎದುರಾದಾಗೆಲ್ಲಾ ನೆರವಾಗೋ ಅವಿನಾಶ್​​ನ ಗಿಲ್,​ ಗುಜರಾತ್​​ ಟೈಟನ್ಸ್​ ತಂಡಕ್ಕೂ ಕರೆ ತಂದಿದ್ದಾರೆ.
ಆರಂಭದಿಂದ ಈವರೆಗೆ ಶುಭ್​ಮನ್​ ಗಿಲ್​ - ಅವಿನಾಶ್​ ಸ್ನೇಹ ಗಟ್ಟಿಯಾಗುತ್ತಲೇ ಸಾಗಿದೆ. ಸದ್ಯ ಏಷ್ಯಾಕಪ್​ ಆಡೋಕೆ ಶುಭ್​ಮನ್​ ಗಿಲ್​ ದುಬೈನಲ್ಲಿದ್ದಾರಲ್ವಾ.? ಅಲ್ಲೂ ಕೂಡ ಅವಿನಾಶ್​, ಗಿಲ್​ ಜೊತೆಗೆ ಇದ್ದಾರೆ. ಗಿಲ್​ ಎಲ್ಲಿಗೆ ಹೋದರೂ ಅವಿನಾಶ್​ ಜೊತೆಗೆ ಇದ್ದೇ ಇರ್ತಾರೆ. ಗೆಳೆತನ ಅಂದ್ರೆ ಇದಲ್ವಾ?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us