ನಟಿ ರಮ್ಯಾ ಬಳಿಕ ಸೋನು ಶೆಟ್ಟಿಗೂ ಅಶ್ಲೀಲ ಕಮೆಂಟ್ಸ್.. ಯಾರು ಇವರು..?

ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ನ್ಯೂಸ್​ಫಸ್ಟ್​ ಮುಂದೆ ಬಂದಿದಾರೆ

author-image
Ganesh
Advertisment

ಅಭಿಮಾನದ ಹೆಸರಲ್ಲಿ ರಮ್ಯಾಗೆ (Actress Ramya) ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ಜಾಮೀನು ಸಿಕ್ಕರೆ ಸಾಕು ದೇವರೇ ಅಂತ ದರ್ಶನ್​ ಌಂಡ್​ ಗ್ಯಾಂಗ್​ ಕೋರ್ಟ್​ಗಳ ಸುತ್ತಾ ಅಲೆದಾಡ್ತಿದ್ರೆ, ಇತ್ತ ಅಶ್ಲೀಲ ಪದಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಕಂಟಕ ಹೆಚ್ಚಾಗ್ತಿದೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ನ್ಯೂಸ್​ಫಸ್ಟ್​ ಮುಂದೆ ಬಂದಿದಾರೆ. 

ರಮ್ಯಾ ಬಳಿಕ ಸೋನು ಶೆಟ್ಟಿಗೂ ಅಶ್ಲೀಲ ಕಮೆಂಟ್ಸ್​

ಸೋನು ಶೆಟ್ಟಿ.. (Sonu Shetty) ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಹಾಟ್​ ಹಾಟ್​ ಲುಕ್  ಮೂಲಕವೇ ಸಾವಿರಾರು ಫಾಲೋವರ್ಸ್​ ಹೊಂದಿರೋ ರೂಪದರ್ಶಿ ಕಮ್ ಡಿಜಿಟಲ್ ಕ್ರಿಯೇಟರ್. ಅಷ್ಟೇ ಅಲ್ಲ, ಸೋನು ಶೆಟ್ಟಿ ಅಪ್ಪಟ ಕಿಚ್ಚ ಸುದೀಪ್ ಅಭಿಮಾನಿ ಅಂತಾ ಹೇಳಿಕೊಳ್ತಾರೆ. ಇಂತಹ ಸೋನು ಶೆಟ್ಟಿಗೆ ಇತ್ತೀಚೆಗೆ ದರ್ಶನ್​ ಅಭಿಮಾನಿಗಳಿಂದ ಅಶ್ಲೀಲ ಸಂದೇಶಗಳು ಹೆಚ್ಚಾಗ್ತಿವೆ ಅಂತಾ ಈಕೆಯೂ ಸಿಡಿದೆದ್ದು ನಿಂತಿದ್ದಾರೆ. 

3 ದಿನಗಳಿಂದ ಅಶ್ಲೀಲವಾದ ಕಮೆಂಟ್ಸ್​ ಮಾಡ್ತಿದ್ದಾರೆ. ಅವರ ಪದಗಳಲ್ಲಿ ಅಶ್ಲೀಲತೆ ಅದೆಷ್ಟರ ಮಟ್ಟಿಗಿದೆ ಅಂದ್ರೆ, ಅದನ್ನ ನೋಡೋದಕ್ಕೂ ಆಗ್ತಿಲ್ಲ..ಅಷ್ಟೇ ಅಲ್ಲ...ನಾನು ಕಿಚ್ಚು ಸುದೀಪ್ ಅಭಿಮಾನಿಯಾಗಿರೋದ್ರಿಂದ ನನಗೆ ಈ ಥರಾ ಹಿಂಸೆ ಮಾಡ್ತಿದ್ದಾರೆ ಅನ್ನೋದು ಸೋನು ಶೆಟ್ಟಿಯ ಗಂಭೀರ ಆರೋಪ ಆಗಿದೆ. 

ಇದನ್ನೂ ಓದಿ: ಮಾಧುರಿ ಆನೆಗಾಗಿ ಅಂಬಾನಿ ವಿರುದ್ಧ ಸಿಡಿದು ನಿಂತ ಜನ- ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ವಂತಾರ

ದರ್ಶನ್​ ಅಭಿಮಾನಿಗಳು ಸುದೀಪ್​ರನ್ನ ಟ್ರೋಲ್​ ಮಾಡ್ತಿದ್ರಂತೆ. ಅದನ್ನ ನೋಡೋದಕ್ಕಾಗದೇ, ಸೋನು ಅವರ ವಿರುದ್ಧ ರಿಯಾಕ್ಟ್​ ಮಾಡಿದ್ದಾರೆ. ಅವ್ರಿಗೆ ತಕ್ಕ ಪಾಠ ಕಲಿಸಲೇಬೇಕು ಅಂತಾ ಒಂದು ವಿಡಿಯೋ ಮಾಡಿ ಹಾಕಿದ್ದಾರೆ. ದರ್ಶನ್​ ಹಾಗೂ ಅವರ ಫ್ಯಾನ್ಸ್ ಇಷ್ಟ ಆಗಲ್ಲ. ಅವರು ರೌಡಿ ಆಗಬೇಕಿತ್ತು. ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದುವೇ ಪ್ರಾಬ್ಲಂ. ಅವರ ಫ್ಯಾನ್ಸ್ ಕೂಡ ಹಾಗೆಯೇ ಇದ್ದಾರೆ. ಅವರ ಫ್ಯಾನ್ಸ್​ಗೆ ಬುದ್ಧಿ ಕಲಿಸಬೇಕು ಅಂತೆಲ್ಲಾ ಆ ವಿಡಿಯೋದಲ್ಲಿ ಸೋನು ಹೇಳಿದ್ದರು. ಅದ್ಯಾವಾಗ ದರ್ಶನ್​ ಫ್ಯಾನ್ಸ್​ನ ಹಿಯಾಳಿಸಿ ಈಕೆಯೂ ಟ್ರೋಲ್​ ಮಾಡೋದಕ್ಕೆ ಶುರುಮಾಡಿದ್ರೋ, ಈಕೆಯ ವಿರುದ್ಧ ಮತ್ತಷ್ಟು ಅಶ್ಲೀಲ ಪದಗಳ ದಾಳಿ ನಡೆಸಲಾಗಿದೆ. ತಾಯಿ ಬಗ್ಗೆ ಮಾತನಾಡಿದ್ದಾರೆ. ಅದ್ಯಾವಾಗ ತಾಯಿ ಬಗ್ಗೆ ಮಾತನಾಡೋದನ್ನ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗ್ಲಿಲ್ವೋ.. ಮತ್ತೆ ಸೋನು ಒಂದು ವಿಡಿಯೋ ಮಾಡಿದ್ದಳು. ನಾನ್​ ನಿಮಗೆ ಠಕ್ಕರ್  ಕೊಡ್ತಾನೆ ಇರ್ತೀನಿ ಏನ್​ ಮಾಡ್ತೀರಾ ಮಾಡ್ಕೊಳ್ಳಿ ಅಂತಾನೇ ಹೇಳಿ ಮತ್ತೊಂದು ವಿಡಿಯೋ ಮಾಡಿ ಹಾಕಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಟ್ರಂಪ್ ಆಘಾತ.. ಶೇಕಡಾ 50 ರಷ್ಟು ಆಮದು ಸುಂಕ ಘೋಷಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actress Ramya Actor Darshan Sonu Shetty
Advertisment