/newsfirstlive-kannada/media/media_files/2025/08/01/usa-prez-donald-trump-and-modi-2025-08-01-14-12-31.jpg)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮತ್ತೊಮ್ಮೆ ಭಾರತಕ್ಕೆ ಭಾರೀ ಆಘಾತ ನೀಡಿದ್ದಾರೆ. ಭಾರತದ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ವಿಫಲವಾದ ಕಾರಣ ಶೇಕಡಾ 50 ರಷ್ಟು ಸುಂಕ ವಿಧಿಸುತ್ತಿರೋದಾಗಿ ಹೇಳಿದ್ದಾರೆ. ಜುಲೈ 31 ರಂದು ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಇದೀಗ ಭಾರತದ ಮೇಲಿನ ಸುಂಕ ಹೆಚ್ಚಳಕ್ಕೆ ಸಂಬಂಧಿಸಿ ಟ್ರಂಪ್ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಮಾಧುರಿ ಆನೆಗಾಗಿ ಅಂಬಾನಿ ವಿರುದ್ಧ ಸಿಡಿದು ನಿಂತ ಜನ- ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ವಂತಾರ
ಭಾರತದ ಮೇಲೆ ವಿಧಿಸಲಾದ ಶೇ. 25 ರಷ್ಟು ಸುಂಕಕ್ಕೆ ಇನ್ನೂ ಶೇ. 25 ರಷ್ಟು ಸೇರಿಸುವುದಾಗಿ ಘೋಷಿಸಿದ್ದು, ಒಟ್ಟು ಶೇ. 50 ಕ್ಕೆ ಏರಿಕೆಯಾಗಿದೆ. ಉಕ್ರೇನ್ ವಿರುದ್ಧದ ಯುದ್ಧಕ್ಕೆ ಇಂಧನ ತುಂಬಿಸುತ್ತಿರುವ ರಷ್ಯಾದಿಂದ ಭಾರತ ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ವ್ಯಾಪಾರದ ವಿಷಯದಲ್ಲಿ ಭಾರತ ಅಮೆರಿಕಕ್ಕೆ ಉತ್ತಮ ಪಾಲುದಾರನಲ್ಲ. ಭಾರತ ಅಮೆರಿಕದೊಂದಿಗೆ ದೊಡ್ಡ ಪ್ರಮಾಣದ ವ್ಯಾಪಾರ ಮಾಡಿದರೂ, ಅಮೆರಿಕ ಆ ಮಟ್ಟದಲ್ಲಿ ಹಾಗೆ ಮಾಡುವುದಿಲ್ಲ. ಭಾರತವು ತನ್ನ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುತ್ತದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಡೋನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ತವಕ, ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಹೇಗೆ ನಡೆಯುತ್ತೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ