/newsfirstlive-kannada/media/media_files/2025/08/11/aishwarya-rai-2025-08-11-12-43-33.jpg)
ಬಾಲಿವುಡ್ ಸ್ಟಾರ್​ ದಂಪತಿ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಇಂದು ನಿನ್ನೆಯದಲ್ಲ. ಬಹಳ ವರ್ಷಗಳಿಂದಲೂ ಈ ಸುದ್ದಿ ಬಿಟೌನ್‌ನಲ್ಲಿ ಸದ್ದು ಮಾಡುತ್ತಲೇ ಬಂದಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್​ನ್ಯೂಸ್.. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ
/filters:format(webp)/newsfirstlive-kannada/media/media_files/2025/08/11/aishwarya-rai2-2025-08-11-12-59-43.jpg)
ತಮ್ಮ ದಾಂಪತ್ಯ ಜೀವನದ ಬಗ್ಗೆ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಇದುವರೆಗೂ ಯಾವುದೇ ಮಾತನಾಡದೆ ಇರೋದು ಪ್ರಮುಖ ಕಾರಣವಾಗಿದೆ. ಡಿವೋರ್ಸ್ ಗಾಸಿಪ್‌ಗಳ ಮಧ್ಯೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/08/11/aishwarya-rai4-2025-08-11-12-59-43.jpg)
ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಮಗಳಾದ ಆರಾಧ್ಯ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ಒಟ್ಟಾಗಿ ಕಾಣಿಸಿಕೊಂಡಿರೋ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
/filters:format(webp)/newsfirstlive-kannada/media/media_files/2025/08/11/aishwarya-rai3-2025-08-11-12-59-43.jpg)
ಕಾರಿನಿಂದ ಇಳಿಯುತ್ತಿದ್ದ ಐಶ್ವರ್ಯಾ ಕಪ್ಪು ಓವರ್ ಕೋಟ್, ಕಪ್ಪು ಕ್ಯಾಪ್ ಮತ್ತು ಕೆಂಪು ಲಿಪ್‌ಸ್ಟಿಕ್‌ನಲ್ಲಿ ನಗುತ್ತಾ ಆಚೆ ಬಂದರು. ಆಗ ಮಗಳು ಆರಾಧ್ಯ ಕೂಡ ಅಮ್ಮನಂತೆ ಬ್ಯೂಟಿಫುಲ್​ ಡ್ರೆಸ್​ಅಪ್​ ಮಾಡಿಕೊಂಡು ಕಂಗೊಳಿಸಿದ್ದಳು.
ಹೀಗೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವಂದತಿಗೆ ತೆರೆ ಎಳೆದಿದ್ದಾರೆ. ಈ ಸ್ಟಾರ್​ ಜೋಡಿ 2007 ಏಪ್ರಿಲ್ 20ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
/filters:format(webp)/newsfirstlive-kannada/media/media_files/2025/08/11/aishwarya-rai1-2025-08-11-12-59-43.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us