/newsfirstlive-kannada/media/media_files/2025/08/29/anushree19-2025-08-29-08-08-40.jpg)
ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ರೋಷನ್​ ಅವರು ಅನುಶ್ರೀ ಕೊರಳಿಗೆ ತಾಳಿ ಕಟ್ಟಿದ್ದಾರೆ.
ಇದನ್ನೂ ಓದಿ:ಕೈಕೊಟ್ಟ ಬುರುಡೆ ಗ್ಯಾಂಗ್​.. ಏಕಾಂಗಿಯಾದ ಸುಜಾತಾ ಭಟ್!
ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ನಿರೂಪಕಿ ಅನುಶ್ರೀ ಅವರ ಮದುವೆ ನಡೆದಿದೆ. ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಅನುಶ್ರೀ ವಿವಾಹ ಆಗಿದ್ದಾರೆ.
/filters:format(webp)/newsfirstlive-kannada/media/media_files/2025/08/28/anushree-marriage-4-2025-08-28-19-11-13.jpg)
ಇನ್ನೂ, ಈ ಜೋಡಿ ಮದುವೆಗೆ ರಾಜ್​ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ತರುಣ್​ ಸುಧೀರ್, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ನಟ ಶರಣ್​, ರಚಿತಾ ರಾಮ್ ತಾರಾ, ಕಿಶೋರ್, ಶಿವಣ್ಣ ಗೀತಾ ದಂಪತಿ, ಡಾಲಿ ಧನಂಜಯ್, ಸಂತೋಷ್ ಆನಂದ್ ರಾಮ್, ಪ್ರೇಮಾ, ಶ್ವೇತಾ ಚೆಂಗಪ್ಪ, ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್​, ವಿಜಯ್ ರಾಘವೇಂದ್ರ ಸೇರಿದಂತೆ ಸಾಕಷ್ಟು ನಟ, ನಟಿಯರು ಭಾಗಿಯಾಗಿ ನವಜೋಡಿ ಶುಭ ಹಾರೈಸಿದ್ದಾರೆ. ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.
/filters:format(webp)/newsfirstlive-kannada/media/media_files/2025/08/28/anushree-marriage-8-2025-08-28-19-10-02.jpg)
ಮದುವೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡುತ್ತಿದ್ದಾಗ ಅನುಶ್ರೀ ಅವರು ‘‘ಆ ನಟಿಯನ್ನು ನನ್ನ ಮದುವೆಗೆ ಬರುವಂತೆ ಮಾಡಿದ್ದು ಕೊರಗಜ್ಜನೇ" ಅಂತ ಹೇಳಿದ್ದಾರೆ. ಹೌದು, ಅನುಶ್ರೀ ಅವರು ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಡಿಂಪಲ್​ ಕ್ವೀನ್​ ರಚಿತಾ ಬಗ್ಗೆ ಮಾತಾಡಿದ್ದಾರೆ. ಫಸ್ಟ್​ ಟೈಮ್​ ರಚಿತಾ ರಾಮ್​ ಅವರು ಯಾವ ಕಾರ್ಯಕ್ರಮಗಳಿಗೂ ಹೋಗೋದಿಲ್ಲ. ನನಗೆ ನಂಬೋಕೆ ಆಗಿಲ್ಲ. ರಚಿತಾ ರಾಮ್​ ನಮ್ಮ ಮದುವೆಗೆ ಬಂದು ಆರ್ಶೀವಾದ ಮಾಡಿದ್ದಾರೆ. ಅವರು ಕೊರಗಜ್ಜ ಸ್ವಾಮಿಯನ್ನು ತುಂಬಾ ನಂಬುತ್ತಾರೆ. ಅದೇ ತರ ನಾನು ಕೊರಗಜ್ಜ ಅವರನ್ನು ನಂಬುತ್ತೇನೆ. ಅಜ್ಜನೇ ಅವರನ್ನು ನಮ್ಮ ಮದುವೆಗೆ ಕಳೆಸಿದ್ದಾರೆ. ರಚಿತಾ ಅವ್ರು ನಮ್ಮ ಮದುವೆಗೆ ಬಂದಿದ್ದು ಸಾಕಷ್ಟು ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us