/newsfirstlive-kannada/media/media_files/2025/12/30/anushree-2025-12-30-09-34-24.jpg)
ಸೋಶಿಯಲ್ ಮೀಡಿಯಾ ಮೂಲಕ ಸ್ಯಾಂಡಲ್​ವುಡ್​ ತಾರೆಯರ, ಅವರ ಕುಟುಂಬಸ್ಥರ ಬಗ್ಗೆ ಅವಹೇಳನಕಾರಿ ಮೆಸೇಜ್ ಮಾಡಿ ನಿಂದಿಸುತ್ತಿರೋ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಿದೆ. ನಟಿ ರಮ್ಯಾ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಇತ್ತೀಚೆಗೆ ಸುದೀಪ್ ಪುತ್ರಿ ಸಾನ್ವಿ ಅವರನ್ನು ಟ್ರೋಲ್ ಮಾಡಿದ ವಿಚಾರ ಭಾರೀ ಸುದ್ದಿಯಾಯಿತು. ಇಂಥ ಕೃತ್ಯಗಳ ವಿರುದ್ಧ ಇದೀಗ ಒಬ್ಬೊಬ್ಬರೆಯಾಗಿ ಧ್ವನಿ ಎತ್ತುತ್ತಿದ್ದಾರೆ. ಈ ಬೆನ್ನಲ್ಲೇ ತಮ್ಮನ್ನ ಟ್ರೋಲ್ ಮಾಡಿದ್ದ ಟ್ರೋಲ್ ಪೇಜ್ ಒಂದಕ್ಕೆ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಖಡಕ್ ಉತ್ತರ ಕೊಟ್ಟಿದ್ದಾರೆ.
‘ರಾಯಚೂರ್ ಮೀಮ್ಸ್ ಬ್ರೋ’ ಎನ್ನುವ ಟ್ರೋಲ್ ಪೇಜ್ ಅನುಶ್ರೀಯವರ ಎರಡು ವಿಡಿಯೋ ಕಂಬೈನ್ ಮಾಡಿ ಶೇರ್ ಮಾಡಿದೆ. ಅದಕ್ಕೆ ಕ್ಯಾಪ್ಶನ್ ಆಗಿ ಆಸ್ಕರ್ ಗೋಸ್ ಟು ಅನುಶ್ರೀ ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೇ ‘ಇಫ್ ಬಕೆಟ್ ಹಾವ್ ಮೌತ್, ವಾರೆ ಮೇರಿ ಲಡ್ಕಿ’ ಎಂದು ಕೂಡ ವಿಡಿಯೋದಲ್ಲಿ ಹಾಕಲಾಗಿದೆ.
ವಿಡೀಯೋದಲ್ಲಿ ಏನಿದೆ?
ಇತ್ತೀಚೆಗೆ ಅನುಶ್ರೀ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿಯವರ 45 ಚಿತ್ರದ ಇಂಟರ್ವ್ಯೂ ಮಾಡಿದರು. ಈ ವೇಳೆ ನನಗೆ ತಿರುಪತಿಗೆ ಮೊದಲ ಬಾರಿ ಹೋದಾಗ ತಿಮ್ಮಪ್ಪ ಕಾಣಿಸಲೇ ಇಲ್ಲ, ಬದಲಾಗಿ ಶ್ರೀನಿವಾಸ ಕಲ್ಯಾಣದ ಡಾ.ರಾಜಕುಮಾರ್ ಅವರೇ ಕಾಣಿಸಿದ್ದರು ಎಂದಿದ್ದಾರೆ. ಇನ್ನೊಂದು ಹಳೆಯ ವಿಡಿಯೋ ಕೂಡ ಟ್ರೋಲ್ ಮಾಡಿದ್ದು, ಅದರಲ್ಲಿ ಅನುಶ್ರೀ ಚಿರಂಜೀವಿ ಜೊತೆ ವೇದಿಕೆಯಲ್ಲಿ ಮಾತನಾಡುತ್ತಾ, ನಾನು ಎಲ್ಲೆ ಹೋದರೂ ಮಂಜುನಾಥನ ದರ್ಶನ ಮಾಡುವಾಗ ಕಾಣುವಂತಹ ಮುಖ ಚಿರಂಜೀವಿ ಅವರದ್ದೇ ಎಂದಿದ್ದಾರೆ. ಕೊನೆಯ ವಿಡಿಯೋದಲ್ಲಿ ಉಪೇಂದ್ರ ಅವರ ಉಪೇಂದ್ರ ಸಿನಿಮಾದ ‘ವಾರೆ ಮೇರಿ ಲಡ್ಕಿ, ನಿನ್ನಂಥವರು ಈ ದೇಶದಲ್ ಇದ್ದಾರ’ ಎನ್ನುವ ವಿಡಿಯೋ ಕೂಡ ಹಾಕಿ ಟ್ರೋಲ್ ಮಾಡಿದ್ದರು.
ಅನುಶ್ರೀ ಕೊಟ್ಟ ಉತ್ತರ ಏನು..?
‘ಹೌದು ಏನಿವಾಗ, ಓಬವ್ವ ಅಂದಾಗ ಜಯಂತಿ ಅಮ್ಮ ನೆನಪಾಗ್ತಾರೆ. ಕಿತ್ತೂರು ಚೆನ್ನಮ್ಮ ಅಂದಾಗ ಸರೋಜಮ್ಮ ನೆನಪಾಗ್ತಾರೆ. ಶ್ರೀನಿವಾಸ ಎಂದಾಗ ಅಪ್ಪಾಜಿ.. ಮಂಜುನಾಥ ಎಂದಾಗ ಚಿರಂಜೀವಿ ಸರ್… ಅದು ಹೆಮ್ಮೆ ಪಡೋ ವಿಷಯ. ಕಾಮಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಅನ್ನೋ ಹಾಗೆ, ನಿಮ್ಮ ಬುದ್ಧಿವಂತಿಕೆಗೆ ಹಾಗೆ ಕಾಣೋದು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: 2026ರಲ್ಲಿ ನಿಮ್ಮ ಕೆಲಸ ಅಪಾಯದಲ್ಲಿದೆ -AI ಎಚ್ಚರಿಕೆ ಗಂಟೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us