/newsfirstlive-kannada/media/post_attachments/wp-content/uploads/2025/07/BHAVANA_RAMANNA.jpg)
ಸ್ಯಾಂಡಲ್ವುಡ್ನ ಖ್ಯಾತ ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ (Bhavana Ramanna) ಅವರು ತಮ್ಮ 40ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. IVF ಮೊರೆ ಹೋಗಿದ್ದ ಭಾವನಾ ರಾಮಣ್ಣರಿಗೆ ಎರಡು ವಾರಗಳ ಹಿಂದೆ ಹೆರಿಗೆ ಆಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.
ಈ ಹಿಂದೆ ಗರ್ಭಿಣಿಯಾದ ಖುಷಿಯನ್ನು ಭಾವನಾ ರಾಮಣ್ಣ ಹೀಗೆ ಹಂಚಿಕೊಂಡಿದ್ದರು. ‘ತುಂಬು ಕುಟುಂಬದಲ್ಲಿ ಬೆಳೆದ ನನಗೆ ಈವರೆಗೂ ತಾಯಿ ಆಗುವ ಬಯಕೆ ಇರಲಿಲ್ಲ. ಆದರೆ ಈಗೀಗ ತಾಯಿ ಆಗಬೇಕು ಎನ್ನುವ ಹಂಬಲ ನನ್ನ ಕಾಡುತ್ತಲೇ ಇತ್ತು. ಹೀಗಾಗಿ ಐವಿಎಫ್ ಮೂಲಕ ಈಗ ಗರ್ಭಿಣಿಯಾಗಿದ್ದೇನೆ. ಮಕ್ಕಳ ಬಗ್ಗೆ ತುಂಬಾ ಕುತೂಹಲವಿದೆ. ಅಮ್ಮ ಆಗುವ ಉತ್ಸುಕದಲ್ಲಿದ್ದೇನೆ ಅಂತಾ ಹೇಳಿದ್ದರು. ಅಂತೆಯೇ ಇದೀಗ ಹೆಣ್ಣು ಮಗು ಜನಿಸಿದೆ.
ಮಗುವಿನ ಹೆಸರು ರಿವೀಲ್..!
ಗರ್ಭಿಣಿಯಾದ ಬಳಿಕ ನೀಡಿದ ಸಂದರ್ಶನ ಒಂದರಲ್ಲಿ ಭಾವನಾ ರಾಮಣ್ಣ ತಮ್ಮ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದರು. ಹೆಣ್ಣು ಮಗು ಹುಟ್ಟಿದರೆ ರುಕ್ಮಿಣಿ ಅಂತ ಇಡುತ್ತೇನೆ ಎಂದಿದ್ದರು. ಅಂತೆಯೇ ಈಗ ಹೆಣ್ಣು ಮಗು ಜನಿಸಿದೆ. ಮಕ್ಕಳಿಗೆ ಏನೆಂದು ಹೆಸರು ಇಡುವಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದ ಭಾವನಾ ಅವರು, ಈಗ ಹೆಣ್ಣು ಮಗುವಿನ ಹೆಸರನ್ನು ಮಾತ್ರ ಯೋಚನೆ ಮಾಡಿದ್ದೇನೆ. ಆಕೆಗೆ ನನ್ನ ಅಮ್ಮನ ಅಮ್ಮ ಅಂದ್ರೆ ಅಜ್ಜಿಯ ಹೆಸರಾಗಿರುವ ರುಕ್ಮಿಣಿ ಇಡಬೇಕು ಎಂದುಕೊಂಡಿದ್ದೇನೆ ಎಂದಿದ್ದರು.
ಇದನ್ನೂ ಓದಿ:ಹುಟ್ಟುವ ಮೊದಲೇ ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ನಟಿ ಭಾವನಾ ರಾಮಣ್ಣ.. ಏನದು..?
ಅವಳಿ ಮಕ್ಕಳ ಕನಸಿಗೆ ಆಘಾತ..
ಭಾವನಾ ರಾಮಣ್ಣ ತಾವು ಗರ್ಭಿಣಿ ಎಂಬ ವಿಚಾರವನ್ನು ತುಂಬಾ ಸ್ಪೆಷಲ್ಲಾಗಿ ಸಂಭ್ರಮಿಸಿದ್ದರು. ಅದಕ್ಕೆ ಕಾರಣ ಕೂಡ ಇತ್ತು. ಐವಿಎಫ್ ಟ್ರೀಟ್ಮೆಂಟ್ ಮೊರೆ ಹೋಗಿದ್ದ ಭಾವನಾರ ಗರ್ಭದಲ್ಲಿ ಟ್ವಿನ್ ಬೇಬಿಗಳಿದ್ದವು. ದುರಾದೃಷ್ಟವಶಾತ್ ಒಂದು ಮಗು ಹೆರಿಗೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿದೆ. ಹೀಗಾಗಿ ಅವಳಿ ಮಕ್ಕಳ ಕನಸು ಕಂಡಿದ್ದ ಭಾವನಾಗೆ ಆಘಾತವಾಗಿದೆ.
ಇದನ್ನೂ ಓದಿ:ನಟಿ ಭಾವನಾ ರಾಮಣ್ಣ ಅವರ ಅವಳಿ IVF ಶಿಶುಗಳಲ್ಲಿ ಒಂದು ಮಗು ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ