/newsfirstlive-kannada/media/media_files/2025/10/13/kavya-and-gilly-2025-10-13-09-35-09.jpg)
ಗಿಲ್ಲಿ ಕಾವ್ಯಾ Photograph: (ಕಲರ್ಸ್ ಕನ್ನಡ)
ಬಿಗ್ ಬಾಸ್ ಕನ್ನಡ 12ರಲ್ಲಿ (Bigg boss season 12) ಗಿಲ್ಲಿ ಹಾಗೂ ಕಾವ್ಯಾ ಶೈವ (Gilli and Kavya) ಜೋಡಿ ಎಲ್ಲರ ಗಮನ ಸೆಳೆಯುತ್ತಿದೆ.. ಕಳೆದ ವಾರ ‘ಮೂರು ಮುತ್ತಿ’ನ ಮೂಲಕ ವೀಕ್ಷಕರನ್ನ ಹೊಸ ಎಪಿಸೋಡಿಗೆ ಕರೆದುಕೊಂಡು ಹೋಗಿದ್ದ ಜೋಡಿ, ನಿನ್ನೆಯಿಂದ ವೀಕ್ಷಕರ ಎದೆಗೆ ‘ಲವ್ ಟಾನಿಕ್’ ಕೊಟ್ಟಿದೆ. ಇದಕ್ಕೆ ಸಾಕ್ಷಿ ಯಾಗಿದ್ದು SUPER SUNDAY WITH ಬಾದ್​ಷಾ ಸುದೀಪ್!
/filters:format(webp)/newsfirstlive-kannada/media/media_files/2025/10/13/kavya-and-gilly-2025-10-13-09-45-14.jpg)
ಹೌದು.. ಗಿಲ್ಲಿ ಹಾಗೂ ಕಾವ್ಯಾ ಶೈವ ಜೋಡಿಯ ಎಲ್ಲರ ಮನೆ ಮಾತಾಗಿದೆ. ಮೊನ್ನೆಯಷ್ಟೇ ಗಿಲ್ಲಿ ಕೊಟ್ಟ ಒಂದು ಮುತ್ತಿಗೆ ಕಾವ್ಯಾ ಮೂರು ಮುತ್ತು ಮರಳಿ ಕೊಡುವ ವಿಚಾರಕ್ಕೆ ಸುದ್ದಿಯಾದರು. ಗಿಲ್ಲಿ, ಕಾವ್ಯಾಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಆಗ ಕಾವ್ಯಾ ಪೂ.. ಪೂ.. ಎಂದು ಮೂರು ಬಾರಿ ಉಗುಳುವ ರೀತಿ ಆ್ಯಕ್ಷನ್ ಮಾಡಿದ್ದರು. ಇಬ್ಬರ ನಡುವಿನ ಈ ಕ್ಯೂಟ್​ ರಿಯಾಕ್ಷನ್ ಅಂಡ್ ಕೌಂಟರ್ ರಿಯಾಕ್ಷನ್ ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡಿತ್ತು..
ನಿನ್ನೆ ಆಗಿದ್ದೇನು..?
ನಿನ್ನೆಯ ಎಪಿಸೋಡ್​ನಲ್ಲಿ ಜಂಟಿಯಾಗಿ ಪ್ರವೇಶ ಮಾಡಿರುವ ಸ್ಪರ್ಧಿಗಳು ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದುಕೊಳ್ಳಲು ಗೇಮ್ ಆಡಿಸಿದರು. ಆಗ ಇಬ್ಬರನ್ನ ದೂರ ದೂರ ನಿಲ್ಲಿಸಿ ಪ್ರಶ್ನೆಗಳನ್ನು ಕಿಚ್ಚ ಕೇಳಿದರು. ಈ ವೇಳೆ ಸುದೀಪ್ ಕೇಳಿದ ಕೆಲವು ಪ್ರಶ್ನೆಗಳಿಗೆ ಇಬ್ಬರೂ ಒಂದೇ ರೀತಿಯ ಅನ್ಸರ್ ನೀಡಿದರು. ಆದರೆ ಕೊನೆಯಲ್ಲಿ ‘ಗಿಲ್ಲಿಗೆ ಕರೆಂಟ್ ಗರ್ಲ್​​ ಫ್ರೆಂಡ್ ಯಾರು..?’ ಎಂದು ಸುದೀಪ್ ಪ್ರಶ್ನೆ ಮಾಡ್ತಾರೆ.ಅದಕ್ಕೆ ಕಾವ್ಯ, ‘ಯಾರೂ ಇಲ್ಲ’ ಎಂದು ಬರೆದು ತೋರಿಸುತ್ತಾರೆ. ಆದರೆ ಗಿಲ್ಲಿ, ‘ಕಾವ್ಯ’ ಹೆಸರು ಬರೆದು ಕೊಂಚ ಸಮಯ ಯೋಚಿಸಿದ್ದಾರೆ. ನಂತರ ಅವರ ಹೆಸರನ್ನು ಅಳಿಸಿ, ‘ಪ್ರೊಸೆಸ್ಸಿಂಗ್’ ಎಂದು ಬರೆದಿದ್ದಾರೆ. ಅದು ಕಿಚ್ಚನ ಎದುರು ರಿವೀಲ್ ಆಗುತ್ತಿದ್ದಂತೆಯೇ ಕಾವ್ಯ, ಗಿಲ್ಲಿಯನ್ನು ದಿಟ್ಟಿಸಿ ನೋಡಿದ್ದಾರೆ. ಗಿಲ್ಲಿ ಕೊಟ್ಟ ಉತ್ತರ ಎಲ್ಲರಿಗೂ ಶಾಕ್​ ಆಗಿದೆ. ಕಾವ್ಯ ಕೂಡ ಶಾಕ್ ಆಗಿರುವ ರೀತಿಯಲ್ಲಿ ಗುರಾಯಿಸಿದ್ದು, ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ:Don't miss: ದೀಪಾವಳಿಗೆ ಮೆಗಾ ಆಫರ್​.. ಕೇವಲ 15 ಸಾವಿರಕ್ಕೆ ಸೂಪರ್ ಮೊಬೈಲ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ