/newsfirstlive-kannada/media/media_files/2025/09/30/kgf-2025-09-30-19-34-44.jpg)
ಭಾರತೀಯ ಚಿತ್ರರಂಗ ಇಂದು ವಿಶ್ವಮಟ್ಟದಲ್ಲಿ ದೊಡ್ಡ ಸಾಧನೆ ಮಾಡುತ್ತಿದ್ದು ತೆರೆ ಮೇಲೆ ಭಾರೀ ಬಜೆಟ್​ಸಿನಿಮಾಗಳು ಅಬ್ಬರಿಸುತ್ತಿವೆ. ಯಾವಾಗ ಕೆಜಿಎಫ್, ಬಾಹುಬಲಿ ವಿಶ್ವದ್ಯಾಂತ ಆರ್ಭಟಿಸಿದವೋ ಅಂದಿನಿಂದ ಪ್ಯಾನ್​ ಇಂಡಿಯಾ, ವರ್ಲ್ಡ್​ವೈಡ್​ ಮೂವಿ ಕ್ರೇಜ್ ಭಾರತದಲ್ಲಿ​ ಹೆಚ್ಚಾಗಿದೆ. ಇದು ಈಗಿರುವಾಗಲೇ 21ನೇ ಶತಮಾನದ ಅತ್ಯಂತ ಜನಪ್ರಿಯ ಸಿನಿಮಾ ಯಾವುದು ಎಂಬುದರ ಬಗ್ಗೆ ಕುರಿತು ವರದಿಯೊಂದು ಬಿಡುಗಡೆಯಾಗಿದೆ.
25 ವರ್ಷಗಳ ಭಾರತದ ಸಿನಿಮಾ ಸಂಭ್ರಮದ ವಿಶೇಷ ವರದಿಯನ್ನು ದೀ ಇಂಟರ್​ನೆಟ್​ ಮೂವಿ ಡಾಟಾಬೇಸ್​ (ಐಎಂಡಿಬಿ) ಬಿಡುಗಡೆ ಮಾಡಿದೆ. ಅಂದರೆ 2000 ರಿಂದ 2025ರ ಒಳಗೆ ಬಿಗ್ ಟ್ರೆಂಡ್​, ಅಂತರ್ಜಾಲದಲ್ಲಿ ಹೆಚ್ಚು ಹುಡುಕಲಾದ ಸ್ಟಾರ್ಸ್​ ಹಾಗೂ ಪಾಪುಲರ್​ ಸಿನಿಮಾ ಬಗ್ಗೆ ಇದು ಮಾಹಿತಿ ನೀಡಿದೆ. 21ನೇ ಶತಮಾನದ ಅತ್ಯಂತ ಜನಪ್ರಿಯ ಸಿನಿಮಾ ಎಂದರೆ ಬಾಹುಬಲಿ, ಲಗಾನ್, ಆರ್​ಆರ್​ಆರ್​, ಕಭೀ ಖುಷ್​ ಕಭೀ ಘಮ್, ದಂಗಲ್, ಕೆಜಿಎಫ್ ಎನ್ನುವುದು ನಿಮ್ಮ ಉತ್ತರ ಆಗಿದ್ರೆ ತಪ್ಪು.
ಐಎಂಡಿಬಿ ಪ್ರಕಾರ ಅತ್ಯಂತ ಜನಪ್ರಿಯ ಮೂವಿ ಎಂದರೆ ಅದು ರಾಜುಕುಮಾರ್ ಹಿರಾನಿ ನಿರ್ದೇಶನದಲ್ಲಿ ಅಮೀರ್ ಖಾನ್ ಅಭಿನಯದ 3 ಇಡಿಯಟ್ಸ್​ ಆಗಿದೆ. ಬಾಹುಬಲಿ, ಲಗಾನ್, ಆರ್​ಆರ್​ಆರ್​, ದಂಗಲ್​ನಂತಹ ಸಿನಿಮಾಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದೆ. 3 ಇಡಿಯಟ್ಸ್​ ಮೂವಿಯನ್ನು ಕೇವಲ ಭಾರತೀಯರು ಅಷ್ಟೇ ಅಲ್ಲ. ಬೇರೆ ಬೇರೆ ದೇಶದ ಜನರು ಕೂಡ ನೋಡಿ ಮೆಚ್ಚಿದ್ದಾರೆ.
3 ಇಡಿಯಟ್ಸ್ ಸಿನಿಮಾ ಐಎಂಡಿಬಿ 250 ಸಿನಿಮಾಗಳಲ್ಲಿ ಒಂದಾಗಿತ್ತು. ಹೆಚ್ಚು ಜನರು ವೀಕ್ಷಣೆ ಮಾಡಿದ್ದರಿಂದ ಲಿಸ್ಟ್​ನಲ್ಲಿ ಟಾಪ್​​ನಲ್ಲಿ ಸ್ಥಾನ ಪಡೆದಿದೆ. 100ಕ್ಕೆ 100 ಅಂಕಗಳನ್ನು ಪಡೆದು ವಿಶ್ವದ್ಯಾಂತ ಹೆಚ್ಚು ಜನರು ನೋಡಿದಂತೆ ಭಾರತೀಯ ಸಿನಿಮಾ ಆಗಿದೆ. ಹಿರಾನಿಯ ಈ ಸಿನಿಮಾವನ್ನು ಶೇಕಡಾ 80ರಷ್ಟು ಹೊರ ದೇಶಗಳ ಜನರು ನೋಡಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ 3 ಈಡಿಯಟ್ಸ್ ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ ಆಮಿರ್ ಖಾನ್, ಆರ್.ಮಾಧವನ್, ಶರ್ಮಾನ್ ಜೋಶಿ, ಕರೀನಾ ಕಪೂರ್, ಬೋಮನ್ ಇರಾನಿ ಹಾಗೂ ಮೋನಾ ಸಿಂಗ್ ಅಭಿನಯ ಮಾಡಿದ್ದರು. ಇದು ಸ್ಟುಡೆಂಟ್ಸ್​ಗೆ ಹೇಳಿ ಮಾಡಿಸಿದಂತ ಮೂವಿ. ಅದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಇಷ್ಟವಾಗುವ ಸಿನಿಮಾವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ