/newsfirstlive-kannada/media/media_files/2025/09/22/rishab_shetty_rukmini_vasanth-2025-09-22-22-13-20.jpg)
ಡಿವೈನ್ ಸ್ಟಾರ್ ರಿಷಭ್​ ಶೆಟ್ಟಿ ಡೈರೆಕ್ಷನ್ ಮಾಡಿ, ತಾವೇ ನಟಿಸಿರುವ ಕಾಂತಾರ ಪ್ರೀಕ್ವೆಲ್ ಮೂವಿ ರಿಲೀಸ್​ಗೆ ಕೇವಲ ಒಂದು ದಿನ ಮಾತ್ರ ಅಡ್ಡ ಇದೆ. ಸಿನಿಮಾ ರಿಲೀಸ್​​ಗೂ ಒಂದು ದಿನ ಮೊದಲೇ ಪ್ರೀಮಿಯರ್ ಶೋ ಇರಲಿದ್ದು ಇದಕ್ಕಾಗಿ ಪ್ರೇಕ್ಷಕರು ಕಾತರದಿಂದ್ದಾರೆ. ಈಗಾಗಲೇ ಮೂವಿಯ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಸಾವಿರ ಕೋಟಿ ರೂಪಾಯಿಗಳ ನಿರೀಕ್ಷಿಸಲಾಗುತ್ತಿದೆ.
3 ವರ್ಷಗಳ ಹಿಂದೆ ತೆರೆಗಪ್ಪಳಿಸಿದ್ದ ಕಾಂತಾರ-2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದರಿಂದ ಈಗ ಪ್ರೀಕ್ವೆಲ್ ಕುರಿತು ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಹಾಗೂ ಹಾಡು ಜನರ ಮನ ಗೆದ್ದಿವೆ. ಕರ್ನಾಟಕ ಮಾತ್ರವಲ್ಲ, ಆಂಧ್ರ, ತಮಿಳುನಾಡು, ಕೇರಳ, ತೆಲಂಗಾಣ ಸೇರಿಂದತೆ ಉತ್ತರ ಭಾರತದಲ್ಲೂ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಬಿಗ್‌ಬಾಸ್​ಗೆ ಎಂಟ್ರಿ ದಿನವೇ ಎಲಿಮಿನೇಷನ್.. ರಕ್ಷಿತಾರನ್ನ ಹೊರಗೆ ಕಳಿಸಿದ್ದಕ್ಕೆ ಅಸಮಾಧಾನ!
ಅಕ್ಟೋಬರ್​ 2ರಂದು ಬೆಳ್ಳಿ ತೆರೆಯ ಮೇಲೆ ರಿಷಭ್ ಶೆಟ್ಟಿ ಅವರ ಅಬ್ಬರ ಶುರುವಾಗಲಿದ್ದು 2025ರ ಚಿತ್ರಗಳ ಪೈಕಿ ಕಾಂತಾರ ಪ್ರೀಕ್ವೆಲ್​ ಮೂವಿ 1,000 ಕೋಟಿ ರೂಪಾಯಿ ಗಳಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಏಕೆಂದರೆ ಗಾಂಧಿ ಜಯಂತಿ, ದಸರಾ ಸಂಭ್ರಮ ಎಂದು ರಜೆಗಳು ಇವೆ. ಇದರ ಜೊತೆಗೆ ಕಾಂತಾರ ಸಿನಿಮಾ ಮೊದಲೇ ಸಂಪ್ರದಾಯ, ದೈವತ್ವ, ಮನುಷ್ಯ ಹಾಗೂ ಪ್ರಕೃತಿ ನಡುವಿನ ಸುಂದರ ಕಥೆ ಅಭಿಮಾನಿಗಳನ್ನ ಆಳವಾಗಿ ಮುಟ್ಟುತ್ತದೆ. ಹೀಗಾಗಿ ಕಾಂತಾರ ಸಿನಿಮಾ ದಾಖಲೆ ಮಟ್ಟದಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
2022ರಲ್ಲಿ ರಿಲೀಸ್ ಆಗಿದ್ದ ಕಾಂತಾರ-2 ಸಿನಿಮಾ ಒಂದು ಪ್ರದೇಶಕ್ಕೆ ಅಂದರೆ ಕರ್ನಾಟಕದ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾದಂತೆ ಆಗಿತ್ತು. ಆದರೆ ಆಮೇಲೆ ಸಿನಿಮಾ ನೋಡಿದ ಅಭಿಮಾನಿಗಳು ದೊಡ್ಡ ಮಟ್ಟದ ಯಶಸ್ಸು ಕೊಟ್ಟಿದ್ದರು. ಸಿನಿಮಾ ಚೆನ್ನಾಗಿದೆ ಎನ್ನುವ ಬಾಯಿ ಮಾತು ಎಲ್ಲೆಡೆ ಹರಡಿತು. ಇದರಿಂದ ವರ್ಲ್ಡ್​ವೈಡ್ ಆಗಿ ಕಾಂತಾರ-2 ಸಿನಿಮಾ ಒಟ್ಟು 400 ಕೋಟಿ ರೂಪಾಯಿಗಳನ್ನು ಬಾಚಿತ್ತು. ಇದೇ ಭರವಸೆಯೇ ಈಗ 1,000 ಕೋಟಿ ರೂಪಾಯಿಗೆ ತಂದು ನಿಲ್ಲಿಸಿದೆ ಕಾಂತಾರ ಪ್ರೀಕ್ವೆಲ್​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ