Advertisment

ಬಿಗ್‌ಬಾಸ್​ಗೆ ಎಂಟ್ರಿ ದಿನವೇ ಎಲಿಮಿನೇಷನ್‌.. ರಕ್ಷಿತಾರನ್ನ ಹೊರಗೆ ಕಳಿಸಿದ್ದಕ್ಕೆ ಅಸಮಾಧಾನ!

ಟ್ವಿಸ್ಟ್‌ಗಳಿವೆಯೋ ಅನ್ನೋ ಕುತೂಹಲದಲ್ಲಿದ್ದ ಪ್ರೇಕ್ಷಕರಿಗೆ ಬಿಗ್‌ಬಾಸ್‌ ಆರಂಭವಾದ ಮೊದಲ ದಿನವೇ ಬಿಗ್‌ ಟ್ವಿಸ್ಟ್‌ ನೀಡಿದ್ದಾರೆ. ಮಂಗಳೂರು ಮೂಲದ ಬಾಂಬೆ ನಿವಾಸಿ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆಯೇ ಎಲಿಮಿನೇಷನ್‌ ಕೂಡ ಆಗಿದ್ದಾರೆ.

author-image
Bhimappa
RAKSHITHA_SUDEEP
Advertisment

ಎಂಟ್ರಿ ದಿನವೇ ಬಿಗ್‌ಬಾಸ್‌, ಸ್ಪರ್ಧಿಗಳಿಗೆ ದೊಡ್ಡ ಶಾಕ್‌ ನೀಡಿದ್ದಾರೆ. ಬಿಗ್‌ಬಾಸ್‌ ಹಿಸ್ಟರಿಯಲ್ಲೇ ಎಂಟ್ರಿ ದಿನವೇ ಎಲಿಮಿನೇಷನ್‌ ನಡೆದಿದೆ. ಮಂಗಳೂರು ಮೂಲದ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ಜನರಿಗೆ ಹತ್ತಿರವಾಗೋದಿಕ್ಕೂ ಮೊದಲೇ ದೂರ ಆಗಿದ್ದಾರೆ. 

Advertisment

ಸೆಪ್ಟೆಂಬರ್​ 28, ಭಾನುವಾರದಂದು ಬಿಗ್‌ಬಾಸ್‌ ಕನ್ನಡ ಸೀಸನ್‌ 12ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಅದೇನೇನೂ ಟ್ವಿಸ್ಟ್‌ಗಳಿವೆಯೋ ಅನ್ನೋ ಕುತೂಹಲದಲ್ಲಿದ್ದ ಪ್ರೇಕ್ಷಕರಿಗೆ ಬಿಗ್‌ಬಾಸ್‌ ಆರಂಭವಾದ ಮೊದಲ ದಿನವೇ ಬಿಗ್‌ ಟ್ವಿಸ್ಟ್‌ ನೀಡಿದ್ದಾರೆ. ಮಂಗಳೂರು ಮೂಲದ ಬಾಂಬೆ ನಿವಾಸಿ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆಯೇ ಎಲಿಮಿನೇಷನ್‌ ಕೂಡ ಆಗಿದ್ದಾರೆ. 

ಬಿಗ್‌ಬಾಸ್‌ನ ಇಷ್ಟೊಂದು ಸೀಸನ್‌ಗಳಲ್ಲಿ ಇದೇ ಮೊದಲ ಬಾರಿ ಹೀಗೆ ಮನೆಗೆ ಕಾಲಿಡುತ್ತಿದ್ದಂತೆಯೇ ಸ್ಪರ್ಧಿಯೊಬ್ಬರು ಹೊರನಡೆದಂತಾಗಿದೆ. ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟ ಸ್ಪರ್ಧಿಗಳನ್ನು ಒಂಟಿ ಮತ್ತು ಜಂಟಿ ಎಂದು ಎರಡು ಗ್ರೂಪ್‌ ಮಾಡಲಾಗಿತ್ತು. ಇದರಲ್ಲಿ 6 ಸ್ಪರ್ಧಿಗಳು ಒಂಟಿಯಾಗಿ 5 ಸ್ಪರ್ಧಿಗಳು ಜಂಟಿಯಾಗಿ, ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಹಾಗೂ ಸ್ಪಂದನಾ ಮಾತ್ರ ಅತಂತ್ರವಾಗಿ ಉಳಿದಿದ್ದರು. 

ಅತಂತ್ರರಾಗಿದ್ದವರಲ್ಲಿ ಇಬ್ಬರು ಸೇಫ್‌ ಆಗಿ ಒಬ್ಬರನ್ನು ಎಲಿಮಿನೇಟ್‌ ಮಾಡುವ ಅವಕಾಶವನ್ನು ಬಿಗ್‌ಬಾಸ್‌ ಒಂಟಿ ತಂಡದಲ್ಲಿದ್ದ ಸ್ಪರ್ಧಿಗಳಿಗೆ ನೀಡಿದ್ದರು. ಅತಂತ್ರರಾಗಿದ್ದ ಸ್ಪರ್ಧಿಗಳು ತಾವು ಬಿಗ್‌ಬಾಸ್‌ ಮನೆಯಲ್ಲಿ ಯಾಕೆ ಉಳಿದುಕೊಳ್ಳಬೇಕು ಎನ್ನುವ ಕಾರಣವನ್ನು ನೀಡಲೂ ಅವಕಾಶ ನೀಡಲಾಗಿತ್ತು. ಕೊನೆಯಲ್ಲಿ ಮಾಳು ಹಾಗು ಸ್ಪಂದನಾ ಅವರನ್ನು ಮನೆಯಲ್ಲಿ ಉಳಿಸಿಕೊಂಡು ರಕ್ಷಿತಾರನ್ನು ಎಲಿಮಿನೇಷನ್‌ ಮಾಡೋ ನಿರ್ಧಾರ ಮಾಡಲಾಯಿತು. 

Advertisment

ಇದನ್ನೂ ಓದಿ: ಬಿಗ್ ಬಾಸ್ 12ರ ಕಂಟೆಸ್ಟೆಂಟ್ಸ್​​ ಯಾರು ಯಾರು.. 9 ಸ್ಪರ್ಧಿಗಳ ಫುಲ್ ಡಿಟೇಲ್ಸ್​ ಇಲ್ಲಿದೆ! ​

Rakshita shetty bigg boss

ಬಂದ ಮೊದಲ ದಿನವೇ ಎಕ್ಸಿಟ್‌ ಆಗಿದ್ದರೂ ರಕ್ಷಿತಾ ಇದನ್ನು ತುಂಬಾ ಪಾಸಿಟಿವ್‌ ಆಗಿಯೇ ತೆಗೆದುಕೊಂಡರು. ಎಲ್ಲರೂ ಈ ಮನೆಯಿಂದ ಹೋಗುವವರೇ ನಾನು ಮೊದಲ ದಿನವೇ ಹೋಗುತ್ತಿದ್ದೇನೆ. ಒಂದು ದಿನಕ್ಕಾದರೂ ನನಗಿಲ್ಲಿ ಇರೋದಕ್ಕೆ ಅವಕಾಶ ಸಿಕ್ಕಿದೆಯಲ್ಲ ಎಂದು ಸಂತೋಷದಿಂದಲೇ ಮನೆಯಿಂದ ಹೊರ ನಡೆದಿದ್ದಾರೆ. 

ಬಿಗ್‌ಬಾಸ್‌ನ ಬಿಗ್‌ಟ್ವಿಸ್ಟ್‌ನ್ನು ರಕ್ಷಿತಾ ಒಪ್ಪಿಕೊಂಡಿದ್ದಾರೆ 333ಹೀಗೆ, ಬಂದ ದಿನವೇ ಆದ ಎಲಿಮಿನೇಷನ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದೆ. ರಕ್ಷಿತಾ ಶೆಟ್ಟಿ ಇನ್ನೂ ಚಿಕ್ಕ ವಯಸ್ಸಿನ ಪ್ರತಿಭೆ. ಬಾಂಬೆಯಲ್ಲಿ ಬೆಳೆದಿದ್ದರೂ ಮಂಗಳೂರು ಶೈಲಿಯ ಮಾತು, ಹಾಸ್ಯದಿಂದ ಯೂಟ್ಯೂಬ್‌ನಲ್ಲಿ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಅವರಿಗೆ ಈ ರೀತಿ ಅವಮಾನ ಮಾಡಬಾರದಿತ್ತು ಎಂದು ಜನರು ಕಿಡಿಕಾರಿದ್ದಾರೆ. ಈ ಎಲಿಮಿನೇಷನ್‌ ರಿಯಲ್ಲಾ ಅಥವಾ ಇನ್ನೇನಾದ್ರೂ ಬಿಗ್‌ ಟ್ವಿಸ್ಟ್‌ ಕಾದಿದೆಯಾ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದುನೋಡ್ಬೇಕಷ್ಟೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bigg Boss Kannada 12 Kichcha Sudeepa BBK12
Advertisment
Advertisment
Advertisment