/newsfirstlive-kannada/media/media_files/2025/09/28/bbk12_sudeep-2025-09-28-20-43-34.jpg)
ಬಿಗ್​​ ಬಾಸ್ ಸೀಸನ್ 12 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದ್ದು ಇಂದಿನಿಂದ ಕನ್ನಡಿಗರಿಗೆ ಮಸ್ತ್ ಮನರಂಜನೆ ನೀಡಲಿದೆ. ಬಿಗ್​​ ಬಾಸ್ ಕಾರ್ಯಕ್ರಮ ಅದ್ಧೂರಿಯಾಗಿ ಜಗಮಗಿಸುತ್ತಿದ್ದು ಕಿಚ್ಚ ಸುದೀಪ್ ನಿರೂಪಣೆ ಎಲ್ಲದಕ್ಕೂ ಶಕ್ತಿಯಾಗಿದೆ. ಇದೀಗ ಕಂಟೆಸ್ಟೆಂಟ್​​ಗಳ ಹೆಸರು, ಫೋಟೋ ಹಾಗೂ ವಿಡಿಯೋವನ್ನು ಒಬ್ಬೊಬ್ಬರದ್ದಾಗೇ ರಿವೀಲ್ ಮಾಡಲಾಗುತ್ತಿದೆ. ಆ ಸ್ಪರ್ಧಿಗಳು ಯಾರು ಯಾರು?.
ಕನ್ನಡದಲ್ಲಿ ಬಿಗ್ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಪ್ರತಿ ವರ್ಷವೂ ಸಾಕಷ್ಟು ಮನ್ನಣೆ ಪಡೆದಿದೆ. ಅದೇ ರೀತಿ ಸೀಸನ್​-12ಕ್ಕೆ ಮೊದಲು ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಹಾಗೂ ಮಲ್ಲಮ್ಮ ಹೆಸರುಗಳನ್ನು ಘೋಷಣೆ ಮಾಡಲಾಗಿತ್ತು. ಇನ್ನುಳಿದ ಸ್ಪರ್ಧಿಗಳು ಯಾರು ಯಾರು ಎನ್ನುವುದು ಕ್ಯೂರಿಸಿಟಿ ಬೆನ್ನಲ್ಲೇ ಇನ್ನಷ್ಟು ಕಂಟೆಸ್ಟೆಂಟ್​ ಹೆಸರುಗಳು ರಿವೀಲ್ ಮಾಡಲಾಗಿದೆ.
ಕಂಟೆಸ್ಟೆಂಟ್​ 2ನೇಯವರಾಗಿ ಕಾವ್ಯ ಅವರು ಎಂಟ್ರಿಕೊಟ್ಟಿದ್ದಾರೆ. ಇವರು ಇತ್ತೀಚೆಗೆ ಬಿಡುಗಡೆಯಾಗಿದ್ದ ಕೊತ್ತಲವಾಡಿ ಸಿನಿಮಾದಲ್ಲಿ ಹೀರೋಯಿನ್ ಆಗಿ ಅಭಿನಯ ಮಾಡಿದ್ದರು.
3ನೇ ಸ್ಪರ್ಧಿ ಎಂದರೆ ಡಾಗ್ ಸತೀಶ್. ಇವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ನಾಯಿಗಳನ್ನು ಖರೀದಿ ಹಾಗೂ ಮಾರಾಟ ಮಾಡುತ್ತಾರೆ.
ನಾಲ್ಕನೇ ಕಂಟೆಸ್ಟೆಂಟ್ ಎಂದರೆ ಅದು ಇಡೀ ಕರುನಾಡನ್ನು ನಗಿಸಿ ಮನೆ ಮಾತಾಗಿದ್ದ ಕಾಮಿಡಿ ಕಲಾವಿದ ಗಿಲ್ಲಿ ನಟ ದೊಡ್ಮನೆಗೆ ಎಂಟ್ರಿಯಾಗಿದ್ದಾರೆ.
ಇನ್ನು 5ನೇ ಸ್ಪರ್ಧಿಯಾಗಿ ಆ್ಯಕ್ಟಿಂಗ್, ಆ್ಯಂಕರಿಂಗ್ ಹಾಗೂ ರಿಯಾಲಿಟಿ ಶೋಗಳ ಮೂಲಕ ಜನರ ಮನಗೆದ್ದಂತಹ ಜಾನ್ವಿ ಅವರು ಬಿಗ್ ಬಾಸ್​ ಮನೆಗೆ ಆಗಮಿಸಿದ್ದಾರೆ.
ಆರನೇ ಸ್ಪರ್ಧಿಯಾಗಿ ಸ್ಟೈಲಿಶ್ ಲುಕ್, ಮ್ಯಾನರಿಸಂನಿಂದ ಧನುಷ್ ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ.
7ನೇಯವರು ಆಗಿ ಕಾಮಿಡಿ ಕಲಾವಿದ ಚಂದ್ರಪ್ರಭ ಅವರು ಮನೆಗೆ ಬಂದಿದ್ದಾರೆ. ಚಂದ್ರಪ್ರಭ ಇದ್ದಲ್ಲಿ ನಗುವಿಗೆ ಕೊರತೆ ಇಲ್ಲ ಎನ್ನುವುದು ವಿಶೇಷ.
ಆ್ಯಕ್ಟಿಂಗ್‌ನಲ್ಲಿ ಸೈ ಅನ್ನಿಸಿಕೊಂಡ ಮಂಜು ಭಾಷಿಣಿ ಬಿಗ್ ಮನೆಗೆ ಆಗಮಿಸಿದ್ದು 8ನೇ ಸ್ಪರ್ಧಿಯಾಗಿದ್ದಾರೆ.
9ನೇ ಕಂಟೆಸ್ಟೆಂಟ್​ ಆಗಿ ಹುಡುಗರ ಮನಗೆದ್ದ ಗೊಂಬೆ ರಾಶಿಕಾ ಅವರು ಮನೆಯವರ ಮನಸನ್ನೂ ಕದೀತಾರಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ