/newsfirstlive-kannada/media/media_files/2025/09/21/team_india-9-2025-09-21-19-31-27.jpg)
2025ರ ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಬದ್ಧವೈರಿ ಪಾಕಿಸ್ತಾನ ಮೊದಲ ಬ್ಯಾಟಿಂಗ್ ಮಾಡಲಿದೆ.
ದುಬೈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ ಫೈನಲ್​ ಪಂದ್ಯದಲ್ಲಿ ಪಾಕ್​ ವಿರುದ್ಧ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಸಲ್ಮಾನ್ ಅಲಿ ಆಘಾ ನೇತೃತ್ವದ ಪಾಕಿಸ್ತಾನ ತಂಡ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿದೆ.
ಈ ಟೂರ್ನಿಯಲ್ಲಿ ಈ ಮೊದಲೇ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ಗ್ರೂಪ್ ಸ್ಟೇಜ್​ನಲ್ಲಿ ಮುಖಾಮುಖಿ ಆಗಿದ್ದವು. ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೂರ್ಯಕುಮಾರ್ ಪಡೆ ಗೆಲುವು ಪಡೆದಿತ್ತು. ಇದಾದ ಮೇಲೆ ಸೂಪರ್​-4 ರಲ್ಲೂ ಭಾರತ ಗೆದ್ದಿತ್ತು. ಈಗ ಪಾಕಿಸ್ತಾನ ವಿರುದ್ಧ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ ಇದೆ.
ದುಬೈ ಕ್ರೀಡಾಂಗಣಕ್ಕೆ ಸೂರ್ಯಕುಮಾರ್ ನೇತೃತ್ವದಲ್ಲಿ ಭಾರತ ತಂಡ ಇಳಿದಿದ್ದು ಅಭಿಷೇಕ್ ಶರ್ಮಾ, ಶುಭ್​ಮನ್​ ಗಿಲ್ ಫೈನಲ್​ ಪಂದ್ಯದಲ್ಲಿ ಆರಂಭಿಕರಾಗಿ ಕ್ರೀಸ್​​​ಗೆ ಆಗಮಿಸಲಿದ್ದಾರೆ. ಸೂರ್ಯಕುಮಾರ್ ಎಂದಿನಂತೆ ತಮ್ಮ ಸ್ಲಾಟ್​ 3ನೇ ಬ್ಯಾಟರ್​ ಆಗಿ ಮೈದಾನಕ್ಕೆ ಬರಲಿದ್ದಾರೆ. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ತಂಡದಲ್ಲಿ ಯಾವ ಸ್ಥಾನದಲ್ಲಿ ಕ್ರೀಸ್​ಗೆ ಬರುತ್ತಾರೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಈ ಮೊದಲಿನ ಸ್ಥಾನದಲ್ಲಿ ಬೇರೆ ಬೇರೆ ಸ್ಲಾಟ್​ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್​ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ.
ಇಂದಿನ ಫೈನಲ್​ ಪಂದ್ಯದಲ್ಲಿ ಮುಖ್ಯ ಬದಲಾವಣೆ ಎಂದರೆ ಸ್ಟಾರ್ ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯರನ್ನ ಹೊರಗಿಡಲಾಗಿದೆ. ಪಾಂಡ್ಯ ಬದಲಿಗೆ ಯಂಗ್ ಬ್ಯಾಟರ್ ರಿಂಕು ಸಿಂಗ್​ಗೆ ಚಾನ್ಸ್​ ನೀಡಲಾಗಿದೆ. ಇನ್ನೊಬ್ಬ ಆಲ್​ರೌಂಡರ್ ಅಕ್ಷರ್ ಪಟೇಲ್, ಶಿವಂ ದುಬೆ​ ತಂಡದ ಶಕ್ತಿಯಾಗಿ ಹೊರ ಹೊಮ್ಮುವುದು ಅವಶ್ಯಕವಾಗಿದೆ.
ನಾಯಕ ಸೂರ್ಯಕುಮಾರ್ ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಬಲಿಷ್ಠವಾಗಿದೆ. ವರುಣ್ ಚಕ್ರವರ್ತಿ ಎದುರಾಳಿಗಳಿಗೆ ಕಾಡುವುದು ದಟ್ಟವಾಗಿದೆ. ಪಾಕಿಸ್ತಾನದ ವಿರುದ್ಧ ಸ್ಪಿನ್ನರ್​ ಕುಲ್​ದೀಪ್ ಯಾದವ್ ದೊಡ್ಡ ಮ್ಯಾಜಿಕ್ ಮಾಡಿದರೆ ಗೆಲುವು ಸುಲಭ.
ಟೀಮ್ ಇಂಡಿಯಾ ಪ್ಲೇಯಿಂಗ್​- 11
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲ್​ದೀಪ್ ಯಾದವ್.