/newsfirstlive-kannada/media/media_files/2025/09/28/sudeep_bbk12-2025-09-28-18-35-22.jpg)
ಕನ್ನಡ ಬಿಗ್ ಬಿಗ್​ ರಿಯಾಲಿಟಿ ಶೋ ಬಿಗ್​​ಬಾಸ್ ಸೀಸನ್ 12 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದೆ. ಕಲರ್ಸ್​ ಕನ್ನಡ ವಾಹಿನಿಯ ಅದ್ಧೂರಿ ಕಾರ್ಯಕ್ರಮ ಜಗಮಗಿಸುತ್ತಿದ್ದು ಕಿಚ್ಚ ಸುದೀಪ್ ಅವರು ನ್ಯೂ ಸ್ಟೈಲ್​, ನ್ಯೂ ಲುಕ್​ನಲ್ಲಿ ಮಿಂಚಿದ್ದಾರೆ. ಇದರ ಜೊತೆಗೆ ಕಂಟೆಸ್ಟೆಂಟ್​​ಗಳು ಒಬ್ಬೊಬ್ಬರಾಗಿ ವೇದಿಕೆಗೆ ಆಗಮಿಸಿ ದೊಡ್ಮನೆಗೆ ಸೇರಿಕೊಳ್ಳುತ್ತಿದ್ದಾರೆ. ಆ ಸ್ಪರ್ಧಿಗಳು ಯಾರು ಯಾರು ಎನ್ನುವ ಕಾತರ, ಕುತೂಹಲ ನಿಮ್ಮಲ್ಲಿದ್ದರೇ ಈ ಆರ್ಟಿಕಲ್ ಗಮನಿಸಿ.
ಬಿಗ್​​ಬಾಸ್ ಸಮಾರಂಭದಲ್ಲಿ ಸುದೀಪ್ ಸಿನಿಮಾಗಳ ಸಾಂಗ್​ಗಳೇ ಸೌಂಡ್​ ಮಾಡುತ್ತಿದ್ದು ಕಿಚ್ಚ ಸುದೀಪ್ ಕೂಡ ಸಖತ್ ಆಗಿಯೇ ಹೊಸ ಲುಕ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ದೊಡ್ಮನೆ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಬಿಗ್ ಬಾಸ್​ ಮನೆ ಇಡೀ ಕರ್ನಾಟಕದ ಸಂಪ್ರದಾಯ, ಇತಿಹಾಸ, ಪ್ರಾದೇಶಿಕತೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ನಿರ್ಮಾಣ ಮಾಡಲಾಗಿದೆ. ಮನೆಯಂತೂ ಈ ಬಾರಿ ಕನ್ನಡಿಗರ ಹೃದಯ ಗೆದ್ದಿದೆ ಎಂದೇ ಹೇಳಬಹುದು.
ಈ ಬಾರಿ ಹೊಸತನದಿಂದ ದೊಡ್ಮನೆ ಕಂಗೊಳಿಸುತ್ತಿದ್ದು ಕಾಮನ್ ಮ್ಯಾನ್​ಗಳಿಗೆ ಬಿಗ್​​ಬಾಸ್ ಮನೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಬಿಗ್​​ಬಾಸ್​ನ ಅಧಿಕೃತ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಡುವುದಕ್ಕೂ ಮೊದಲೇ ಕಾಮನ್ ಮ್ಯಾನ್​ಗಳು ಎಂಟ್ರಿ ಕೊಟ್ಟು ಒಳಗಿನ ಅಂದ ನೋಡಿ ಸಖತ್ ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ: ಕನ್ನಡ BIGG BOSS ಇತಿಹಾಸದಲ್ಲೇ ಫಸ್ಟ್ ಟೈಮ್.. ಈ ಎಲ್ಲವೂ ವೆರಿ ವೆರಿ ಡಿಫರೆಂಟ್!
ಬಿಗ್ ಬಾಸ್ ಸೆಟ್ ಅನ್ನು ಮೈಸೂರು ಅರಮನೆಯ ಥೀಮ್​ನಲ್ಲಿ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಮೈಸೂರು ದಸರಾ ನಡೆಯುವಾಗಲೇ ಶೋ ಆರಂಭ ಆಗುತ್ತಿರುವುದು ಏನೋ ಮೈಸೂರು ಅರಮನೆಯ ಥೀಮ್​ನಲ್ಲೇ ಸೆಟ್ ನಿರ್ಮಿಸಲಾಗಿದೆ. ಕಿಚ್ಚ ಸುದೀಪ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಮನೆಯನ್ನು ಎಲ್ಲರಿಗೂ ಪರಿಚಯಿಸಿದರು. ಮನೆಯ ವೈಭವ ಕರ್ನಾಟಕವನ್ನು ಪ್ರತಿನಿಧಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ