/newsfirstlive-kannada/media/media_files/2025/09/28/sudeep-2025-09-28-16-23-12.jpg)
ಬಿಗ್‌ಬಾಸ್ ಅಂದ್ರೆ ವೈರೈಟಿಸ್ ಆಫ್ ಕಂಟೆಸ್ಟೆಂಟ್ಸ್. ಆದ್ರೆ, ಈ ಬಾರಿ ಕೇವಲ ಸ್ಪರ್ಧಿಗಳು ಮಾತ್ರ, ಹಲವು ವಿಚಾರಗಳು ಕೂಡ ತುಂಬಾನೇ ಭಿನ್ನವಾಗಿವೆ. ಆ ಡಿಫರೆಂಟ್, ವೆರಿ ವೆರಿ ಡಿಫರೆಂಟ್ ಪಾಯಿಂಟ್ಸ್ ಏನು ಎನ್ನುವುದು ಇಲ್ಲಿದೆ.
ನಿಮಗೆಲ್ಲಾ ಗೊತ್ತಿರಬಹುದು. ಈ ಬಾರಿಯ ಬಿಗ್‌ಬಾಸ್ ಲೋಗೋ ರಿವೀಲ್ ಆಗಿದ್ದು ಆಗಸ್ಟ್ 15. ಅಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ. ವಿಶೇಷ ಅಂದ್ರೆ ಲೋಗೋ ಲಾಂಚ್ ಮಾಡಿದವರು, ವೀಕ್ಷಕರು. ಅದು ಸ್ವಾತಂತ್ರೋತ್ಸವ ದಿನದಂದೇ.
ಇದಲ್ಲೊಂದು ವಿಶೇಷತೆಯಿದೆ. ಇದೆಲ್ಲಾ ಫಸ್ಟ್ ಟೈಮ್ ಬಿಗ್‌ಬಾಸ್‌ನಲ್ಲಿ ಆಗಿರೋದು. ಜೊತೆಗೆ ನಮ್ಮ ನೆಲದ ಸಂಸ್ಕೃತಿ, ನೆಲದ ಸೊಗಡನ್ನ ಈ ಬಾರಿ ಕಾಯ್ದುಕೊಂಡು ಬರಲಾಗಿದೆ. ಅದಕ್ಕೆ ಮುನ್ನುಡಿ ಬರೆದಿದ್ದೇ.. ಈ ಲೋಗೋ ಲಾಂಚ್ ಇವೆಂಟ್.
ಇಷ್ಟೆ ಅಲ್ಲಾ, ಬಿಗ್‌ಬಾಸ್ ಲೋಗೋದಲ್ಲಿ ಫಸ್ಟ್ ಟೈಮ್ ಕನ್ನಡ ಸಂಖ್ಯೆಯನ್ನ ಬಳಸಲಾಗಿದೆ. ಇದು ಕೂಡ ಫಾರ್ ದಿ ಫಸ್ಟ್ ಟೈಮ್. ಇದೆಲ್ಲಾಕ್ಕಿಂತ ಮುಖ್ಯವಾಗಿ ಬಿಗ್‌ಬಾಸ್ ಮನೆಯೇ ನಮ್ಮ ನೆಲ, ಜಲ, ಸಂಸ್ಕೃತಿಯನ್ನ ಎತ್ತಿ ಸಾರುತ್ತಿದೆ. ನಮ್ಮ ನಾಡಿನ ಎಲ್ಲಾ ಪ್ರಾಂತ್ಯಗಳನ್ನ ಮಹತ್ವವನ್ನ ಈ ಬಾರಿಯ ಬಿಗ್‌ಬಾಸ್ ಮನೆ ಎತ್ತಿ ಹಿಡಿದಿದೆ. ಇದು ಕೂಡ ಮೊಟ್ಟ ಮೊದಲನೇ ಬಾರಿಗೇ ನಡೀತಿರೋದು.
ಅಲ್ಲದೇ, ಫಾರ್ ದಿ ಫಸ್ಟ್ ಟೈಮ್. ಆ್ಯಕ್ಚುಲ್ ಕಂಟೆಸ್ಟೆಂಟ್‌ವೊಬ್ಬರು ಮನೆಯೊಳಗೆ ಹೋಗೋ ಮುನ್ನವೇ ಜನರ ಬಳಿ ಹೋಗಿದ್ದರು. ಅದು ಮಾಸ್ಕ್ ಧರಿಸಿಕೊಂಡು. ಅವರು ಮತ್ತ್ಯಾರು ಅಲ್ಲ, ಕಾಕ್ರೋಚ್ ಸುಧಿ. ಇದರ ಜೊತೆಗೆ ಈ ಬಾರಿ ಬಿಗ್‌ಬಾಸ್ ಸ್ಪರ್ಧಿಗಳಿಗಿಂತಲೂ ಮೊದಲು, ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಮನೆ ಪ್ರವೇಶಿಸಿ, ಕಂಟೆಂಟ್ ಕ್ರಿಯೇಟ್ ಮಾಡಿದ್ದಾರೆ. ಇದು ಕೂಡ ಫಸ್ಟ್ ಟೈಮೇ.
ಇದನ್ನೂ ಓದಿ:BIGG BOSS 12; ಸೋಶಿಯಲ್ ಮೀಡಿಯಾ ಸ್ಟಾರ್​ ದೊಡ್ಮನೆಗೆ ಎಂಟ್ರಿ.. ಯಾರು ಈಕೆ?
ಹೀಗೇ, ಬಿಗ್‌ಬಾಸ್ ಸೀಸನ್ 12 ಹಲವು ವೈಶಿಷ್ಯತೆಗಳಿಂದ ಕೂಡಿದ್ದು, ಭರ್ಜರಿಯಾಗಿ ಶುರುವಾಗ್ತಿದೆ. ಸದ್ಯ ಉಳಿದಿರೋ ಪ್ರಶ್ನೆ ಒಂದೇ. ಸ್ಪರ್ಧಿಗಳು ಹಂಗಾಮಾ ಮಾಡ್ತಾರಾ ಅನ್ನೋದು? ಇದಕ್ಕೆ ನಿಮ್ಮಿಂದಲೇ ನಾವು ಸದ್ಯದಲ್ಲಿಯೇ ಉತ್ತರ ಪಡೀತಿವಿ. ಜಸ್ಟ್ ಕಾಯ್ತೀರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ