/newsfirstlive-kannada/media/media_files/2025/09/28/rakshitha-2025-09-28-16-05-08.jpg)
ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್- 12 ಇಂದು ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಯಾರು ಯಾರು ಎನ್ನುವುದು ವೀಕ್ಷಕರಲ್ಲಿ ಕುತೂಹಲ ಮೂಡಿದೆ. ಬಿಗ್​ಬಾಸ್​ ಹೌಸ್​ ಒಳಗೆ ಹೋಗುವ ಕಂಟೆಸ್ಟೆಂಟ್​ಗಳನ್ನು ಕಿಚ್ಚ ಸುದೀಪ್ ಅವರು ಇಂದು ಪರಿಚಯ ಮಾಡಿಕೊಡಲಿದ್ದಾರೆ. ಸದ್ಯ ಇದೀಗ ಕಿಚ್ಚ ಸುದೀಪ್ ಅವರು ಮತ್ತೊಬ್ಬ ಸ್ಪರ್ಧಿಗೆ ಸ್ವಾಗತ ಕೋರಿದ್ದಾರೆ.
ಈಗಾಗಲೇ ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಹಾಗೂ ಮಲ್ಲಮ್ಮ ಬಿಗ್​ ಬಾಸ್​ ಕಂಟೆಸ್ಟೆಂಟ್​ಗಳು ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇನ್ನುಳಿದ ಸ್ಪರ್ಧಿಗಳು ಯಾರು ಯಾರು ಎನ್ನುವುದು ಕ್ಯೂರಿಸಿಟಿ ಬೆನ್ನಲ್ಲೇ ಕಿಚ್ಚ ಸುದೀಪ್​ 4ನೇ ಸ್ಪರ್ಧಿಯನ್ನು ವೇದಿಕೆಗೆ ಆಹ್ವಾನಿಸಿ ವೆಲ್​ಕಮ್ ಮಾಡಿದ್ದಾರೆ. ಮಂಗಳೂರು ಹುಡುಗಿಯ ಮೀನು ಸಾರು ಬಗ್ಗೆ ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಅಲೆ ಎಬ್ಬಿಸಿದ್ದ ಕರಾವಳಿ ಪ್ರತಿಭೆ ಯುವತಿ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಕಂಟೆಸ್ಟೆಂಟ್ ಆಗಿ ಇದೀಗ ಎಂಟ್ರಿಯಾಗಿದ್ದಾರೆ. ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರನ್ನು ಮಾತನಾಡಿಸಿದ್ದಾರೆ. ಈಗಾಗಲೇ ಈ ಕಂಟೆಸ್ಟೆಂಟ್​ ರಕ್ಷಿತಾ ಶೆಟ್ಟಿ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ನಿಮಗೆಲ್ಲ ಗೊತ್ತಿರುತ್ತದೆ.
ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರನ್ನು ಮಾತನಾಡಿಸಿದ್ದು, ಕರಾವಳಿ ರಕ್ಷಿತಾ ಶೆಟ್ಟಿ ಅಡುಗೆ ತುಂಬಾ ಚೆನ್ನಾಗಿ ಮಾಡ್ತಾರೆ ಎಂದಿದ್ದಾರೆ. ಮೀನು ಸಾರಿಗೆ ಸಕ್ಕರೆ ಹಾಕ್ತಾರೆ ಎಂದು ಸುದೀಪ್ ಕೇಳಿದ್ದಕ್ಕೆ ರಕ್ಷಿತಾ ತಲೆ ಅಲ್ಲಾಡಿಸಿದ್ದಾಳೆ. ತಾರೈ, ಕೆಂಪು ಹಂಚು, ಹನಿಸಿನಾ ಮೀನು ಸಾರಿಗೆ ಹಾಕ್ತಾರೆ ಎಂದು ರಕ್ಷಿತಾ ಹೇಳಿದ್ದಾರೆ. ನಿಮ್ಮ ಅಡುಗೆ ತಿಂದು ತುಂಬಾ ಚೆನ್ನಾಗಿದೆ ಎಂದು ಹೇಳಿದವರು ಯಾರು ಅಂತ ಸುದೀಪ್ ಕೇಳಿದ್ದಕ್ಕೆ ರಕ್ಷಿತಾ ಯಾರು ಇಲ್ಲ ಎಂದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಸುದೀಪ್ ಸೇರಿ ವೀಕ್ಷಕರೆಲ್ಲ ನಗಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ