/newsfirstlive-kannada/media/media_files/2025/08/09/ramya-2025-08-09-08-58-31.jpg)
ಬೆಂಗಳೂರು: ದರ್ಶನ್ ಅಭಿಮಾನಿಗಳು ಅಶ್ಲೀಲ ಕಮೆಂಟ್ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ನಟಿ ರಮ್ಯಾ ಅವರು ಪೊಲೀಸ್ ಆಯುಕ್ತರಿಗೆ ಇತ್ತೀಚೆಗೆ ದೂರು ನೀಡಿದ್ದರು. ಈ ಸಂಬಂಧ ಎ1 ಆರೋಪಿಯನ್ನು ಸಿಸಿಬಿ (Central Crime Branch) ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕೆ.ಆರ್ ಪುರಂ ಮೂಲದ ಆರೋಪಿ ಪ್ರಮೋದ್ ಗೌಡನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನೇ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾನೆ. ಈತ ತನ್ನ ಗೆಳೆಯನ ಫೋನ್ನಲ್ಲಿ ಇನ್ಸ್ಟಾಗ್ರಾನ್ ಅಕೌಂಟ್ ಕ್ರಿಯೇಟ್ ಮಾಡಿದ್ದನು. ಪ್ರಮೋದ್ ಗೌಡ 87 ಎಂಬ ಅಕೌಂಟ್ನಿಂದ ಕಮೆಂಟ್ ಮಾಡುತ್ತಿದ್ದನು. ಅದರಂತೆ ಇದೇ ಅಕೌಂಟ್ನಿಂದ ನಟಿ ರಮ್ಯಾ ಅವರಿಗೆ ಅಶ್ಲೀಲ ಕಮೆಂಟ್ಗಳನ್ನು ಮಾಡಿದ್ದನು.
ಇದನ್ನೂ ಓದಿ:ಶ್ರೀಗುರು ರಾಘವೇಂದ್ರ ಸ್ವಾಮಿ 354ನೇ ಆರಾಧನಾ ಮಹೋತ್ಸವ.. ಸುಬುಧೇಂದ್ರ ತೀರ್ಥರಿಂದ ವಿದ್ಯುಕ್ತ ಚಾಲನೆ
ಸದ್ಯ ಆರೋಪಿ ಪ್ರಮೋದ್ನನ್ನು ವಶಕ್ಕೆ ಪಡೆದು ಕರೆತಂದಿರುವ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಮೊದಲು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇದಾದ ಮೇಲೆ ಕಸ್ಟಡಿಗೆ ಪಡೆಯಲಿದ್ದಾರೆ. ಕಸ್ಟಡಿಗೆ ಪಡೆದು ಆರೋಪಿಯನ್ನು ತನಿಖೆ ಮಾಡಲಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರ ತನಿಖೆ ಮುಂದುವರೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ