/newsfirstlive-kannada/media/media_files/2025/09/01/kiccha-sudeep-1-2025-09-01-17-18-31.jpg)
ಕಿಚ್ಚ ಸುದೀಪ್
ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ಕುರಿತು ಅವಹೇಳನಕಾರಿ ಕಮೆಂಟ್ ಮಾಡಿದವರ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ದಾಖಲಾಗಿದೆ.
ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಸೇನಾ ಸಮಿತಿ ದೂರು ನೀಡಿದೆ. ಸುದೀಪ್ ಅವರ ಫೇಕ್ ಫೊಟೋ ಬಳಕೆ ಮಾಡಿ ಕಮೆಂಟ್ ಮಾಡಲಾಗಿದೆ. ಟ್ವಿಟರ್ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುವ ಮೂಲಕ ನಟನ ಘನತೆಗೆ ದಕ್ಕೆ ತಂದಿದ್ದಾರೆ. ಇದರಿಂದ ನೇರವಾಗಿ ಸ್ಟಾರ್ ವಾರ್ಗೆ ಕಾರಣವಾಗ್ತಿದೆ. ಈ ಹಿನ್ನಲೆ ಫೇಕ್ ಅಕೌಂಟ್ ಹೋಲ್ಡರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನವೀನ್ ಗೌಡ ಅನ್ನೋರು ದೂರು ನೀಡಿದ್ದಾರೆ.
ಇದನ್ನೂ ಓದಿ:Asia Cup: ಓಮನ್ ವಿರುದ್ಧದ ಪಂದ್ಯದಿಂದ ಬುಮ್ರಾ ಔಟ್! ಏನಾಯ್ತು..?
ದೂರಿನಲ್ಲಿ ಏನಿದೆ..?
ಇವರಿಗೆ,
ಪೋಲಿಸ್ ಆಯುಕ್ತರು,
ಬೆಂಗಳೂರುವಿಷಯ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ರವರ ವಿರುದ್ಧ " X" (ಟ್ವಿಟ್ಟರ್) ಸಾಮಾಜಿಕ ಜಾಲತಾಣದಲ್ಲಿ ವಿಕೃತ ವೈಯಕ್ತಿಕ ನಿಂದನೆ ವಿರುದ್ಧ ದೂರು.
ಮಾನ್ಯರೇ,
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತನಾಮರಾಗಿರುವ ಶ್ರೀ ಕಿಚ್ಚ ಸುದೀಪ ರವರ ವಿರುದ್ಧ" X" (ಟ್ವಿಟ್ಟರ್) ಸಾಮಾಜಕ ಜಾಲತಾಣದಲ್ಲಿ ವಿಕೃತವಾದ ವೈಯಕ್ತಿಕ ನಿಂದನೆ ಮಾಡುವ / ಹೀಯಾಳಿಸುವ ಫೇಕ್ ಫೋಟೋಶಾಪ್ ವೀಡಿಯೋ ಹಾಗು ಫೋಟೋಗಳನ್ನು ಹರಿಬಿಡುವುದು ಅಶ್ಲೀಲ ಪದಬಳಕೆ ಮಾಡುವುದು ನಿರಂತರವಾಗಿ ನಡೆಯುತ್ತಿದೆ.
ಇದು ಕನ್ನಡ ಚಿತ್ರರಂಗದ ಕಲಾವಿದರ ನಡುವಿನ ಸಮರಕ್ಕೆ ಮತ್ತು ಸ್ಟಾರ್ ವಾರ್ಗೆ ಕಾರಣವಲ್ಲದೆ ಅಭಿಮಾನಿಗಳ ಆಕ್ರೋಶಕ್ಕೆ ನೇರ ಕಾರಣವಾಗಿದೆ.
ಈ ದೂರಿನ ಜೊತೆಗೆ ಲಗ್ಗತ್ತಿಸಲಾಗಿರುವ ಅಂತಹ ಹಲವಾರು ಖಾತೆಗಳು ಹಾಗು ಪೋಸ್ಟ್‌ಗಳ ವಿವರವನ್ನು ಪರೀಶೀಲಿಸಿ ಅವರ ವಿರುದ್ಧ ಈ ಕೂಡಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇವೆ.
ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ
ಕಿಚ್ಚ ಸುದೀಪ ಸೇನಾ ಸಮಿತಿ ರೀ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ