/newsfirstlive-kannada/media/media_files/2025/09/18/jasprit-bumrah-2025-09-18-09-17-35.jpg)
ಏಷ್ಯಾಕಪ್‌ನಲ್ಲಿ ಓಮನ್ ವಿರುದ್ಧದ ಕೊನೆಯ ಗ್ರೂಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಭಾರೀ ಬದಲಾವಣೆ ಮಾಡುವ ಸಾಧ್ಯತೆ ಇದೆ. ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಆಡುತ್ತಿಲ್ಲ ಎಂಬ ಮಾಹಿತಿ ಇದೆ.
ಭಾರತ ತಂಡ ಈಗಾಗಲೇ ಸೂಪರ್-4 ಹಂತಕ್ಕೆ ತಲುಪಿದೆ. ಮುಂದಿನ ಪಂದ್ಯಗಳು ಸೆಪ್ಟೆಂಬರ್ 21, 24 ಮತ್ತು 26 ರಂದು ನಡೆಯಲಿವೆ. ಮುಂದಿನ ಹಂತದ ಪಂದ್ಯಗಳು ಪ್ರಮುಖವಾಗಿರೋದ್ರಿಂದ ಓಮನ್ ವಿರುದ್ಧದ ಪಂದ್ಯದಿಂದ ಅವರಿಗೆ ರೆಸ್ಟ್ ನೀಡಲಾಗುತ್ತಿದೆ. ಫಿಟ್ನೆಸ್ ದೃಷ್ಟಿಯಿಂದ ಬುಮ್ರಾಗೆ ವಿಶ್ರಾಂತಿ ನೀಡಲು ತಂಡದ ಮ್ಯಾನೇಜ್ಮೆಂಟ್ ಮುಂದಾಗಿದೆ.
ಇದನ್ನೂ ಓದಿ:RCB ಆಟಗಾರರ ಡೆಡ್ಲಿ ಬ್ಯಾಟಿಂಗ್.. ರಜತ್, ಸಾಲ್ಟ್, ಟಿಮ್ ಡೇವಿಡ್, ಬೆಥಲ್ ಸಿಡಿಲಬ್ಬರ.!
ಟೀಂ ಇಂಡಿಯಾ ಫೈನಲ್ ತಲುಪಿದರೆ ಸೆಪ್ಟೆಂಬರ್ 28 ರಂದು ಆಡಬೇಕಾಗುತ್ತದೆ. ಇದರರ್ಥ ಭಾರತ ಏಳು ದಿನಗಳಲ್ಲಿ ಸತತ 4 ಕಠಿಣ ಪಂದ್ಯಗಳನ್ನು ಆಡಬೇಕಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಬುಮ್ರಾ ಅವರಂತಹ ಶ್ರೇಷ್ಠ ಬೌಲರ್‌ನ ಫಿಟ್‌ನೆಸ್ ಮತ್ತು ಶಕ್ತಿ ತಂಡಕ್ಕೆ ತುಂಬಾನೇ ಮುಖ್ಯವಾಗಲಿದೆ. ಹೀಗಾಗಿ ಓಮನ್ ವಿರುದ್ಧ ಪಂದ್ಯದಿಂದ ಅವರಿಗೆ ವಿನಾಯತಿ ನೀಡಲಾಗುತ್ತಿದೆ.
ಬುಮ್ರಾ ಸ್ಥಾನಕ್ಕೆ ಇಬ್ಬರು ಫೈಟ್..!
ಓಮನ್ ವಿರುದ್ಧ ಆಡಬೇಕೋ, ಬೇಡವೋ ಅಂತಾ ಬುಮ್ರಾ ಇನ್ನೂ ನಿರ್ಧರಿಸಿಲ್ಲ. ಒಂದು ವೇಳೆ ಬುಮ್ರಾ ಆಡದಿದ್ದರೆ, ಅವರ ಸ್ಥಾನಕ್ಕೆ ಇಬ್ಬರು ಆಟಗಾರರ ಮಧ್ಯೆ ಪೈಪೋಟಿ ಇದೆ. ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಅಂದ್ಹಾಗೆ ಓಮನ್ ವಿರುದ್ಧ ನಾಳೆ ಭಾರತ ಸೆಣಸಾಟ ನಡೆಸಲಿದೆ.
ಇದನ್ನೂ ಓದಿ:ದೈವಭಕ್ತಿ ಮೆರೆದ KL ರಾಹುಲ್.. ಪ್ರಸಿದ್ಧ ದೇಗುಲಕ್ಕೆ ಆನೆ ಉಡುಗೊರೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ