/newsfirstlive-kannada/media/media_files/2025/09/16/rajat_phil_salt-2025-09-16-15-54-35.jpg)
ಐಪಿಎಲ್ ಮುಗಿದು ಎಲ್ಲರು ತಣ್ಣಗಾಗಿದ್ದಾರೆ. ಆದ್ರೆ, ಸೀಸನ್-18 ಐಪಿಎಲ್ನ ಚಾಂಪಿಯನ್ ಆರ್ಸಿಬಿ ತಂಡದ ಆಟಗಾರರು ಮಾತ್ರ, ಫೈರಿ ಮೂಡ್ನಲ್ಲಿದ್ದಾರೆ. ದಿನೇ ದಿನೇ ಆರ್ಸಿಬಿ ಆಟಗಾರರ ಅಬ್ಬರ ಹೆಚ್ಚಾಗ್ತಾನೇ ಇದೆ. ವಿಶ್ವ ಕ್ರಿಕೆಟ್ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಹೇಗಿದೆ ಆರ್ಸಿಬಿ ಆಟಗಾರರ ಅಬ್ಬರ?.
ಸೀಸನ್-18 ಐಪಿಎಲ್ ಮುಗಿದು ಮೂರು ತಿಂಗಳೇ ಆಗಿದೆ. ಸೀಸನ್-19ರ ಐಪಿಎಲ್ ಟೂರ್ನಿಗಾಗಿ ಫ್ರಾಂಚೈಸಿಗಳು ತೆರೆ ಮರೆಯಲ್ಲಿ ಪ್ಲಾನ್ ರೂಪಿಸ್ತಿವೆ. ಈ ವಿಚಾರದಲ್ಲಿ ಆರ್ಸಿಬಿ ಸೈಲೆಂಟ್ ಆಗಿದ್ರೂ, ಆರ್ಸಿಬಿ ಆಟಗಾರರು ಮಾತ್ರ ಫುಲ್ ವೈಲೆಂಟ್ ಮೂಡ್ನಲ್ಲಿದ್ದಾರೆ. ಭರ್ಜರಿ ಫಾರ್ಮ್ನಲ್ಲಿರುವ ಆರ್ಸಿಬಿ ಆಟಗಾರರು, ಐಪಿಎಲ್ ಮುಗಿದ್ಮೇಲೆ ಬಿರುಗಾಳಿ ಎಬ್ಬಿಸ್ತಿದ್ದಾರೆ. ಆಟದಿಂದಲೇ ವಿಶ್ವ ಕ್ರಿಕೆಟ್ ಲೋಕದಲ್ಲಿ ಹವಾ ಸೃಷ್ಟಿಸಿದ್ದಾರೆ. ಈ ಪೈಕಿ ಫಸ್ಟ್ ಒನ್ ಫಿಲ್ ಸಾಲ್ಟ್.
ಐಪಿಎಲ್ ಬಳಿಕವೂ ನಿಂತಿಲ್ಲ ಫಿಲ್ ಸಾಲ್ಟ್ ಅಬ್ಬರ..!
ಐಪಿಎಲ್ನಲ್ಲಿ ಆರ್ಸಿಬಿ ಪರ ಅಬ್ಬರಿಸಿದ್ದ ಫಿಲ್ ಸಾಲ್ಟ್, ವಿಶ್ವ ಕ್ರಿಕೆಟ್ನಲ್ಲೂ ಬ್ಯಾಟಿಂಗ್ ದಂಡಯಾತ್ರೆ ಮುಂದುವರಿಸಿದ್ದಾರೆ. ಐಪಿಎಲ್ ಬಳಿಕ ದಿ ಹೆಂಡ್ರೆಡ್ ಲೀಗ್ನಲ್ಲಿ ಬ್ಯಾಟಿಂಗ್ ದರ್ಬಾರ್ ನಡೆಸಿದ್ದ ಫಿಲ್ ಸಾಲ್ಟ್, ಈಗ ಸೌತ್ ಆಫ್ರಿಕಾ ಎದುರಿನ ಪಂದ್ಯದಲ್ಲೂ ರೌದ್ರವತಾರ ಮರೆದಿದ್ದಾರೆ.
ಸೌತ್ ಆಫ್ರಿಕಾ ಎದುರಿನ 2ನೇ ಟಿ20 ಪಂದ್ಯದಲ್ಲಿ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಸಿದ ಫಿಲ್ ಸಾಲ್ಟ್, 39 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದ್ದಾರೆ. ಶತಕದ ಬಳಿಕವೂ ಅಬ್ಬರಿಸಿರುವ ಸಾಲ್ಟ್, 60 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್‌ನೊಂದಿಗೆ ಅಜೇಯ 141 ರನ್ ಚಚ್ಚಿದ್ದಾರೆ. ಸಾಲ್ಟ್ರ ಈ ಸೌತ್ ಆಫ್ರಿಕಾ ಸ್ಟನ್ ಆಗಿದೆ.
ಬೀಸ್ಟ್ ಮೂಡ್ನಲ್ಲಿ ಆರ್ಸಿಬಿಯ ಜೇಕಬ್ ಬೆಥಲ್..!
ಜೇಕಬ್ ಬೆಥಲ್, ಐಪಿಎಲ್ನಲ್ಲಿ ಸಿಕ್ಕ 2 ಅವಕಾಶಗಳಲ್ಲೂ ಅದ್ಬುತ ಆಟವಾಡಿದ್ದರು. ಸ್ಪೋಟಕ ಬ್ಯಾಟಿಂಗ್ನಿಂದ ಎಲ್ಲರ ಮನ ಗೆದ್ದಿದ್ದ ಬೆಥಲ್, ಸದ್ಯ ಸೌತ್ ಆಫ್ರಿಕಾ ಎದುರಿನ ಸರಣಿಯಲ್ಲಿ ಬೀಸ್ಟ್ ಮೂಡ್ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದಾರೆ. ಸೌತ್ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ 1 ಶತಕ, 1 ಅರ್ಧಶತಕ ಸಿಡಿಸಿದ್ರು. ಸೌತಾಂಪ್ಟನ್ನಲ್ಲಿ ಸಿಡಿಸಿದ್ದ 110 ರನ್ಗಳ ಸ್ಪೋಟಕ ಆಟ ಅದ್ಭುತವಾಗಿತ್ತು. ಸದ್ಯ ಟಿ20 ಸರಣಿಯಲ್ಲೂ 14 ಎಸೆತಗಳಲ್ಲಿ ಬೆಥಲ್, 26 ರನ್ ಚಚ್ಚಿದ್ದಾರೆ.
5 ಪಂದ್ಯ.. 282 ರನ್.. ಟಿಮ್ ಡೇವಿಡ್ ಡೆಡ್ಲಿ ಬ್ಯಾಟಿಂಗ್..!
ಫಿಲ್ ಸಾಲ್ಟ್ ಬಳಿಕ ವಿಶ್ವ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು, ಆಸ್ಟ್ರೇಲಿಯಾದ ಟಿಮ್ ಡೇವಿಡ್.. ಆರ್ಸಿಬಿ ಪರ ರಣಭೀಕರ ಬ್ಯಾಟಿಂಗ್ ನಡೆಸಿದ್ದ ಟಿಮ್ ಡೇವಿಡ್, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಎದುರಿನ ಟಿ20 ಸರಣಿಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ವಿಂಡೀಸ್ ಎದುರು ಕೇವಲ 37 ಎಸೆತಗಳಲ್ಲೇ 102 ರನ್ ಚಚ್ಚಿದ್ದ ಟಿಮ್ ಡೇವಿಡ್, ಕೊನೆ 5 ಪಂದ್ಯಗಳಿಂದ ಗಳಿಸಿದ ರನ್ 282 ಹಾಗೂ ಸ್ಟ್ರೈಕ್ರೇಟ್ 210.44 ಇದೆ.
ದುಲೀಪ್ ಟ್ರೋಫಿಯಲ್ಲಿ ಧೂಳ್ ಎಬ್ಬಿಸ್ತಿದ್ದಾರೆ ರಜತ್!
ಆರ್ಸಿಬಿಯ ಫಿಲ್ ಸಾಲ್ಟ್, ಜೇಕಬ್ ಬೆಥಲ್ ವಿಶ್ವ ಕ್ರಿಕೆಟ್ನಲ್ಲಿ ಅಬ್ಬರಿಸ್ತಿದ್ರೆ. ನಾಯಕ ರಜತ್ ಪಾಟಿದಾರ್ ದೇಶಿ ಕ್ರಿಕೆಟ್ನಲ್ಲಿ ಧೂಳ್ ಎಬ್ಬಿಸ್ತಿದ್ದಾರೆ. ನಾರ್ಥ್ ಈಸ್ಟ್ ಝೋನ್ ಎದುರು ಕ್ರಮವಾಗಿ 125, 66 ರನ್ ಗಳಿಸಿದ್ದ ರಜತ್, ವೆಸ್ಟ್ ಝೋನ್ ಎದುರಿನ ಪಂದ್ಯದಲ್ಲೂ 77 ರನ್ ಚಚ್ಚಿದ್ದಾರೆ. ಫೈನಲ್ ಪಂದ್ಯದಲ್ಲಿ ಸೌತ್ ಝೋನ್ ವಿರುದ್ಧ 101 ರನ್ ಚಚ್ಚಿ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಅಷ್ಟೇ ಅಲ್ಲ, ನಾಯಕನಾಗಿಯೂ ತಂಡವನ್ನು ಯಶಸ್ಸಿನ ದಡ ಸೇರಿಸಿದ್ದಾರೆ.
ಇದನ್ನೂ ಓದಿ:ಹೊಸ ಗರ್ಲ್ಫ್ರೆಂಡ್ ಜೊತೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ.. ಯಾರು ಈ ಬ್ಯೂಟಿ?
ಮಹಾರಾಜ ಟ್ರೋಫಿಯಲ್ಲಿ ದೇವದತ್ ದರ್ಬಾರ್!
ಇಂಜುರಿಯಿಂದ ಅರ್ಧಕ್ಕೆ ಟೂರ್ನಿಯನ್ನು ಮೊಟಕುಗೊಳಿಸಿದ್ದ ದೇವದತ್ ಪಡಿಕ್ಕಲ್, ಮಹಾರಾಜ ಟ್ರೋಫಿಯಲ್ಲಿ ರನ್ ಸುನಾಮಿ ಎಬ್ಬಿಸಿದ್ದಾರೆ. 12 ಪಂದ್ಯಗಳಿಂದ 449 ರನ್ ಕೊಳ್ಳೆ ಹೊಡೆದಿದ್ದ ಪಡಿಕ್ಕಲ್, 154ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಮಹಾರಾಜ ಟೂರ್ನಿಯ ರನ್ ಮಹಾರಾಜನಾಗಿ ಮರೆದಾಡಿದ್ದಾರೆ.
ಇವ್ರಷ್ಟೇ ಅಲ್ಲ, ಐಪಿಎಲ್ನಲ್ಲಿ ಕಂಪ್ಲೀಟ್ ಫೇಲ್ ಆಗಿದ್ದ ಲಿಯಾಮ್ ಲಿವಿಂಗ್ ಸ್ಟೋನ್ ಸಹ ಬ್ಯಾಕ್ ಟು ಫಾರ್ಮ್ ಆಗಿದ್ದಾರೆ. ದಿ ಹಂಡ್ರೆಡ್ ಲೀಗ್ನಲ್ಲಿ ಅಬ್ಬರಿಸಿದ್ದ ಸ್ಟೋನ್, ಈಗ ಟಿ20 ಬ್ಲಾಸ್ಟ್ನಲ್ಲೂ 180.47ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. ವಿಕೆಟ್ ಬೇಟೆಯಾಡುತ್ತಾ ತಂಡದ ಗೆಲುವಿನಲ್ಲಿ ಪಾತ್ರವಹಿಸ್ತಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಚಾಂಪಿಯನ್ ಆಗುವಲ್ಲಿ ಶ್ರಮವಹಿಸಿದ್ದ ಈ ಆಟಗಾರರು, ಈಗ ವಿಶ್ವ ಕ್ರಿಕೆಟ್ನಲ್ಲೂ ಅದೇ ಲಯ ಮುಂದುವರಿಸುತ್ತಾ ಸೆನ್ಸೇಷನ್ ಸೃಷ್ಟಿಸಿರುವುದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ