/newsfirstlive-kannada/media/media_files/2025/09/15/hardik_pandya_mahieka_sharma-2025-09-15-19-26-38.jpg)
ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಒಂದಿಲ್ಲೊಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಈ ಸಲ ಕ್ರಿಕೆಟ್ಗಾಗಿ ಅಲ್ಲ, ಬದಲಾಗಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಇದೀಗ ಹೊಸ ಗರ್ಲ್ಫ್ರೆಂಡ್ ಜೊತೆ ಸ್ಟಾರ್ ಆಲ್ರೌಂಡರ್ ಕಾಣಿಸಿಕೊಂಡಿದ್ದು ಡೇಟಿಂಗ್ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ಹಾರ್ದಿಕ್ ಪಾಂಡ್ಯ ಈಗಾಗಲೇ ಹೆಂಡತಿ ನತಾಶಾ ಸ್ಟಾಂಕೋವಿಕ್ನಿಂದ ದೂರಾವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಾದ ಮೇಲೆ ಖ್ಯಾತ ಬ್ರಿಟಿಷ್ ಸಿಂಗರ್ ಕಮ್ ನಟಿ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಸದ್ಯ ಈ ಎಲ್ಲವೂ ಮುಗಿದ ಕಥೆಯಾದರೆ, ಇದೀಗ ಸ್ಟಾರ್ ಆಲ್ರೌಂಡರ್ ಪಾಂಡ್ಯ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹಾರ್ದಿಕ್ ಪಾಂಡ್ಯ ಅವರು ಮಾಡೆಲ್ ಕಮ್ ನಟಿಯಾಗಿರುವ ಮಹಿಕಾ ಶರ್ಮಾ ಜೊತೆ ಡೇಟಿಂಗ್ನಲ್ಲಿದ್ದಾರೆ ಎನ್ನಲಾಗಿದೆ. ಮಹಿಕಾ ಶರ್ಮಾ ಸೆಲ್ಫಿ ವಿಡಿಯೋವೊಂದರಲ್ಲಿ ಹಾರ್ದಿಕ್ ಪಾಂಡ್ಯ ಬ್ಲರ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದು ಪಾಂಡ್ಯನೇ ಎನ್ನುವುದು ಕನ್ಫರ್ಮ್ ಇಲ್ಲ. ಇದೇ ಎಲ್ಲ ಕಡೆ ವೈರಲ್ ಆಗಿದ್ದು ಮಹಿಕಾ ಶರ್ಮಾ ಮತ್ತು ಪಾಂಡ್ಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ.
ಇದನ್ನೂ ಓದಿ:RCB ಕ್ಯಾಪ್ಟನ್ ರಜತ್ ಮಡಿಲಿಗೆ ಮತ್ತೊಂದು ಕಪ್.. ದುಲೀಪ್ ಟ್ರೋಫಿಗೆ ಮುತ್ತಿಕ್ಕಿದ ಸೆಂಟ್ರಲ್ ಝೋನ್
ಈ ಇಬ್ಬರು ಇನ್ಸ್ಟಾದಲ್ಲಿ ಒಬ್ಬರನ್ನ ಒಬ್ಬರು ಫಾಲೋ ಮಾಡುತ್ತಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿವೆ. ಇದು ಬಿಟ್ಟರೇ ಸದ್ಯ ಪಾಂಡ್ಯ ಯುಎಇನಲ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಫುಲ್ ಬ್ಯುಸಿ ಇದ್ದಾರೆ. ಭಾರತ ತಂಡ ಈಗಾಗಲೇ ಯುಎಇ ಹಾಗೂ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಗೆದ್ದು ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಮಹಿಕಾ ಶರ್ಮಾ ಯಾರು ಎಂದು ತಿಳಿದುಕೊಳ್ಳಬೇಕು ಎಂದರೆ, ಮಹಿಕಾ ಮಾಡೆಲ್ ಹಾಗೂ ನಟಿಯಾಗಿದ್ದಾರೆ. ಎಕನಾಮಿಕ್ಸ್ ಹಾಗೂ ಫೈನಾನ್ಸ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪಾಪುಲರ್ ಆಗಿರುವ ಯುನಿಕ್ಲೋ (including Uniqlo), ತನಿಷ್ಕ್ (Tanishq) ಮತ್ತು ವಿವೋ ಸೇರಿದಂತೆ ಹಲವಾರು ಜನಪ್ರಿಯ ಬ್ರ್ಯಾಂಡ್‌ಗಳೊಂದಿಗೆ ಅಸೋಸಿಯೇಟ್ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ