/newsfirstlive-kannada/media/media_files/2025/09/15/rajat_patidar-1-2025-09-15-16-31-27.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ರಜತ್ ಪಾಟೀದಾರ್ ಅವರ ಮಡಿಲಿಗೆ ಮತ್ತೊಂದು ಟ್ರೋಫಿ ಒಲಿದು ಬಂದಿದೆ. ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯ ತಂಡ (Central Zone) 2025-26ನೇ ಸಾಲಿನ ದುಲೀಪ್ ಟ್ರೋಫಿಗೆ ಮುತ್ತಿಕ್ಕಿದೆ. ಈ ಮೂಲಕ ಒಂದೇ ವರ್ಷದಲ್ಲಿ ಆರ್ಸಿಬಿ ನಾಯಕ ಎರಡು ಕಪ್ಗಳನ್ನು ಗೆದ್ದುಕೊಂಡಂತೆ ಆಗಿದೆ.
ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕೇಂದ್ರ ವಲಯದ ಕ್ಯಾಪ್ಟನ್ ರಜತ್ ಪಾಟೀದಾರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಎದುರಾಳಿ ದಕ್ಷಿಣ ವಲಯವನ್ನು ಮೊದಲ ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಅದರಂತೆ ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ವಲಯ ವಿಫಲ ಬ್ಯಾಟಿಂಗ್ ಪರ್ಫಾಮೆನ್ಸ್ ನೀಡಿ ಕೇವಲ 149ಗೆ ಆಲೌಟ್ ಆಯಿತು.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಗುಮ್ಮಿದ ಟೀಮ್ ಇಂಡಿಯಾ.. ಜಯಭೇರಿ ಬಾರಿಸಿದ ಸೂರ್ಯಕುಮಾರ್ ಸೇನೆ
ಇದರ ನಂತರ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ಕೇಂದ್ರ ವಲಯ, ಕ್ಯಾಪ್ಟನ್ ರಜತ್ ಪಾಟೀದಾರ್ ಸೆಂಚುರಿ ಹಾಗೂ ಯಶ್ ರಾಥೋಡ್ ಅವರ 194 ರನ್ ಸಿಡಿಸಿದರು. ಹಾಗೂ ಡ್ಯಾನಿಶ್ ಮಾಲೆವಾರ್, ಸರನಶ್ ಜೈನ್ ಅವರ ಅರ್ಧ ಶತಕ ಬಾರಿಸಿದರು. ಇದರಿಂದ ಕೇಂದ್ರ ವಲಯ 511 ರನ್ಗಳ ಬೃಹತ್ ರನ್ಗಳನ್ನ ಕಲೆ ಹಾಕಿತು.
362 ರನ್ಗಳ ಲೀಡ್ ಪಡೆದ ದಕ್ಷಿಣ ವಲಯ ಬ್ಯಾಟಿಂಗ್ ಆರಂಭಿಸಿತು. 2ನೇ ಇನ್ನಿಂಗ್ಸ್ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ದಕ್ಷಿಣ ವಲಯ 426 ರನ್ಗಳಿಗೆ ಆಲೌಟ್ ಆಯಿತು. ಇದರಿಂದ ಕೇವಲ 65 ರನ್ಗಳ ಟಾರ್ಗೆಟ್ ನೀಡಿದಂತೆ ಆಯಿತು. ಕೊನೆ ದಿನ ಅಂದರೆ ಪಂದ್ಯದ 5ನೇ ದಿನ ಈ ಸಣ್ಣ ಟಾರ್ಗೆಟ್ ಬೆನ್ನು ಬಿದ್ದ ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 2025-26ನೇ ಸಾಲಿನ ದುಲೀಫ್ ಟ್ರೋಫಿಯನ್ನು ರಜತ್ ನೇತೃತ್ವದ ಟೀಮ್ ಗೆದ್ದು ಸಂಭ್ರಮಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ