/newsfirstlive-kannada/media/media_files/2025/09/14/suryakumar-2025-09-14-23-14-18.jpg)
ಬದ್ಧವೈರಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಭರ್ಜರಿಯಾಗಿ 7 ವಿಕೆಟ್​​ಗಳಿಂದ ಗೆದ್ದು ಬೀಗಿದೆ. 128 ರನ್​ಗಳ ಟಾರ್ಗೆಟ್​ ಅನ್ನು ಸೂರ್ಯಕುಮಾರ್ ಪಡೆ ಸುಲಭವಾಗಿಯೇ ತಲುಪಿ ಜಯ ಪಡೆದುಕೊಂಡಿದೆ.
ದುಬೈನ ಇಂಟರ್​​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್​ನ 6ನೇ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಾಕ್​ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ್ದ ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್ ಆರಂಭದಲ್ಲೇ ದೊಡ್ಡ ಆಘಾತ ಅನುಭವಿಸಿದರು. ಇದರಿಂದ ಮಧ್ಯಮ ಕ್ರಮಾಂಕದಲ್ಲೂ ರನ್​ಗಳು ಹರಿದು ಬರಲಿಲ್ಲ. ಹೀಗಾಗಿ ಭಾರತಕ್ಕೆ 128 ರನ್​ಗಳ ಟಾರ್ಗೆಟ್ ನೀಡಿತ್ತು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಭಾರೀ ಅವಮಾನ.. ಕುಲ್​ದೀಪ್, ಅಕ್ಷರ್, ಬೂಮ್ರಾ ಮುಂದೆ ಸಲ್ಮಾನ್ ಪಡೆ ವಿಲ..ವಿಲ!
/filters:format(webp)/newsfirstlive-kannada/media/media_files/2025/09/14/tilak_varma-2025-09-14-23-14-35.jpg)
ಈ ಗುರಿ ಬೆನ್ನತ್ತಿದ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಬೇಗನೇ ಗುರಿ ತಲುಪಿದೆ. ಭಾರತದ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಶುಭ್​ಮನ್ ಗಿಲ್ ಕೇವಲ 10 ರನ್​ಗೆ ವಿಕೆಟ್​ ಒಪ್ಪಿಸಿದರು. ಇವರ ಬಳಿಕ ನಾಯಕ ಸೂರ್ಯಕುಮಾರ್ ಕ್ರೀಸ್​ಗೆ ಆಗಮಿಸಿದರು. ಆದರೆ ಇನ್ನೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ, ಕೇವಲ 13 ಬಾಲ್​ನಲ್ಲಿ 4 ಬೌಂಡರಿ, 2 ಸಿಕ್ಸರ್​ನಿಂದ 31 ರನ್​ಗಳನ್ನು ಬಾರಿಸಿ ಆಡುವಾಗ ಕ್ಯಾಚ್​ ಔಟ್ ಆದರು.
ಇವರ ಬಳಿಕ ಕ್ರೀಸ್​ಗೆ ಆಗಮಿಸಿದ ತಿಲಕ್ ವರ್ಮಾ, ನಾಯಕ ಸೂರ್ಯಗೆ ಉತ್ತಮ ಸಾಥ್ ಕೊಟ್ಟರು. 2 ಫೋರ್, 1 ಸಿಕ್ಸರ್​ನಿಂದ 31 ರನ್​ ಬಾರಿಸಿ ಕ್ಲೀನ್ ಬೋಲ್ಡ್ ಆದರು. ಕ್ಯಾಪ್ಟನ್ ಸೂರ್ಯಕುಮಾರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 37 ಎಸೆತ ಎದುರಿಸಿದ ಸೂರ್ಯಕುಮಾರ್ ಅವರು 5 ಬೌಂಡರಿ, 1 ಸಿಕ್ಸರ್​​ನಿಂದ 47 ರನ್​ ಗಳಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಜಯ ತಂದುಕೊಟ್ಟರು. ಶಿವಂ ದುಬೆ 10 ರನ್​ ಗಳಿಸಿ ನಾಟೌಟ್​ ಆಗಿ ಉಳಿದರು. 128 ರನ್​ಗಳ ಚೇಜ್ ಮಾಡಿದ ಟೀಮ್ ಇಂಡಿಯಾ 7 ವಿಕೆಟ್​ಗಳಿಂದ ಜಯಭೇರಿ ಬಾರಿಸಿತು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us