ಪಾಕಿಸ್ತಾನಕ್ಕೆ ಭಾರೀ ಅವಮಾನ.. ಕುಲ್​ದೀಪ್, ಅಕ್ಷರ್, ಬೂಮ್ರಾ ಮುಂದೆ ಸಲ್ಮಾನ್ ಪಡೆ ವಿಲ..ವಿಲ!

ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್ ಕೇವಲ 3 ರನ್​ಗೆ ಬೂಮ್ರಾ ಬೌಲಿಂಗ್​ನಲ್ಲಿ ಪಾಂಡ್ಯಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ತಂಡದ ಮೊತ್ತ 45 ಆಗಿದ್ದಾಗ ಫಖರ್ ಜಮಾನ್ 17 ರನ್​ಗೆ ಪೆವಿಲಿಯನ್​​ಗೆ ನಡೆದರು. ಇವರ ನಂತರ ಕ್ರೀಸ್​ಗೆ ಬಂದ ನಾಯಕ ಸಲ್ಮಾನ್ ಆಘಾ 3 ರನ್​ಗೆ ಔಟ್ ಆದರು.

author-image
Bhimappa
KULDEEP_SURYA
Advertisment

ಏಷ್ಯಾ ಕಪ್​ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ 9 ವಿಕೆಟ್​ ಕಳೆದುಕೊಂಡು 128 ರನ್​ಗಳ ಟಾರ್ಗೆಟ್​ ಅನ್ನು ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾಗೆ ನೀಡಿದೆ. ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕುಲ್​ದೀಪ್, ಅಕ್ಷರ್ ಪಟೇಲ್ ಹಾಗೂ ಬೂಮ್ರಾ ಬೌಲಿಂಗ್​ಗೆ ನಲುಗಿ ಹೋಯಿತು. ​  

ದುಬೈನ ಇಂಟರ್​​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್​ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ತೆಗೆದುಕೊಂಡಿದ್ದರು. ಅದರಂತೆ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ್ದ ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್ ಜೋಡಿ ಆರಂಭದಲ್ಲೇ ದೊಡ್ಡ ಆಘಾತ ಅನುಭವಿಸಿತು. ಹಾರ್ದಿಕ್ ಪಾಂಡ್ಯ ಬೌಲಿಂಗ್​ನಲ್ಲಿ ಸೈಮ್ ಅಯೂಬ್ ಡಕೌಟ್ ಆದರು. 

ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಕಿಂಗ್ ಕೊಹ್ಲಿ ಮ್ಯಾಚ್ ಆಡಬೇಕು.. ತಾಲಿಬಾನ್ ಲೀಡರ್

PANDYA_TILAK

ಇವರ ಬೆನ್ನಲ್ಲೇ ಬ್ಯಾಟಿಂಗ್​ಗೆ ಬಂದ ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್ ಕೇವಲ 3 ರನ್​ಗೆ ಬೂಮ್ರಾ ಬೌಲಿಂಗ್​ನಲ್ಲಿ ಪಾಂಡ್ಯಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ತಂಡದ ಮೊತ್ತ 45 ಆಗಿದ್ದಾಗ ಫಖರ್ ಜಮಾನ್ 17 ರನ್​ಗೆ ಪೆವಿಲಿಯನ್​​ಗೆ ನಡೆದರು. ಇವರ ನಂತರ ಕ್ರೀಸ್​ಗೆ ಬಂದ ನಾಯಕ ಸಲ್ಮಾನ್ ಆಘಾ 3, ಹಸನ್ ನವಾಜ್ 5, ಮೊಹಮ್ಮದ್ ನವಾಜ್ ಡಕೌಟ್, ಫಹೀಮಾ ಅಶ್ರಫ್​ 11,  ಸೂಫಿಯಾನ್ ಮುಖೀಮ್ 10 ರನ್​ಗೆ ಔಟ್ ಆದರು.

ಆದರೆ ಓಪನರ್​ ಸಾಹಿಬ್‌ಜಾದಾ ಫರ್ಹಾನ್ 1 ಬೌಂಡರಿ, 3 ಸಿಕ್ಸರ್​ನಿಂದ 40 ರನ್​ ಬಾರಿಸಿ ಆಡುವಾಗ ಕುಲ್​ದೀಪ್ ಬೌಲಿಂಗ್​ನಲ್ಲಿ ಕ್ಯಾಚ್​ ಔಟ್ ಆದರು. ಹಾಗೇ ಬೌಲರ್ ಶಾಹೀನ್ ಅಫ್ರಿದಿ ಕೊನೆಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ನೆರವಾದರು. 16 ಬಾಲ್​ಗಳನ್ನು ಎದುರಿಸಿದ ಅಫ್ರಿದಿ 4 ಭರ್ಜರಿ ಸಿಕ್ಸರ್​ಗಳಿಂದ 33 ರನ್​ ಚಚ್ಚಿದರು. ಇದರಿಂದ ಪಾಕಿಸ್ತಾನ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 128 ರನ್​ಗಳ ಟಾರ್ಗೆಟ್ ಅನ್ನು ಟೀಮ್ ಇಂಡಿಯಾಕ್ಕೆ ನೀಡಿದೆ. 

ಟೀಮ್ ಇಂಡಿಯಾದ ಪರ ಮತ್ತೊಮ್ಮೆ ಬೆಸ್ಟ್ ಬೌಲಿಂಗ್ ಮಾಡಿದ ಸ್ಪಿನ್ನರ್ ಕುಲ್​ದೀಪ್ ಯಾದವ್ 3 ವಿಕೆಟ್ ಪಡೆದರು. ಇನ್ನೊಬ್ಬ ಸ್ಪಿನ್ನರ್ ಅಕ್ಷರ್ ಪಟೇಲ್ 2, ಜಸ್​ಪ್ರೀತ್ ಬೂಮ್ರಾ 2 ವಿಕೆಟ್​ ಕಬಳಿಸಿದರೆ, ವರುಣ್ ಚಕ್ರವರ್ತಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್​ ಪಡೆದು ಸಂಭ್ರಮಿಸಿದರು.  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

PAK vs IND Ind vs Pak Asia Cup 2025 india vs pakistan asia cup
Advertisment