/newsfirstlive-kannada/media/media_files/2025/09/14/virat_kohli_anas_haqqan-2025-09-14-17-45-42.jpg)
ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ಗಳಾದ ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಖಾಡದಲ್ಲಿದ್ರೆ ಆ ಕ್ರೇಜ್ ಬೇರೆನೆ ಇರುತ್ತದೆ. ಈಗಲೂ ಈ ಇಬ್ಬರ ಆಟ ನೋಡಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿರುತ್ತಾರೆ. ಅದೇ ರೀತಿ ಭಾರತ- ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಆಡಬೇಕು ಎಂದು ತಾಲಿಬಾನ್ ಲೀಡರ್ ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ ಅಫ್ಘಾನಿಸ್ತಾನದ ತಾಲಿಬಾನ್ ನಾಯಕ ಅನಸ್ ಹಕ್ಕಾನಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೆ ಪಾಕ್ ಹಾಗು ತಾಲಿಬಾನ್ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿದ್ದು, ತಾಲಿಬಾನ್ ನಾಯಕ ಪಾಕ್ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲು ಮನವಿ ಮಾಡಿದ್ದಾರೆ.
ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ ಮತ್ತು ತಾಲಿಬಾನ್ ಚಳವಳಿಯ ನಾಯಕ ಅನಸ್ ಹಕ್ಕಾನಿ ಕೂಡ ಕ್ರಿಕೆಟ್‌ನ ಅಭಿಮಾನಿಯಾಗಿದ್ದಾರೆ. ವಾಸ್ತವವಾಗಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಹಠಾತ್ ಟೆಸ್ಟ್ ನಿವೃತ್ತಿಯ ಬಗ್ಗೆ ಹಕ್ಕಾನಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಕ್ರಿಕೆಟ್ ದಿಗ್ಗಜ ಕೊಹ್ಲಿ ಅವರ ಟೆಸ್ಟ್ ನಿವೃತ್ತಿ ಘೋಷಿಸುವ ನಿರ್ಧಾರದಿಂದ ತಮಗೆ ಆಶ್ಚರ್ಯವಾಗಿದೆ ಎಂದು ಹಕ್ಕಾನಿ ಹೇಳಿದ್ದಾರೆ. ಕೊಹ್ಲಿ ಅವರಿಗೆ 50 ವರ್ಷ ತುಂಬುವವರೆಗೆ ಆಟ ಮುಂದುವರಿಸಬೇಕೆಂದು ಅವರು ಬಯಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಭಾರತ -ಪಾಕ್ ಏಷ್ಯಾಕಪ್ T20 ಮ್ಯಾಚ್ಗೆ ಕೌಂಟ್ಡೌನ್.. ಯಾವ ಟೀಮ್ ಸ್ಟ್ರಾಂಗ್..?
ಟೆಸ್ಟ್ನಿಂದ ರೋಹಿತ್ ನಿವೃತ್ತಿ ಸಮರ್ಥನೀಯವಾಗಿತ್ತು. ಕೊಹ್ಲಿ ನಿವೃತ್ತಿಯ ಹಿಂದಿನ ಕಾರಣ ನನಗೆ ತಿಳಿದಿಲ್ಲ. ಪ್ರಪಂಚದಾದ್ಯಂತ ಕೆಲವೇ ಜನರು ಮಾತ್ರ ಅಷ್ಟು ವಿಶಿಷ್ಟರು. ಅವರು 50 ವರ್ಷ ವಯಸ್ಸಿನವರೆಗೆ ಆಡಲು ಪ್ರಯತ್ನಿಸಬೇಕು ಎಂಬುದು ನನ್ನ ಆಸೆ ಎಂದು ಶುಭಂಕರ್ ಮಿಶ್ರಾ ಅವರೊಂದಿಗಿನ ಸಂದರ್ಶನದಲ್ಲಿ ಹಕ್ಕಾನಿ ಹೇಳಿದ್ದಾರೆ.
ಕೊಹ್ಲಿ ಮತ್ತು ರೋಹಿತ್ ಈಗ ಏಕದಿನ ಪಂದ್ಯಗಳನ್ನಾಡಲು ಸಜ್ಜಾಗುತ್ತಿದ್ದು, ಈ ಜೋಡಿ ಅಕ್ಟೋಬರ್‌ನಲ್ಲಿ ಮೂರು ಏಕದಿನ ಪಂದ್ಯಗಳಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ