/newsfirstlive-kannada/media/media_files/2025/09/14/surya_salman-2025-09-14-16-14-17.jpg)
ಇಂಡೋ-ಪಾಕ್ ಏಷ್ಯಾಕಪ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅನ್ನೋ ಚರ್ಚೆ ಕೂಡ ಜೋರಾಗಿದೆ. ಈ ಬಾರಿಯ ಅಖಾಡದಲ್ಲಿ ಯಾವ ಟೀಮ್ ಸ್ಟ್ರಾಂಗ್ ಇದೆ. ಟೀಮ್ ಇಂಡಿಯಾನಾ, ಪಾಕಿಗಳಾ ಆ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಸೆಪ್ಟೆಂಬರ್ 14 ಇಂಡೋ ಪಾಕ್ ಕ್ರಿಕೆಟ್ ಪ್ರೇಮಿಗಳನ್ನ ಹಿಡಿಯೋರೆ ಇಲ್ಲ. ಯಾಕಂದ್ರೆ, ಇವತ್ತೇ ಏಷ್ಯಾಕಪ್ನ ಅಸಲಿ ಕ್ರಿಕೆಟ್ ಫೆಸ್ಟಿವಲ್ ಶುರುವಾಗಲಿದೆ. ಸೂಪರ್ ಸಂಡೇಯ ಬ್ಲಾಕ್ ಬಾಸ್ಟರ್ ಮ್ಯಾಚ್ನಲ್ಲಿ ಫ್ಯಾನ್ಸ್ಗೆ ಹಬ್ಬದೂಟ ಸಿಗಲಿದೆ. ಈ ಆನ್ಫಿಲ್ಡ್ ಬ್ಯಾಟಲ್ನಲ್ಲಿ ಯಾರ ಗೆಲ್ತಾರೆ, ಯಾರ್ ಸೋಲ್ತಾರೆ ಎಂಬ ಡಿಬೇಟ್ಗಳು ಜೋರಾಗಿವೆ. ಪಂದ್ಯದ ಗೆಲುವಿನಾಗಿ ತೆರೆ ಹಿಂದೆಯೇ ಉಭಯ ತಂಡಗಳು ಸ್ಟ್ರಾಟರ್ಜಿ ರೂಪಿಸ್ತಿದ್ದಾರೆ. ಆದ್ರೆ, ಏಷ್ಯಾಕಪ್ ಗೆಲ್ಲೋ ಫೇವರಿಟ್ಸ್ಗೆ ಬಲಾ ಬಲಾದ ಜೊತೆ ವೀಕ್ನೆಸ್ಗಳು ಇವೆ.
ನಂ.1 ಟಿ20 ತಂಡದ ಗೆಲುವಿಗೆ ಅಡ್ಡಗಾಲು ಏನು..?
ಟೀಮ್ ಇಂಡಿಯಾ ಜಗತ್ತಿನ ನಂಬರ್-1 ಟಿ20 ಟೀಮ್. ಟಿ20 ವಿಶ್ವಕಪ್ ಗೆಲುವಿನ ಬಳಿಕ ಟಿ20ಯಲ್ಲಿ ಕಂಪ್ಲೀಟ್ ಡಾಮಿನೆಟ್ ಮಾಡ್ತಿದೆ. ಆಡಿದ 17 ಪಂದ್ಯಗಳಲ್ಲಿ ಮೂರಲ್ಲಿ ಅಷ್ಟೇ ಸೋತಿರುವ ಟೀಮ್ ಇಂಡಿಯಾದ ವಿನ್ನಿಂಗ್ ಪರ್ಸೆಟೇಜ್, ಶೇಕಡ 80ರಷ್ಟಿದೆ. ಹೀಗಾಗಿ ಟಿ20 ಕ್ರಿಕೆಟ್‌ನ ಅಧಿಪತಿಯಾಗಿರುವ ಇಂಡಿಯನ್ ಟೈಗರ್ಸ್, ಏಷ್ಯಾಕಪ್ ಗೆಲ್ಲೋ ಹಾಟ್ ಫೇವರಿಟ್ಸ್. ದಿಗ್ಗಜರ ಲೆಕ್ಕದಲ್ಲಿ ಏಷ್ಯಾಕಪ್ ಗೆಲ್ಲೋದು ಕಷ್ಟದ ಕೆಲಸವೇನಲ್ಲ. ಆದ್ರೆ, ಇದೇ ಫೇವರಿಟ್ ಟೀಮ್ಗೆ ಕೆಲ ವಿಘ್ನಗಳು ಹಿನ್ನಡೆಗಳು ಕಾಡ್ತಿವೆ. ಆ ಸಮಸ್ಯೆಗಳೇ ಹಾಲಿ ಚಾಂಪಿಯನ್ಸ್ ಏಷ್ಯಾಕಪ್ ಗೆಲುವಿನ ಕನಸಿಗೆ ಕೊಳ್ಳಿ ಇಡ್ತಾವಾ ಎಂಬ ಅನುಮಾನ ಸೃಷ್ಟಿಸಿವೆ.
ಟೀಮ್ ಇಂಡಿಯಾ ವೀಕ್ನೆಸ್..!
- ಬಹುದಿನಗಳ ಬಳಿಕ ಅಂಗಳಕ್ಕಿಳಿದಿರುವ ಆಟಗಾರರು
- ಸಂಜು ಸ್ಯಾಮ್ಸನ್ ಸ್ಲಾಟ್ ಬದಲಾವಣೆಯ ಹಿನ್ನಡೆ
- ಕೆಳ ಕ್ರಮಾಂಕ ದುರ್ಬಲ & ಮ್ಯಾಚ್ ಫಿನಿಷರ್ಸ್ ಕೊರತೆ
- ಬೌಲಿಂಗ್ ಡೆಪ್ತ್ ಇಲ್ಲ, ಬೂಮ್ರಾ ಮೇಲೆ ಹೆಚ್ಚು ಡಿಪೆಂಡ್
- ಅನುಭವಿ ಆಟಗಾರರ ಅಲಭ್ಯತೆ ಕಾಡುವ ಆತಂಕ
- ಬಹುತೇಕ ಆಟಗಾರರಿಗೆ ಮೊದಲ ಪ್ರತಿಷ್ಠಿತ ಟೂರ್ನಿ
ಈ ಅಂಶಗಳು, ಟೀಮ್ ಇಂಡಿಯಾಗೆ ಏಷ್ಯಾಕಪ್ನಲ್ಲಿ ಮುಳುವಾಗೋ ಆತಂಕ ಹುಟ್ಟಿಸಿದ್ರೂ, ಇವೆನ್ನೆಲ್ಲ ಮೆಟ್ಟಿನಿಲ್ಲುವ ಸಾಮರ್ಥ್ಯ ಟೀಮ್ ಇಂಡಿಯಾಗಿದೆ. ಎಂಥಹ ಎದುರಾಳಿಯನ್ನಾದರು ಚಿಂದಿ ಉಡಾಯಿಸುವ ತಾಕತ್ತು ಯಂಗ್ ಇಂಡಿಯಾಗೆ ಇದೆ ಅನ್ನೋದನ್ನು ಮರೆಯುವಂತಿಲ್ಲ.
ಟೀಮ್ ಇಂಡಿಯಾ ಸ್ಟ್ರೆಂಥ್
- ಶುಭ್ಮನ್ ಗಿಲ್, ಅಭಿಷೇಕ್ ಓಪನಿಂಗ್ ಕೆಮಿಸ್ಟ್ರಿ
- ಟಿ20 ಸ್ಪೆಷಲಿಸ್ಟ್ಗಳ ಟಾಪ್ ಆರ್ಡರ್ ಬ್ಯಾಟಿಂಗ್
- ಸ್ಟ್ರಾಂಗ್ ಆಲ್ರೌಂಡರ್ಗಳ ಯುನಿಟ್
- ಬೂಮ್ರಾ ನೇತೃತ್ವದ ಬ್ಯಾಲೆನ್ಸಡ್ ಬೌಲಿಂಗ್ ಅಟ್ಯಾಕ್
- ಕುಲ್ದೀಪ್ ಅನುಭವ, ವರುಣ್ ಮಿಸ್ಟರಿ ಫ್ಯಾಕ್ಟರ್
ಪಾಕಿಸ್ತಾನದ ಸ್ಟ್ರೆಂಥ್
ಪಾಕ್ ತಂಡದ ಬಿಗೆಸ್ಟ್ ಸ್ಟ್ರೆಂಥ್ ಟಾಪ್ ಆರ್ಡರ್ ಆಗಿದೆ. ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್ ಕನ್ಸಿಸ್ಟೆನ್ಸಿ ತೋರಿದ್ದಾರೆ. ಇವರು ಹೊರತು ಪಡೆಸಿದ್ರೆ. ಮಿಡ್ಲ್ ಆರ್ಡರ್ನಲ್ಲಿ ಆಟಕ್ಕೆ ತಿರುವ ನೀಡಬಲ್ಲ ಪವರ್ ಹಿಟ್ಟರ್ಗಳ ದಂಡು ಇದೆ. ಇನ್ನು ಯುಎಇ ಕಂಡೀಷನ್ಸ್ನಲ್ಲಿ ಹೆಚ್ಚು ಪಂದ್ಯಗಳನ್ನಾಡಿರುವ ಅನುಭವ ತಂಡಕ್ಕೆ ವರವಾಗುವ ಸಾಧ್ಯತೆ ಇದೆ. ಶಾಹೀನ್, ಹ್ಯಾರಿಸ್ ರೌಫ್, ಹೈದರ್ ಆಲಿಯಂಥ ಪವರ್ ಫುಲ್ ಪೇಸ್ ಅಟ್ಯಾಕ್ನ ಬಲ ಹೊಂದಿದ್ದಾರೆ. ಅಲ್ದೇ ಸ್ಪಿನ್ ಫ್ರೆಂಡ್ಲಿ ಪಿಚ್ನಲ್ಲಿ ಅಬ್ರಾರ್ ಅಹ್ಮದ್, ಸೂಫಿಯಾನ್ ಮುಖೀಮ್ ಥ್ರೆಟ್ ಆಗೋ ಚಾನ್ಸ್ ಇದೆ.
ಇದನ್ನೂ ಓದಿ:ಭಾರತ-ಪಾಕ್ ಮ್ಯಾಚ್ ನೋಡಲ್ಲ.. ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್
ಪಾಕಿಸ್ತಾನದ ವೀಕ್ನೆಸ್..!
- ನಾಯಕ ಸಲ್ಮಾನ್ ಅಲಿ ಆಘಾಗೆ ಅನುಭವದ ಕೊರತೆ
- ಬಾಬರ್ ಅಜಂ, ರಿಜ್ವಾನ್ ಅಲಭ್ಯತೆ ಕಾಡುವ ಆತಂಕ
- ಹಸನ್ ನವಾಜ್, ಖುಷ್ದಿಲ್ ಶಾ ಔಟ್ ಆಫ್ ಫಾರ್ಮ್
- ಟಾಪ್ ಆರ್ಡರ್ ಬ್ಯಾಟಿಂಗ್ ಮೇಲೆ ಅವಲಂಬನೆ
- ಕಳಪೆ ಫೀಲ್ಡಿಂಗ್, 14 ತಿಂಗಳಿಂದ 4ಕ್ಕಿಂತ ಹೆಚ್ಚು ಸರಣಿ ಗೆದ್ದಿಲ್ಲ
ಇಂಡೋ -ಪಾಕ್ ಬ್ಯಾಟಲ್ನಲ್ಲಿ ಟೀಮ್ ಇಂಡಿಯಾನೇ ಸಖತ್ ಸ್ಟ್ರಾಂಗ್ ಆಗಿ ಕಾಣ್ತಿದೆ. ಗೆಲ್ಲೋ ಫೇವರಿಟ್ಸ್ ಆಗಿದ್ದಾರೆ. ಆದ್ರೆ, ಆನ್ಫಿಲ್ಡ್ನಲ್ಲಿ ಎಷ್ಟರ ಮಟ್ಟಿಗೆ ಪರ್ಫಾಮೆನ್ಸ್ ನೀಡ್ತಾರೆ ಎಂಬುವುದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ