/newsfirstlive-kannada/media/media_files/2025/09/14/pradeep_eshwar-1-2025-09-14-15-46-52.jpg)
ಬೆಂಗಳೂರು: ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಪಾಕ್ ವಿರುದ್ಧ ಭಾರತ ಅಖಾಡಕ್ಕೆ ಇಳಿಯಬಾರದು ಎಂದು ಹಲವೆಡೆ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಈ ಸಂಬಂಧ ಶಾಸಕ ಪ್ರದೀಪ್ ಈಶ್ವರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ನ್ಯೂಸ್‌ಫಸ್ಟ್ ಜೊತೆ ಮಾತನಾಡಿರುವ ಶಾಸಕ ಪ್ರದೀಪ್ ಈಶ್ವರ್ ಅವರು, ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ನಿಲ್ಲಿಸಬಹುದಿತ್ತು. ಇವರು ಯಾವ ಮುಖ ಇಟ್ಟುಕೊಂಡು ಮ್ಯಾಚ್ ಆಡಿಸುತ್ತಿದ್ದಾರೆ. ಈ ಪಂದ್ಯವನ್ನು ರದ್ದು ಮಾಡಬೇಕಿತ್ತು. ಪಹಲ್ಗಾಮ್ ಘಟನೆಯ ನೋವು ನಮ್ಮಲ್ಲಿ ಇನ್ನು ಹಾಗೇ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತ ಮತ್ತು ಪಾಕ್ ನಡುವಿನ 5 ರೋಚಕ ಪಂದ್ಯಗಳು..! ಏನೆಲ್ಲ ಆಗಿತ್ತು..?
ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಮಗ ಜೈಶಾಗೆ ಬ್ಯುಸಿನೆಸ್ ಮುಖ್ಯ. ಇಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಬಿ.ವೈ ವಿಜಯೇಂದ್ರ, ಶಾಸಕ ಬಸನಗೌಡ ಯತ್ನಾಳ್ ಅವರು ಪಾಕಿಸ್ತಾನ ಅಂತ ಬೊಬ್ಬೆ ಹಾಕುತ್ತಾರೆ. ಇವರಿಗೆ ಅದೇ ಧಮ್ಮು, ತಾಕತ್ ಇದ್ದರೇ ಕೇಂದ್ರ ಸರ್ಕಾರಕ್ಕೆ ಹೇಳಿ ಮ್ಯಾಚ್ ರದ್ದು ಮಾಡಿಸಲಿ. ಒಂದು ವೇಳೆ ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಿದ್ರೆ ಪಂದ್ಯ ರದ್ದು ಮಾಡಿಸುತ್ತಿದ್ದೇವು. ಪಹಲ್ಗಾಮ್ ಘಟನೆ ಇನ್ನೂ ಮರೆತಿಲ್ಲ, ನೋವಿದೆ. ಅದಕ್ಕಾಗಿ ಇಂದಿನ ಮ್ಯಾಚ್ ನೋಡಲ್ಲ ಎಂದು ಎಂಎಲ್ಎ ಪ್ರದೀಪ್ ಈಶ್ವರ್ ಅವರು ಹೇಳಿದ್ದಾರೆ.
ಕಳೆದ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ಇದರಲ್ಲಿ ಕರ್ನಾಟಕದವರು ಸೇರಿದ್ದಾರೆ. ಪಹಲ್ಗಾಮ್ ದಾಳಿಗೆ ಪಾಕಿಸ್ತಾನವೇ ಕಾರಣ. ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಕೂಡ ನಡೆದಿತ್ತು. ಈ ಎಲ್ಲಾ ಬೆಳವಣಿಗಳ ನಡುವೆ ಪಾಕ್ ವಿರುದ್ಧ ಭಾರತ ಪಂದ್ಯವಾಡುತ್ತಿರುವುದಕ್ಕೆ ವಿರೋಧ ಕೇಳಿ ಬರುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ