/newsfirstlive-kannada/media/media_files/2025/09/17/kl-rahul-elephant-1-2025-09-17-08-27-52.jpg)
ಟೀಮ್​ ಇಂಡಿಯಾದ ಬಹುತೇಕ ಆಟಗಾರರು ದೈವಭಕ್ತರು. ಕನ್ನಡಿಗ ಕೆ.ಎಲ್​.ರಾಹುಲ್​ ಕೂಡ ಹೊರತಾಗಿಲ್ಲ. ಇದೀಗ ಅವರು ದೈವಭಕ್ತಿ ಮೆರೆದು ಸುದ್ದಿಯಾಗಿದ್ದಾರೆ. ಮಹಾವಿಷ್ಣುವಿನ ದೇವಸ್ಥಾನಕ್ಕೆ ಆನೆಯೊಂದನ್ನ ದೇಣಿಗೆ ನೀಡಿದ್ದಾರೆ. ಇದು ದೈವಭಕ್ತಿಯ ವಿಚಾರ ಮಾತ್ರವಲ್ಲ. ಇದ್ರ ಹಿಂದೆ ಸಾಮಾಜಿಕ ಕಳಕಳಿಯೂ ಕತೆಯೂ ಇದೆ.
ಇದನ್ನೂ ಓದಿ:RCB ಆಟಗಾರರ ಡೆಡ್ಲಿ ಬ್ಯಾಟಿಂಗ್.. ರಜತ್​, ಸಾಲ್ಟ್​, ಟಿಮ್ ಡೇವಿಡ್, ಬೆಥಲ್ ಸಿಡಿಲಬ್ಬರ.!
/filters:format(webp)/newsfirstlive-kannada/media/media_files/2025/08/04/kl-rahul-delhi-capitals-1-2025-08-04-09-57-41.jpg)
ಕನ್ನಡಿಗ ಕೆ.ಎಲ್.ರಾಹುಲ್​ ಮತ್ತೊಮ್ಮೆ ತನ್ನ ದೈವಭಕ್ತಿ ಮೆರೆದಿದ್ದಾರೆ. ಕೇರಳದ ಗುರುವಾಯುರ್​​ ಬಳಿಕ ಪುರಾತನ ಶ್ರೀ ಪದ್ಮನಾಭಪುರಂ ಮಹಾವಿಷ್ಣು ಕೀರಮ್​​ ದೇವಸ್ಥಾನಕ್ಕೆ ಕೆ.ಎಲ್​ ರಾಹುಲ್​, ಆನೆಯೊಂದನ್ನ ದೇಣಿಗೆ ನೀಡಿದ್ದಾರೆ. ಇದು ಜೀವಂತವಾದ ಆನೆಯಲ್ಲ. ಇದೊಂದು ಯಾಂತ್ರಿಕ ಆನೆ. ಪೇಟಾ ಇಂಡಿಯಾ ಸಂಸ್ಥೆಯಿದ್ಯಲ್ಲ. ಅದ್ರ ಜೊತೆಗೂಡಿ ಯಾಂತ್ರಿಕವಾದ ಆನೆಯನ್ನ ದೇವಸ್ಥಾನಕ್ಕೆ ರಾಹುಲ್​ ಉಡುಗೊರೆಯಾಗಿ ನೀಡಿದ್ದಾರೆ. ಕೃಷ್ಣ ಜಯಂತಿಯಂದು ಈ ಆನೆಯನ್ನ ಉಡುಗೊರೆಯಾಗಿ ನೀಡಿದ್ದು ಇದಕ್ಕೆ ಪದ್ಮನಾಭಪುರಂ ಪದ್ಮನಾಭನ್​ ಎಂದು ಹೆಸರಿಡಲಾಗಿದೆ. ದೇವರ ಮುಂದಿನ ಉತ್ಸವಗಳಲ್ಲಿ ಜೀವಂತ ಆನೆಯ ಬದಲು ಈ ಯಾಂತ್ರಿಕ ಆನೆಯನ್ನ ದೇವಸ್ಥಾನದ ಆಡಳಿತ ಮಂಡಳಿ ಬಳಸಲಿದೆ.
/filters:format(webp)/newsfirstlive-kannada/media/media_files/2025/09/17/kl-rahul-elephant-2025-09-17-08-31-02.jpg)
‘ಆನೆ’ ದೇಣಿಗೆ ಹಿಂದಿದೆ ಸಾಮಾಜಿಕ ಕಳಕಳಿ.!
ಆನೆಯನ್ನ ದೇಣಿಗೆ ನೀಡೋ ಪೆಟಾ ನಿರ್ಧಾರಕ್ಕೆ ಕೈ ಜೋಡಿಸಿ ರಾಹುಲ್​ ದೈವಭಕ್ತಿಯ ಜೊತೆಗೆ ಸಾಮಾಜಿಕ ಕಳಕಳಿ ಮರೆದಿದ್ದಾರೆ. ಧಾರ್ಮಿಕ ಆಚರಣೆಗಳ ವೇಳೆ ಆನೆಗಳು ಕೆರಳಿ ಭಕ್ತರು ಅಸುನೀಗಿದ, ಗಾಯಗೊಂಡ ಸಾಕಷ್ಟು ಪ್ರಕರಣಗಳು ಕೇಳದಲ್ಲಿ ಸಂಭವಿಸಿವೆ. ಇದೇ ವರ್ಷದ ಜನವರಿಯಲ್ಲಿ ಮಲಪ್ಪುರಂನ ತಿರೂರ್​ನಲ್ಲಿ ಹಬ್ಬದ ಸಂದರ್ಭದಲ್ಲಿ ಆನೆ ದಾಳಿಗೆ ಒಬ್ಬ ಅಸುನೀಗಿದ್ರೆ, 17 ಮಂದಿ ಗಾಯಗೊಂಡಿದ್ರು. ಫೆಬ್ರವರಿಯಲ್ಲಿ 13 2025ರಲ್ಲಿ ಕುರುವಂಗಡ್‌ನ ಮಣಕುಲಂಗರನ ಭಗವತಿ ದೇವಸ್ಥಾನದ ಹಬ್ಬದ ಸಂದರ್ಭದಲ್ಲಿ ಆನೆ ದಾಳಿಗೆ ಮೂವರು ಭಕ್ತರು ಮರಣ ಹೊಂದಿದ್ರೆ, 30ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ರು. ಯಾಂತ್ರಿಕ ಆನೆಯನ್ನ ದೇವಸ್ಥಾನಗಳು ಬಳಸಿದ್ರೆ ಸಾಂಸ್ಕೃತಿಕ ಆಚರಣೆಯೂ ಉಳಿಯುತ್ತೆ. ಮತ್ತು ಭಕ್ತರಿಗೂ ಯಾವುದೇ ಅಪಾಯವಿಲ್ಲ ಅನ್ನೋದು ಆನೆ ದೇಣಿಗೆ ಹಿಂದಿನ ಉದ್ದೇಶವಾಗಿದೆ.
ಪರಮ ದೈವ ಭಕ್ತ ಕನ್ನಡಿಗ
ಸಾಮಾಜಿಕ ಕಳಕಳಿಯ ಹೊರತಾಗಿ ಕೆ.ಎಲ್.ರಾಹುಲ್​ ಒಬ್ಬ ಪರಮ ದೈವಭಕ್ತ. ಬೆಂಗಳೂರಿನಲ್ಲಿ ಹುಟ್ಟಿದ್ರೂ ಮಂಗಳೂರಲ್ಲಿ ಬೆಳೆದ ರಾಹುಲ್​, ಆ ನೆಲದೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಅಲ್ಲಿನ ನಂಬಿಕೆ, ಆಚರಣೆಗಳನ್ನ ಸದಾ ಪಾಲಿಸ್ತಾರೆ. ದೈವಗಳು, ದೇವರನ್ನ ಆರಾಧಿಸೋ ರಾಹುಲ್​ ಬಿಡುವು ಸಿಕ್ಕಾಗ ಭೇಟಿ ನಿಡ್ತಾರೆ. ಸ್ವಾಮಿ ಕೊರಗಜ್ಜ, ಬಪ್ಪನಾಡಿನ ದರ್ಗಾ ಪರಮೇಶ್ವರಿ, ಸೌತಡ್ಕದ ಮಹಾಗಣಪತಿ ದೇವಸ್ಥಾನಗಳಿಗೆ ಆಗಾಗ ತೆರಳಿ ಪೂಜೆಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ.
/filters:format(webp)/newsfirstlive-kannada/media/media_files/2025/08/04/kl-rahul-delhi-capitals-2025-08-04-09-53-03.jpg)
ಕರ್ನಾಟಕದ ಹಲವು ದೇವಾಲಯಗಳಿಗೆ ರಾಹುಲ್​​ ಆಗಾಗ ಭೇಟಿ ನೀಡ್ತಾರೆ. ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಬಿಡುವಿದ್ದಾಗಲೆಲ್ಲಾ ತೆರಳಿ ದೇವರ ದರ್ಶನ ಪಡೀತಾರೆ. ಈಶ್ವರನ ಭಕ್ತನಾಗಿರೋ ರಾಹುಲ್​, 12 ಜೋರ್ತಿಲಿಂಗಗಳ ಪೈಕಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ಮಂದಿರ ಹಲವು ಬಾರಿ ಭೇಟಿ ನೀಡಿದ್ದೂ ಇದೆ.
ಕಳೆದ ಕೆಲ ವರ್ಷಗಳಿಂದ ಕೆ.ಎಲ್​ ರಾಹುಲ್​​ ಆದ್ಯಾತ್ಮಿಕ ಜೀವನದತ್ತ ಹೆಚ್ಚು ವಾಲಿದ್ದಾರೆ. ದೇವರ ಕೃಪಾಶೀರ್ವಾದವೋ, ಕಠಿಣ ಪರಿಶ್ರಮದ ಫಲವೋ ಗೊತ್ತಿಲ್ಲ. ಆನ್​ಫೀಲ್ಡ್​ ಹಾಗೂ ಆಫ್​​ ದ ಫೀಲ್ಡ್​ನಲ್ಲಿ ರಾಹುಲ್​ಗೆ ಯಶಸ್ಸು ಸಿಗ್ತಿದೆ. ಈ ಯಶಸ್ಸು ಮುಂದೆಯೂ ಕನ್ನಡಿಗ ರಾಹುಲ್​ಗೆ ಸಿಗ್ತಾನೆ ಇರಲಿ.
ಇದನ್ನೂ ಓದಿ:ಅದೃಷ್ಟವಂತ RCB ಕ್ಯಾಪ್ಟನ್​.. ಒಂದೇ ವರ್ಷ, ಎರಡು ಟ್ರೋಫಿಗೆ ಮುತ್ತಿಕ್ಕಿದ ರಜತ್ ಪಾಟಿದಾರ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us