ಟೀಮ್ ಇಂಡಿಯಾಗೆ ಗುಡ್​​ನ್ಯೂಸ್​​.. 579 ಕೋಟಿ ರೂಪಾಯಿಗೆ ಸ್ಪಾನ್ಸರ್​ಶಿಪ್ ಪಡೆದ ಟೈರ್​ ಕಂಪನಿ

ಟೀಮ್ ಇಂಡಿಯಾದ 3 ಮಾದರಿಯ ಪ್ರಾಯೋಜಕತ್ವದ ಹಕ್ಕುಗಳ (Sponsorship Rights)ನ್ನು ಅಪೊಲೊ ಟೈರ್ಸ್ (Apollo Tyres) ಕಂಪನಿ ಬರೋಬ್ಬರಿ 579 ಕೋಟಿ ರೂಪಾಯಿಗಳಿಗೆ ಗೆದ್ದುಕೊಂಡಿದೆ. ಅಪೊಲೊ ಟೈರ್ಸ್​​ನ ಸ್ಪಾನ್ಸರ್​ಶಿಪ್​ ಅವಧಿಯು ಮೂರು ವರ್ಷಗಳವರೆಗೆ ಇರಲಿದೆ.

author-image
Bhimappa
TEAM_INDIA (8)
Advertisment

ಟೀಮ್ ಇಂಡಿಯಾದ 3 ಮಾದರಿಯ ಪ್ರಾಯೋಜಕತ್ವದ ಹಕ್ಕುಗಳ (Sponsorship Rights)ನ್ನು ಅಪೊಲೊ ಟೈರ್ಸ್ (Apollo Tyres) ಕಂಪನಿ ಬರೋಬ್ಬರಿ 579 ಕೋಟಿ ರೂಪಾಯಿಗಳಿಗೆ ಗೆದ್ದುಕೊಂಡಿದೆ. ಅಪೊಲೊ ಟೈರ್ಸ್​​ನ ಸ್ಪಾನ್ಸರ್​ಶಿಪ್​ ಅವಧಿಯು ಮೂರು ವರ್ಷಗಳವರೆಗೆ ಇರಲಿದ್ದು ಒಟ್ಟು 121 ಪಂದ್ಯಗಳು ಹಾಗೂ 21 ಐಸಿಸಿ ಮ್ಯಾಚ್​ಗಳು ನಡೆಯಲಿವೆ. 

Apollo_Tyres

ಟೀಮ್ ಇಂಡಿಯಾದ ಮೂರು ಮಾದರಿಯ ಸ್ಪಾನ್ಸರ್​ಶಿಪ್​ ರೈಟ್ಸ್ ಪಡೆಯುತ್ತಿದ್ದಂತೆ ಹರಿಯಾಣ ಮೂಲದ ಗುರುಗ್ರಾಮ್​​ನ ಟೈರ್​ ತಯಾರಿಕಾ ಕಂಪನಿ ಅಪೊಲೊ ಟೈರ್ಸ್ ಖುಷಿ ವ್ಯಕ್ತಪಡಿಸಿದೆ. ಬಿಡ್ಡಿಂಗ್​ನಲ್ಲಿ ಕೊನೆವರೆಗೂ ಹಿಂದೆ ಬೀಳದ ಅಪೊಲೊ ಟೈರ್ಸ್ 100 ಅಲ್ಲ, 200 ಅಲ್ಲ ಬರೋಬ್ಬರಿ 579 ಕೋಟಿ ರೂಪಾಯಿಗಳಿಗೆ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಹೇಳಲಾಗಿದೆ. 

ಅಪೊಲೊ ಟೈರ್ಸ್ ಭಾರತ ಸೇರಿ 100ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಂಪನಿಯ ಬ್ರ್ಯಾಂಚ್​ಗಳನ್ನು ಒಳಗೊಂಡಿದೆ. ಬಿಡ್ಡಿಂಗ್​ನಲ್ಲಿ ಕ್ಯಾನ್ವಾ 544 ಕೋಟಿ ರೂಪಾಯಿಗಳವರೆಗೆ ಬಿಡ್ಡಿಂಗ್ ಮಾಡಿದ್ದರೇ, ಜೆಕೆ ಸೀಮೆಂಟ್​ 477 ಕೋಟಿ ರೂಪಾಯಿಗಳವರೆಗೆ ಹರಾಜು ಕರೆದಿದ್ದವು. ಆದರೆ ಅಪೊಲೊ ಟೈರ್ಸ್ ಬಿಡ್ಡಿಂಗ್ ಗೆಲ್ಲುವವರೆಗೂ ತನ್ನ ರೇಸ್​ ನಿಲ್ಲಿಸಲೇ ಇಲ್ಲ ಎನ್ನುವುದು ಗಮನಾರ್ಹವಾಗಿದೆ. 

ಹೊಸ ಸ್ಪಾನ್ಸರ್​ಶಿಪ್​ನಲ್ಲಿ ದ್ವಿಪಕ್ಷೀಯ ಹಾಗೂ ಐಸಿಸಿ ಪಂದ್ಯಗಳ ನಡುವೆ ಹಣ ಖರ್ಚು ಹಾಗುವುದು ಸ್ವಲ್ಪ ವ್ಯತ್ಯಾಸ ಇದ್ದರೂ ಪ್ರತಿ ಪಂದ್ಯಕ್ಕೆ 4.77 ಕೋಟಿ ರೂಪಾಯಿಗಳು ಖರ್ಚು ಆಗುತ್ತದೆ. ಆದರೆ ಬಿಸಿಸಿಐ ದ್ವಿಪಕ್ಷೀಯ ಪಂದ್ಯಗಳಿಗೆ 3.5 ಕೋಟಿ ರೂಪಾಯಿ ಹಾಗೂ ವರ್ಲ್ಡ್​​ಕಪ್​ ಪಂದ್ಯಗಳಿಗೆ 1.5 ಕೋಟಿ ರೂಪಾಯಿಗಳನ್ನು ನಿಗದಿ ಮಾಡಿತ್ತು.

ಇದನ್ನೂ ಓದಿ:ಅದೃಷ್ಟವಂತ RCB ಕ್ಯಾಪ್ಟನ್​.. ಒಂದೇ ವರ್ಷ, ಎರಡು ಟ್ರೋಫಿಗೆ ಮುತ್ತಿಕ್ಕಿದ ರಜತ್ ಪಾಟಿದಾರ್

india vs pakistan

ಟೀಮ್ ಇಂಡಿಯಾದ ಸ್ಪಾನ್ಸರ್​ಶಿಪ್​ನಿಂದ ಇತ್ತೀಚೆಗೆ ಡ್ರೀಮ್-11 ಹಿಂದೆ ಸರಿದಿತ್ತು. ಹೀಗಾಗಿ ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ತಂಡ ಸ್ಪಾನ್ಸರ್​ಶಿಪ್ ಇಲ್ಲದೇ ಆಡುತ್ತಿದೆ. ಸದ್ಯ ಈಗ ಅಪೊಲೊ ಟೈರ್ಸ್ ಸ್ಪಾನ್ಸರ್​ಶಿಪ್ ಪಡೆದುಕೊಂಡಿದೆ. ಮುಂದಿನ ಸರಣಿಯಿಂದ ಟೀಮ್ ಇಂಡಿಯಾದ ಆಟಗಾರರ ಜೆರ್ಸಿ ಮೇಲೆ ಅಪೊಲೊ ಟೈರ್ಸ್ ಜಾಹೀರಾತು ಕಾಣಿಸಿಕೊಳ್ಳಲಿವೆ. 
   ​         ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

BCCI ENDS DREAM 11 SPONSPORSHIP BCCI and sponsorship india vs pakistan asia cup Asia Cup 2025
Advertisment