/newsfirstlive-kannada/media/media_files/2025/09/16/rajat_kohli-2025-09-16-16-07-15.jpg)
ರಜತ್ ಪಾಟಿದಾರ್ ಆರ್ಸಿಬಿ ಕ್ಯಾಪ್ಟನ್ ಆದಾಗ ಮೂಗು ಮುರಿದವರೇ ಹೆಚ್ಚು. ಅನಾನುಭವಿ ನಾಯಕನ ತಂದು ಕಪ್ ಗೆಲ್ಲೋಕೆ ಆಗುತ್ತಾ ಎಂದು ಹೇಳ್ದವರಲ್ಲಿ ಆರ್ಸಿಬಿ ಫ್ಯಾನ್ಸ್ ಇದ್ದಾರೆ. ಆದ್ರೆ. ಕಳೆದ 9 ತಿಂಗಳ ಅಂತರದಲ್ಲಿ ಎಲ್ಲವನ್ನು ಬದಲಿಸಿದ್ದಾರೆ. ಬೆಸ್ಟ್ & ಗ್ರೇಟ್ ಕ್ಯಾಪ್ಟನ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ.
2025ರ ದುಲೀಪ್ ಟ್ರೋಫಿ ಅಂತ್ಯಗೊಂಡಿದೆ. ಸೌತ್ ಝೋನ್ ಎದುರಿನ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಸೆಂಟ್ರಲ್ ಝೋನ್, 11 ವರ್ಷಗಳ ಬಳಿಕ ದುಲೀಪ್ ಟ್ರೋಫಿಗೆ ಮುತ್ತಿಟ್ಟಿದೆ. ಆದ್ರೆ, ಸೆಂಟ್ರಲ್ ಝೋನ್ ಗೆಲುವಿನೊಂದಿಗೆ ರಜತ್ ಪಾಟಿದಾರ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಸೋಲಿಲ್ಲದ ಸರದಾರನಾಗಿ ಅಭಿಮಾನಿಗಳ ಮನ ಗೆದ್ದಿರುವ ರಜತ್ ಪಾಟಿದಾರ್, ಶ್ರೇಷ್ಠ ನಾಯಕನಾಗುವತ್ತ ಹೆಜ್ಜೆ ಹಾಕಿದ್ದಾರೆ.
9 ತಿಂಗಳು.. 3 ಟೂರ್ನಿ.. 2 ಚಾಂಪಿಯನ್ ಪಟ್ಟ..!
ರಜತ್ ಪಾಟಿದಾರ್.. ಸದ್ಯ ಭಾರತೀಯ ಕ್ರಿಕೆಟ್‌ನ ಸೋಲಿಲ್ಲದ ಸರದಾರ. 2024ರ ಡಿಸೆಂಬರ್ನಲ್ಲಷ್ಟೇ ನಾಯಕನ ಜರ್ನಿ ಶುರುಮಾಡಿದ ರಜತ್ ಪಾಟಿದಾರ್, ದುಲೀಪ್ ಟ್ರೋಫಿಯೊಂದಿಗೆ ಗೆದ್ದಿದ್ದು, ಎರಡು ಚಾಂಪಿಯನ್ ಪಟ್ಟಗಳನ್ನ. 9 ತಿಂಗಳ ಅಂತರದಲ್ಲಿ ನಡೆದ 3 ಟೂರ್ನಿಗಳ ಪೈಕಿ 2 ಟೂರ್ನಿಗಳಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಭಾರತೀಯ ಕ್ರಿಕೆಟ್ ಲೋಕದಲ್ಲಿ ನಾಯಕನಾಗಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ.
ಮೊದಲ ಅಗ್ನಿಪರೀಕ್ಷೆಯಲ್ಲಿ ಮಧ್ಯಪ್ರದೇಶ ರನ್ನರ್ಸ್..!
ಪವರ್ ಹಿಟ್ಟರ್ ಆಗಿದ್ದ ರಜತ್ ಪಾಟಿದಾರ್, 2024ರ ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ನಾಯಕರಾಗಿ ನೇಮಕವಾಗಿದ್ದರು. ಆದ್ರೆ, ಮೊದಲ ನಾಯಕತ್ವದ ಅಗ್ನಿಪರೀಕ್ಷೆಯಲ್ಲೇ ರಜತ್ ಪಾಟಿದಾರ್ ಕಂಡಿದ್ದು ಸಕ್ಸಸ್.
ನಾಯಕನಾಗಿ ಸೈಯದ್ ಮುಷ್ತಾಕ್ ಅಲಿಯಲ್ಲಿ ಮಧ್ಯಪ್ರದೇಶವನ್ನ ಯಶಸ್ವಿಯಾಗಿ ಮುನ್ನಡೆಸಿದ ಪಾಟಿದಾರ್, ಆಡಿದ 10 ಪಂದ್ಯಗಳ ಪೈಕಿ 8ರಲ್ಲಿ ಗೆಲುವಿನ ದಡ ಸೇರಿಸಿದ್ದರು. ಒತ್ತಡದ ಸನ್ನಿವೇಶಗಳಲ್ಲೇ ಬ್ಯಾಟಿಂಗ್ ಮಾಡಿದ್ದ ರಜತ್, 61.14 ಸರಾಸರಿಯಲ್ಲಿ ಬರೋಬ್ಬರಿ 428 ರನ್ ಕಲೆಹಾಕಿದ್ದರು. 186.04 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದ ರಜತ್, ನಾಯಕನಾಗಿಯೂ ಸಕ್ಸಸ್ ಕಂಡಿದ್ರು. ಮೊದಲ ಅವಕಾಶದಲ್ಲೇ ತಂಡವನ್ನ ಫೈನಲ್ಗೆ ಕೊಂಡೊಯ್ದಿದ್ರು.ಇದೇ ಆರ್ಸಿಬಿ ನಾಯಕತ್ವದ ಪಟ್ಟಕ್ಕೇರುವಂತೆ ಮಾಡಿತ್ತು.
ಐಪಿಎಲ್ನಲ್ಲಿ ರಜತ್ ‘ಚಾಂಪಿಯನ್’ ಕ್ಯಾಪ್ಟನ್..!
ದೇಶಿ ಕ್ರಿಕೆಟ್ನಲ್ಲಿ ಟಿ20ನಲ್ಲಿ ಗೆದ್ದಿದ್ದ ರಜತ್, ಐಪಿಎಲ್ನಲ್ಲಿ ಗೆಲ್ಲೋದು ನಿಜಕ್ಕೂ ಅಷ್ಟು ಸುಲಭದಿರಲಿಲ್ಲ. ದಿ ಬೆಸ್ಟ್ ಟೀಮ್ಸ್, 18 ವರ್ಷ ಕಪ್ ಗೆಲ್ಲದ ಒತ್ತಡ. ಗ್ರೇಟ್ ಪ್ಲೇಯರ್ಸ್ನ ಮ್ಯಾನೇಜ್ ಮಾಡೋದು ಚಾಲೆಂಜ್ ಎಲ್ಲವೂ ಇತ್ತು. ಆದ್ರೆ, ಇದನ್ನೇ ಛಲವಾಗಿ ಸ್ವೀಕರಿಸಿದ್ದ ರಜತ್, ನಾಯಕನಾಗಿ ಆನ್ಫೀಲ್ಡ್ನಲ್ಲಿ ಅದ್ಬುತ ಮೆಚ್ಯುರಿಟಿ ತೋರಿದರು. ಆಟಗಾರರ ಜೊತೆಗಿನ ಕಮ್ಯುನಿಕೇಷನ್ ಹಾಗೂ ನಿರ್ಧಾರಗಳಿಂದ ಎಲ್ಲರ ಮನ ಗೆದ್ದಿದ್ದ ರಜತ್ ಪಾಟಿದಾರ್, ಆನ್ಫೀಲ್ಡ್ನಲ್ಲಿ ಬ್ಯಾಟ್ನಿಂದಲೇ ಅಲ್ಲ. ನಾಯಕನಾಗಿಯೂ ಆರ್ಸಿಬಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದರು. ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಇದನ್ನೂ ಓದಿ:ಹೊಸ ಗರ್ಲ್ಫ್ರೆಂಡ್ ಜೊತೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ.. ಯಾರು ಈ ಬ್ಯೂಟಿ?
ವೆಸ್ಟ್ ಇಂಡೀಸ್ ಎದುರು ಕಮ್ಬ್ಯಾಕ್ ಮಾಡ್ತಾರಾ ರಜತ್?
ಐಪಿಎಲ್ ಮುಕ್ತಾಯದ ಬಳಿಕ ರಜತ್ ಕಾಣಿಸಿಕೊಂಡಿದ್ದೆ ದುಲೀಪ್ ಟ್ರೋಫಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಒಬ್ಬ ಬ್ಯಾಟ್ಸ್ಮನ್ ಆಗಿಯೂ ರನ್ ಕೊಳ್ಳೆ ಹೊಡೆದರು. 3 ಪಂದ್ಯಗಳಿಂದ 76.40ರ ಬ್ಯಾಟಿಂಗ್ ಅವರೇಜ್ನಲ್ಲಿ 382 ರನ್ ಗಳಿಸಿದ ರಜತ್, ಸೆಂಟ್ರಲ್ ಝೋನ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.
ಇದೇ ಪ್ರದರ್ಶನ ಭಾರತ ಎ ತಂಡದ ನಾಯಕ ಪಟ್ಟ ಸಿಗುವಂತೆ ಮಾಡಿದೆ. ಅಷ್ಟೇ ಅಲ್ಲ, ರಜತ್ ಪಾಟಿದಾರ್ ಕಮ್ಬ್ಯಾಕ್ ಕನಸಿಗೆ ನೀರೆರೆದಿದೆ. ಸಿಕ್ಕ ಅವಕಾಶದಲ್ಲಿ ಮಿಂಚಿದ್ರೆ, ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡೋ ದಿನ ದೂರವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ