/newsfirstlive-kannada/media/media_files/2025/09/16/india-vs-pakistan-2025-09-16-14-44-53.jpg)
ಇಂಡೋ-ಪಾಕ್​ ಪಂದ್ಯದಲ್ಲಿ ಆಟಕ್ಕಿಂತ ಹೆಚ್ಚು ಹೈಲೆಟ್​ ಆಗಿದ್ದೇ ಈ ಹ್ಯಾಂಡ್​ಶೇಕ್​ ವಿಚಾರ. ಪಂದ್ಯದ ಟಾಸ್​ ವೇಳೆಯೂ ಉಭಯ ತಂಡಗಳ ನಾಯಕರು ಶೇಕ್​ ಮಾಡಲಿಲ್ಲ. ಪಂದ್ಯದ ಅಂತ್ಯದ ವೇಳೆಯೂ ನಡೆದಿದ್ದು ಇದೆ.
ಸಿಕ್ಸರ್​ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ ಸೂರ್ಯ ಕುಮಾರ್, ಶಿವಂ ದುಬೆ ಜೊತೆಗೂಡಿ ನೇರವಾಗಿ ಡ್ರೆಸ್ಸಿಂಗ್​ ರೂಮ್​ನತ್ತ ಹೆಜ್ಜೆ ಹಾಕಿದ್ರು. ಹ್ಯಾಂಡ್​​ಶೇಕ್​ ಮಾಡೋಕೆ ಪಾಕ್​ ಆಟಗಾರರು ಕಾದಿದ್ರೂ ಕೂಡ ಟೀಮ್​ ಇಂಡಿಯಾ ಆಟಗಾರರು ಮೈದಾನಕ್ಕೆ ಬರಲಿಲ್ಲ. ಇಷ್ಟೇ ಅಲ್ಲ, ಪಾಕ್​ ಆಟಗಾರರೇ ಅವರ ಬಳಿ ತೆರಳಿದಾದ ಡ್ರೆಸ್ಸಿಂಗ್​ ರೂಮ್​ನ ಡೋರ್​ ಕ್ಲೋಸ್​ ಮಾಡಲಾಯ್ತು. ಟೀಮ್​ ಇಂಡಿಯಾದ ಈ ನಡೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಿಯಮ ಏನು ಹೇಳುತ್ತೆ..?
ಕ್ರಿಕೆಟ್ ಸೇರಿ ಯಾವುದೇ ಕ್ರೀಡೆಯಲ್ಲೂ ಆಟಗಾರರು ಪರಸ್ಪರ ಕೈಕುಲುಕುವುದು, ಅಭಿನಂದನೆ ಸಲ್ಲಿಸುವುದು ವಾಡಿಕೆ. ಇದು ಕ್ರೀಡಾಸ್ಫೂರ್ತಿಯ ಭಾಗ ಮಾತ್ರವಾಗಿದ್ದು, ಕಡ್ಡಾಯವೇನಲ್ಲ, ತಜ್ಞರ ಪ್ರಕಾರ, ಹ್ಯಾಂಡ್ ಶೇಕ್ ನಿರಾಕರಿಸುವುದು ತಾಂತ್ರಿಕವಾಗಿ ನಿಯಮ ಉಲ್ಲಂಘನೆ ಎಂದು ಪರಿಗಣಿಸಬಹುದಾದರೂ ಅಂತಹ ಉಲ್ಲಂಘನೆಗಳಿಗೆ ದಂಡ ಹೇರುವ ಕ್ರಮವಿಲ್ಲ. ಆರ್ಟಿಕಲ್​ 2.1.1 ಐಸಿಸಿ ಕೋಡ್​ ಆಫ್​ ಕಂಡಕ್ಟ್​​ನ ಪ್ರಕಾರ ಎದುರಾಳಿಯನ್ನ ಪರಸ್ಪರ ಗೌರವಿಸುವುದು ಕಡ್ಡಾಯ. ಪಂದ್ಯದ ಬಳಿಕ ಮ್ಯಾಚ್​ ಅಫಿಶಿಯಲ್ಸ್​, ಎದುರಾಳಿಯನ್ನ ಗೌರವಿಸಬೇಕು ಎಂದು ಹೇಳುತ್ತದೆ.
ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಶೇಕ್ ಹ್ಯಾಂಡ್ ಕಡ್ಡಾಯವೇನಲ್ಲ ಎಂದಿದ್ದಾರೆ. ನಿಯಮ ಪ್ರಕಾರ ಎದುರಾಳಿಗಳೊಂದಿಗೆ ಕೈಕುಲುಕುವ ಬಗ್ಗೆ ಯಾವುದೇ ನಿರ್ದಿಷ್ಟ ವಿವರಣೆಯಿಲ್ಲ. ಇದು ಕ್ರೀಡಾಸ್ಫೂರ್ತಿ ಹಾಗೂ ಸಂಪ್ರದಾಯ ಮಾತ್ರ. ಯಾವುದೇ ನಿಯಮ ಇಲ್ಲದಿರುವಾಗ ಭಾರತದ ಆಟಗಾರರು ಕೈಕುಲುಕದೇ ಇದ್ದಿದ್ದು ತಪ್ಪಲ್ಲ ಎಂದಿದ್ದಾರೆ.
ಇದನ್ನೂ ಓದಿ:ಬಾಲ ಸುಟ್ಟ ಬೆಕ್ಕಿನಂತೆ ಆದ ಪಾಕ್.. UAE ವಿರುದ್ಧದ ಪಂದ್ಯ ಬಾಯ್ಕಾಟ್ ಮಾಡುವ ಬೆದರಿಕೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us