/newsfirstlive-kannada/media/media_files/2025/09/16/suryakumar-yadav-and-tilak-varma-2025-09-16-09-54-26.jpg)
ಇಂಡೋ-ಪಾಕ್ ನಡುವಿನ ಹೈವೋಲ್ಟೆಜ್ ಪಂದ್ಯ ಮುಗಿದು 24 ಒಂದು ದಿನವೇ ಉರುಳಿದ್ರೂ ಪಂದ್ಯದ ಕಾವು ಕಡಿಮೆಯಾಗಿಲ್ಲ. ಬದ್ಧವೈರಿಯನ್ನ ಬ್ಯಾಟಲ್ನಲ್ಲಿ ಬಗ್ಗು ಬಡಿದ ಟೀಮ್ ಇಂಡಿಯಾ ಗೆಲುವಿನ ಪತಾಕೆ ಹಾರಿಸಿದ್ದಾಯ್ತು. ಟೀಮ್ ಇಂಡಿಯಾದ ಅಬ್ಬರದ ಮುಂದೆ ಕಂಗೆಟ್ಟ ಪಾಕಿಸ್ತಾನ ಬಿಲ ಸೇರಿದ್ದೂ ಆಯ್ತು. ಪಂದ್ಯದಲ್ಲಿ ಆದ ಹ್ಯಾಂಡ್ಶೇಕ್ ವಿವಾದ ದೊಡ್ಡ ಹಂಗಾಮ ಸೃಷ್ಟಿಸಿದೆ.
ಇಂಡೋ-ಪಾಕ್ ಪಂದ್ಯದಲ್ಲಿ ಆಟಕ್ಕಿಂತ ಹೆಚ್ಚು ಹೈಲೆಟ್ ಆಗಿದ್ದೆ ಈ ಹ್ಯಾಂಡ್ಶೇಕ್ ವಿಚಾರ. ಪಂದ್ಯದ ಟಾಸ್ ವೇಳೆಯೂ ಉಭಯ ತಂಡಗಳ ನಾಯಕರು ಶೇಕ್ ಮಾಡಲಿಲ್ಲ. ಪಂದ್ಯದ ಅಂತ್ಯದ ವೇಳೆಯೂ ನಡೆದಿದ್ದು ಇದೆ. ಸಿಕ್ಸರ್ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ ಸೂರ್ಯ ಕುಮಾರ್, ಶಿವಂ ದುಬೆ ಜೊತೆಗೂಡಿ ನೇರವಾಗಿ ಡ್ರೆಸ್ಸಿಂಗ್ ರೂಮ್ನತ್ತ ಹೆಜ್ಜೆ ಹಾಕಿದ್ರು. ಹ್ಯಾಂಡ್ಶೇಕ್ ಮಾಡೋಕೆ ಪಾಕ್ ಆಟಗಾರರು ಕಾದಿದ್ರೂ ಕೂಡ ಟೀಮ್ ಇಂಡಿಯಾ ಆಟಗಾರರು ಮೈದಾನಕ್ಕೆ ಬರಲಿಲ್ಲ. ಇಷ್ಟೇ ಅಲ್ಲ. ಪಾಕ್ ಆಟಗಾರರೇ ಅವರ ಬಳಿ ತೆರಳಿದಾದ ಡ್ರೆಸ್ಸಿಂಗ್ ರೂಮ್ನ ಡೋರ್ ಕ್ಲೋಸ್ ಮಾಡಲಾಯ್ತು. ಟೀಮ್ ಇಂಡಿಯಾದ ಈ ನಡೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ಪ್ರೀತಿಗಾಗಿ 600 ಕಿಮೀ ದೂರ ಸುತ್ತಿದಳು.. ಪ್ರಿಯಕರನ ಭೇಟಿ ಬೆನ್ನಲ್ಲೇ ದುರಂತ ಅಂತ್ಯ ಕಂಡಳು..
ಐಸಿಸಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ದೂರು
ಪೆಹಲ್ಗಾಮ್ ಟೆರೆರಿಸ್ಟ್ ಅಟ್ಯಾಕ್ನ ಕಾರಣಕ್ಕೆ ಪಾಕ್ ಆಟಗಾರರೊಂದಿಗೆ ಶೇಕ್ ಹ್ಯಾಂಡ್ ಮಾಡದೇ ಪರೋಕ್ಷವಾಗಿ ಪ್ರತಿಭಟನೆ ದಾಖಲಿಸೋದು ಟೀಮ್ ಇಂಡಿಯಾದ ಉದ್ದೇಶವಾಗಿತ್ತು. ಅದನ್ನ ಆಟಗಾರರು ಮಾಡಿದ್ರು ಕೂಡ. ಈ ವಿಚಾರ ಇದೀಗ ಕ್ರೀಡಾ ಸ್ಫೂರ್ತಿಯ ನೆಲೆಯಲ್ಲಿ ಚರ್ಚೆಯಾಗ್ತಿದೆ. ಟೀಮ್ ಇಂಡಿಯಾ ಆಟಗಾರರ ನಡೆ ಕ್ರೀಡಾಸ್ಫೂರ್ತಿಗೆ ವಿರುದ್ಧ ಎಂದಿರುವ ಪಾಕ್ ಕ್ರಿಕೆಟ್ ಬೋರ್ಡ್, ಐಸಿಸಿಗೆ ದೂರು ನೀಡಿದೆ.
ಇದನ್ನೂ ಓದಿ:ಟೀಮ್ ಇಂಡಿಯಾದಿಂದ ಕಣ್ಮರೆಯಾದ ಕೊಹ್ಲಿ, ರೋಹಿತ್ ಸೇರಿ ಈ ಆಟಗಾರರು ಏನ್ ಮಾಡ್ತಿದ್ದಾರೆ?
ರೆಫರಿ ವಜಾಕ್ಕೆ ಆಗ್ರಹಿಸಿದ ಪಾಕಿಸ್ತಾನ ಕ್ರಿಕೆಟ್
ಐಸಿಸಿ ಈ ಬಗ್ಗೆ ಕಂಪ್ಲೇಂಟ್ ಮಾಡಿರುವ ಪಿಸಿಬಿ, ಮ್ಯಾಚ್ ರೆಫರಿಯ ವಜಾಕ್ಕೂ ಆಗ್ರಹಿಸಿದೆ. ಟಾಸ್ ವೇಳೆ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾ ಬಳಿ ಹ್ಯಾಂಡ್ ಶೇಕ್ ಮಾಡದಂತೆ ಹೇಳಿದ್ರಂತೆ. ರೆಫರಿಯೇ ಹೀಗೆ ಹೇಳಿಕೊಟ್ಟಿದ್ದು ಕ್ರೀಡಾಸ್ಫೂರ್ತಿಗೆ ವಿರೋಧವಲ್ಲವೇ ಎಂದು ಪ್ರಶ್ನಿಸಿ ಐಸಿಸಿಗೆ ಪಿಸಿಬಿ ದೂರು ನೀಡಿದೆ. ರೆಫರಿ ವಜಾ ಮಾಡದಿದ್ರೆ ಏಷ್ಯಾಕಪ್ ಟೂರ್ನಿಯ ಮುಂದಿನ ಯುಎಇ ಪಂದ್ಯವನ್ನ ಬಾಯ್ಕಾಟ್ ಮಾಡೋ ಬೆದರಿಕೆಯನ್ನೂ ಹಾಕಿದೆ.
ಹ್ಯಾಂಡ್ಶೇಕ್ ಬಗ್ಗೆ ಐಸಿಸಿ ನಿಯಮ ಹೇಳೋದೇನು?
ಐಸಿಸಿ ಪ್ರಿಯಾಂಬಲ್ನಲ್ಲಿ ಸ್ಪಿರಿಟ್ ಆಫ್ ಕ್ರಿಕೆಟ್‌ನ ನಿಯಮದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆರ್ಟಿಕಲ್ 2.1.1 ಐಸಿಸಿ ಕೋಡ್ ಆಫ್ ಕಂಡಕ್ಟ್ನ ಪ್ರಕಾರ ಎದುರಾಳಿಯನ್ನ ಪರಸ್ಪರ ಗೌರವಿಸುವುದು ಕಡ್ಡಾಯ. ಪಂದ್ಯದ ಬಳಿಕ ಮ್ಯಾಚ್ ಅಫಿಶಿಯಲ್ಸ್, ಎದುರಾಳಿಯನ್ನ ಗೌರವಿಸಬೇಕು ಮತ್ತು ಹ್ಯಾಂಡ್ಶೇಕ್ ಮಾಡಲೇಬೇಕು ಎಂದು ನಿಯಮ ಹೇಳುತ್ತೆ. ಈ ನಿಯಮದ ಉಲ್ಲಂಘನೆ ಲೆವೆಲ್ 1 ಅಫೆನ್ಸ್ ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಹ್ಯಾಂಡ್ಶೇಕ್ ಮಾಡದ ಟೀಮ್ ಇಂಡಿಯಾ.. ಮ್ಯಾಚ್ ರೆಫರಿ ವಜಾಕ್ಕೆ ಪಾಕಿಸ್ತಾನ ಡಿಮ್ಯಾಂಡ್
ಪಾಕ್ ಕ್ರಿಕೆಟ್ ಬೋರ್ಡ್ ಡೈರೆಕ್ಟರ್ ತಲೆದಂಡ
ಐಸಿಸಿಗೆ ದೂರು ನೀಡುವ ಚರ್ಚೆಯ ನಡುವೆ ಪಾಕ್ ಕ್ರಿಕೆಟ್ ಬೋರ್ಡ್ನಲ್ಲಿ ಒಂದು ತಲೆದಂಡವೂ ಆಗಿದೆ. ಶಿಸ್ತು ಸಂಹಿತೆ ಉಲ್ಲಂಘನೆಯ ಕಾರಣವನ್ನ ನೀಡಿ ತಂಡದ ಡೈರೆಕ್ಟರ್ ಉಸ್ಮಾನ್ ವಾಹ್ಲಾನ ಪಿಸಿಬಿ ಅಮಾನತು ಮಾಡಿದೆ. ಪಂದ್ಯದ ವೇಳೆ ಪರಿಸ್ಥಿತಿಯನ್ನ ಸರಿಯಾಗಿ ನಿಭಾಯಿಸಿಲ್ಲ ಎಂದು ಹೇಳಿ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.
ಒಂದೆಡೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ ಎಂಬ ವರದಿಯಾಗ್ತಿದ್ರೆ, ಬಿಸಿಸಿಐ ಮಾತ್ರ ಮೌನಕ್ಕೆ ಶರಣಾಗಿದೆ. ನಮ್ಮ ಮೇಲೆ ಐಸಿಸಿಯಲ್ಲಾಗಲಿ ಅಥವಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನಲ್ಲಾಗಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ. ಹ್ಯಾಂಡ್ಶೇಕ್ ವಿವಾದ ಸದ್ಯ ದೊಡ್ದ ವಿವಾದವಾಗಿ ಪರಿಣಮಿಸಿದೆ. ಪಾಕಿಸ್ತಾನದ ದೂರು ನೀಡಿದ್ದು ನಿಜವೇ ಆಗಿದ್ರೆ ಐಸಿಸಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ:ಹೊಸ ಗರ್ಲ್ಫ್ರೆಂಡ್ ಜೊತೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ.. ಯಾರು ಈ ಬ್ಯೂಟಿ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ