ಟೀಮ್ ಇಂಡಿಯಾದಿಂದ ಕಣ್ಮರೆಯಾದ ಕೊಹ್ಲಿ, ರೋಹಿತ್ ಸೇರಿ ಈ ಆಟಗಾರರು ಏನ್ ಮಾಡ್ತಿದ್ದಾರೆ?

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ.. ಇದುವರೆಗೂ ಫುಲ್ ಫ್ರಿಯಾಗಿದ್ದಾರೆ. ಕೊಹ್ಲಿ ಐಪಿಎಲ್ ಬೆನ್ನಲ್ಲೇ ಲಂಡನ್​​ಗೆ ಹಾರಿ ಜೀವನ ಕಳೆಯುತ್ತಾ, ನೆಟ್ಸ್​ನಲ್ಲಿ ಅಭ್ಯಾಸ ನಡೆಸ್ತಿದ್ರೆ. ಇತ್ತ ವಿದೇಶಿ ಪ್ರವಾಸ ಮುಗಿಸಿ ಬಂದಿರುವ ರೋಹಿತ್, ಫಿಟ್ನೆಸ್ ಟೆಸ್ಟ್ ಎಲ್ಲವೂ ಮುಗಿಸಿ ಅಭ್ಯಾಸದ ಅಖಾಡಕ್ಕಿಳಿದಿದ್ದಾರೆ.

author-image
Bhimappa
ROHITH_SHARMA_TEAM
Advertisment

ಬ್ಯುಸಿ ಶೆಡ್ಯೂಲ್​ ಇದ್ದಾಗ ಆಟಗಾರರು ಏನ್ ಮಾಡ್ತಿದ್ದಾರೆ, ಏನ್ ಕಥೆ ಅನ್ನೋದು ಡೇ ಟು ಡೇ ಅಪ್​ಡೇಟ್ ಇರುತ್ತೆ. ಆದ್ರೆ, ಕ್ರಿಕೆಟ್​ನಿಂದ ದೂರ ಉಳಿದ ಆಟಗಾರರ ಕಥೆ ಹಾಗಲ್ಲ. ಕಂಪ್ಲೀಟ್ ಡಿಫರೆಂಟ್ ಆಗಿರುತ್ತೆ. ಹಾಗಾದ್ರೆ ಟೀಮ್​ ಇಂಡಿಯಾದಿಂದ ಮಿಸ್​ ಆಗಿರೋ ಕೆಲ ಮಿಸ್ಸಿಂಗ್ ಸ್ಟಾರ್​ಗಳು ಏನ್ ಮಾಡ್ತಿದ್ದಾರೆ. 

ಟೀಮ್ ಇಂಡಿಯಾ ಆಟಗಾರರು ಆನ್​ಫೀಲ್ಡ್​ನಲ್ಲೇ ಅಲ್ಲ, ಆಫ್​ ದಿ ಫೀಲ್ಡ್​ನಲ್ಲಿ ಏನ್ ಮಾಡ್ತಿದ್ದಾರೆ ಅನ್ನೋದು ಸಹ ಬಲು ಕ್ಯೂರಿಯಾಸಿಟಿ. ಕೆಲ ಆಟಗಾರರು ಇಂಟರ್​ನ್ಯಾಷನ್​ ತಂಡದಲ್ಲಿ ಆಡಿ ಬಹುದಿನಗಳೇ ಕಳೆದಿವೆ. ಅಂತಹ ಸ್ಟಾರ್ ಆಟಗಾರರು, ಟೀಮ್ ಇಂಡಿಯಾ ಪರ ಆಡಿ ಎಷ್ಟು ದಿನ ಆಯ್ತು?. ಈಗ ಏನ್ ಮಾಡ್ತಿದ್ದಾರೆ?.

ROHIT_SHARMA_TEAM

189 ದಿನದಿಂದ ಕಣ್ಮರೆ.. ಏನ್ ಮಾಡ್ತಿದ್ದಾರೆ  ಕೊಹ್ಲಿ, ರೋಹಿತ್..?

ಮಾರ್ಚ್​ 9, ನ್ಯೂಜಿಲೆಂಡ್ ಎದುರಿನ ಚಾಂಪಿಯನ್ಸ್​ ಟ್ರೋಫಿಯೇ ಕೊನೆ. ಆ ಬಳಿಕ ಐಪಿಎಲ್​​ನಲ್ಲಿ ಕಾಣಿಸಿಕೊಂಡಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ.. ಇದುವರೆಗೂ ಫುಲ್ ಫ್ರಿಯಾಗಿದ್ದಾರೆ. ಕೊಹ್ಲಿ ಐಪಿಎಲ್ ಬೆನ್ನಲ್ಲೇ ಲಂಡನ್​​ಗೆ ಹಾರಿ ಜೀವನ ಕಳೆಯುತ್ತಾ, ನೆಟ್ಸ್​ನಲ್ಲಿ ಅಭ್ಯಾಸ ನಡೆಸ್ತಿದ್ರೆ. ಇತ್ತ ವಿದೇಶಿ ಪ್ರವಾಸ ಮುಗಿಸಿ ಬಂದಿರುವ ರೋಹಿತ್, ಫಿಟ್ನೆಸ್ ಟೆಸ್ಟ್ ಎಲ್ಲವೂ ಮುಗಿಸಿ ಅಭ್ಯಾಸದ ಅಖಾಡಕ್ಕಿಳಿದಿದ್ದಾರೆ.

ರೋಹಿತ್, ವಿರಾಟ್​​ ಕೊಹ್ಲಿ ಮಾತ್ರವಲ್ಲ, ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಪರ ಕಾಣಿಸಿಕೊಂಡಿದ್ದು ಚಾಂಪಿಯನ್ಸ್ ಟ್ರೋಫಿಯಲ್ಲೇ ಲಾಸ್ಟ್​. ಈ ಬಳಿಕ ಐಪಿಎಲ್​, ನೆಟ್ಸ್ ಫ್ರ್ಯಾಕ್ಟೀಸ್​​ನಲ್ಲೇ ಕಾಣಿಸಿಕೊಳ್ತಿದ್ದ ಶಮಿ, ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದಾರೆ. ಆದ್ರೆ, ಆಡಿದ ಆ ಒಂದು ಪಂದ್ಯದ 2 ಇನ್ನಿಂಗ್ಸ್​ಗಳಿಂದ ಪಡೆದಿದ್ದು ಜಸ್ಟ್ ಒಂದು ವಿಕೆಟ್.

3 ವರ್ಷದಿಂದ ಇಶಾನ್ ಕಿಶನ್​​ ನಾಪತ್ತೆ..!

ನವೆಂಬರ್​ 28, 2023. ಆಸ್ಟ್ರೇಲಿಯಾ ಎದುರಿನ ಟಿ20 ಪಂದ್ಯವೇ ಕೊನೆ. ಈ ಪಂದ್ಯದ ಬಳಿಕ ಆಕ್ಷರಶಃ ಇಶಾನ್ ಜೀವನದಲ್ಲಿ ನಡೆದಿದ್ದು ಹೈಡ್ರಾಮಾ. ಟೀಮ್ ಇಂಡಿಯಾ ಹಾಗೂ ಬಿಸಿಸಿಐ ಕಾಂಟ್ರ್ಯಾಕ್ಟ್​ನಿಂದ ಔಟಾದ ಇಶಾನ್ ಕಿಶನ್, ಕಮ್​ಬ್ಯಾಕ್​ಗಾಗಿ ಮಾಡದ ಕಸರತ್ತಿಲ್ಲ. ದೇಶಿ ಕ್ರಿಕೆಟ್​ನಲ್ಲಿ ಅಬ್ಬರಿಸದರು ಬಿಸಿಸಿಐ ಬಾಸ್​ಗಳು ಕೃಪೆ ತೋರಲಿಲ್ಲ. ಪರಿಣಾಮ ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್​ ಆಡಿದ ಇಶಾನ್, ವಿದೇಶಿ ಪ್ರವಾಸವನ್ನೆಲ್ಲ ಮುಗಿಸಿ ಇಂಜುರಿ ಕಾರಣಕ್ಕೆ ಎನ್​ಸಿಎನಲ್ಲಿದ್ದಾರೆ.

ಋತುರಾಜ್ 426 ದಿನಗಳ ಏಳುಬೀಳು..!

ಟೀಮ್ ಇಂಡಿಯಾದಲ್ಲಿ ಋತುರಾಜ್​ ನೆಲೆಯೂರಿ ಬಿಟ್ರು. ಭವಿಷ್ಯದ ಕ್ಯಾಪ್ಟನ್ ಆಗೇ ಬಿಟ್ರು ಅಂತಿದ್ದ ಋತುರಾಜ್, 2024ರ ಜುಲೈನಲ್ಲಿ ಜಿಂಬಾಬ್ವೆ ಟೂರ್ ಮುಗಿಸಿದ್ದೆ ತಡ ಟೀಮ್ ಇಂಡಿಯಾದಿಂದಲೇ ಕಿಕ್​​ಔಟ್ ಆಗಿಬಿಟ್ರು. 426 ದಿನದಿಂದ ಏನೆಲ್ಲಾ ಸರ್ಕಸ್ ಮಾಡಿದ್ರೂ, ಕಮ್​​ಬ್ಯಾಕ್ ಮಾಡದ ಋತುರಾಜ್, ಐಪಿಎಲ್ ಇಂಜುರಿಯಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ಆಟಗಾರನಾಗಿ ದುಲೀಪ್ ಟ್ರೋಫಿಯಲ್ಲಿ ಕಾಣಿಸಿದ್ದರು.

ಇದನ್ನೂ ಓದಿ:RCB ಕ್ಯಾಪ್ಟನ್ ರಜತ್​​ ಮಡಿಲಿಗೆ ಮತ್ತೊಂದು ಕಪ್​.. ದುಲೀಪ್​ ಟ್ರೋಫಿಗೆ ಮುತ್ತಿಕ್ಕಿದ ಸೆಂಟ್ರಲ್ ಝೋನ್

ಸೂರ್ಯ, ಸಿರಾಜ್ ಸೇರಿ ಈ ಆಟಗಾರರು ಇನ್ಮುಂದೆ ಒನ್​ಡೇ ಮ್ಯಾಚ್ ಆಡುವುದೇ ಡೌಟ್​

1024 ದಿನಗಳಿಂದ ಸ್ವಿಂಗ್ ಮಾಸ್ಟರ್​ ಭವನೇಶ್ವರ್ಗಾಗಿ ಹುಡುಕಾಟ

2022, ನವೆಂಬರ್​ 22.. ನ್ಯೂಜಿಲೆಂಡ್ ಎದುರಿನ ಟಿ20 ಪಂದ್ಯವಾಡಿದ್ದೆ ಲಾಸ್ಟ್.. ಈ ಪಂದ್ಯದ ಬಳಿಕ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ತಾರೆ. ಟಿ20 ಸರಣಿಗಳಲ್ಲಿ ಕಾಣಿಸಿಕೊಳ್ತಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ 1024 ದಿನಗಳಿಂದ ಕಾದಿದ್ದು ನಿರಾಸೆ. ಐಪಿಎಲ್​​, ಯುಪಿ ಟಿ20 ಲೀಗ್​​ಗಳಲ್ಲಿ ಕಾಣಿಸಿಕೊಳ್ಳುವ ಭವನೇಶ್ವರ್, ಈಗಲೂ ಕಮ್​ಬ್ಯಾಕ್ ಕನಸಲ್ಲೇ ಇದ್ದಾರೆ. 

ಇವ್ರೇ ಅಲ್ಲ, 2024ರ ಟಿ20 ವಿಶ್ವಕಪ್​​ ತಂಡದಲ್ಲಿ ಕಾಣಿಸಿಕೊಂಡಿದ್ದ ಯಜುವೇಂದ್ರ ಚಹಲ್, ಡಿವೋರ್ಸ್​ ಅದ್ಮೇಲೆ ಸುದ್ದಿಯಾಗಿದ್ದು ಬಿಟ್ರೆ, ನಂತರ ಕಾಣಿಸಿಕೊಂಡಿದ್ದು ಕೌಂಟಿ ಕ್ರಿಕೆಟ್​ನಲ್ಲಿ ಮಾತ್ರವೇ ಅನ್ನೋದು ಮರೆಯುವಂತಿಲ್ಲ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Virat Kohli Rohith Sharma Asia Cup 2025
Advertisment