/newsfirstlive-kannada/media/media_files/2025/09/15/team_india_pak_ind-2025-09-15-20-09-00.jpg)
ಪಾಕಿಸ್ತಾನನ ವಿರುದ್ಧ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಅಮೋಘವಾದ ಗೆಲುವು ಪಡೆಯಿತು. ಈ ಗೆಲುವನ್ನು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಹಾಗೂ ಇಂಡಿಯನ್ ಆರ್ಮಿಗೆ ಅರ್ಪಿಸಲಾಯಿತು. ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರರ ಜೊತೆ ಭಾರತದ ಆಟಗಾರರು ಹ್ಯಾಂಡ್ಶೇಕ್ ಮಾಡದೇ ಇರುವುದು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಸದ್ಯ ಈ ಸಂಬಂಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕದ ತಟ್ಟಿದ್ದು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನ ವಜಾಗೊಳಿಸುವಂತೆ ಪಟ್ಟು ಹಿಡಿದಿದೆ. ಟಾಸ್ ಹಾಕಿದ ಮೇಲೆ ಪಾಕ್ ಕ್ಯಾಪ್ಟನ್ ಸಲ್ಮಾನ್ ಅಲಿ ಆಘಾ ಜೊತೆ ಸೂರ್ಯಕುಮಾರ್ ಹಸ್ತಲಾಘವ ಮಾಡದೇ ಇರುವುದರ ನಂತರ ಪಿಸಿಬಿ ದೂರು ನೀಡಿದೆ. ಐಸಿಸಿಗೆ ದೂರು ನೀಡಿರುವ ಪಿಸಿಬಿ ಮ್ಯಾಚ್ ರೆಫರಿ ಅವರನ್ನು ತೆಗೆದು ಹಾಕಬೇಕು ಎಂದು ಹೇಳಿದೆ.
ಇದನ್ನೂ ಓದಿ:ಹೊಸ ಗರ್ಲ್ಫ್ರೆಂಡ್ ಜೊತೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ.. ಯಾರು ಈ ಬ್ಯೂಟಿ?
ಪಿಸಿಬಿ ಹಾಗೂ ಎಸಿಸಿ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ, ಈ ಸಂಬಂಧ ದೂರು ನೀಡಿರುವುದರ ಪತ್ರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕ್ರಿಕೆಟ್ಗೆ ಸಂಬಂಧಿಸಿದಂತೆ ಐಸಿಸಿ ನೀತಿ ಸಂಹಿತೆ ಮತ್ತು ಎಂಸಿಸಿ ಕಾನೂನುಗಳ ಉಲ್ಲಂಘನೆ ಮಾಡಲಾಗಿದೆ. ಹೀಗಾಗಿ ತಕ್ಷಣಗಿಂದಲೇ ಮ್ಯಾಚ್ ರೆಫರಿನ ತೆಗೆದು ಹಾಕುವಂತೆ ಮನವಿ ಮಾಡಲಾಗಿದೆ.
ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ ಮೂಲಗಳ ಪ್ರಕಾರ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರು ಹ್ಯಾಂಡ್ಶೇಕ್ ಮಾಡುವುದಿಲ್ಲ ಎನ್ನುವ ಪ್ರೋಟೋಕಾಲ್ ಹೇಳುವುದನ್ನು ಮರೆತ್ತಿದ್ದಾರೆ. ಪಂದ್ಯದ ಕೊನೆಯಲ್ಲಿ ಪಾಕಿಸ್ತಾನದ ಆಟಗಾರರಿಗೆ ಹ್ಯಾಂಡ್ಶೇಕ್ ಪ್ರೋಟೋಕಾಲ್ ಹೇಳುವುದನ್ನ ಮರೆತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ರೆಫರಿ ಆಂಡಿ ಪೈಕ್ರಾಫ್ಟ್, ಪಾಕಿಸ್ತಾನ ತಂಡಕ್ಕೆ ಕ್ಷೆಮೆ ಕೇಳಿದ್ದಾರೆ. ಆದರೂ ಅವರನ್ನ ವಜಾ ಮಾಡಿ ಎಂದು ಪಿಸಿಬಿ ಹೇಳುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ