/newsfirstlive-kannada/media/media_files/2025/09/16/pratap-shimha-1-2025-09-16-09-31-14.jpg)
37 ವರ್ಷದ ಮಹಿಳೆಯೊಬ್ಬರು ಪ್ರಿಯಕರನ ಭೇಟಿಯಾಗಲು ಬರೋಬ್ಬರಿ 600 ಕಿಲೋ ಮೀಟರ್ ಕಾರು ಚಲಾಯಿಸಿದ್ದಾಳೆ. ಕೊನೆಗೂ ಆತನ ಭೇಟಿಯಾದ ಆಕೆ, ತನ್ನನ್ನೇ ಮದುವೆ ಆಗಬೇಕು ಎಂದು ಒತ್ತಾಯಿಸಿದ್ದಾಳೆ. ಆಗ ಇಬ್ಬರ ನಡುವೆ ನಡೆದಿದ್ದು ಊಹೆಗೆ ನಿಲುಕದ್ದಾಗಿದೆ. ಮಾರನೇಯ ದಿನ ಆಕೆಯ ನಿರ್ಜೀವ ದೇಹ ಕಾರಿನಲ್ಲಿ ಪತ್ತೆಯಾಗಿದೆ!
ಕತೆಯ ಹಿನ್ನೆಲೆ..
ರಾಜಸ್ಥಾನದ ಜುಂಜುನುವಿನ (Rajasthan's Jhunjhunu) ಅಂಗನವಾಡಿ ಮೇಲ್ವಿಚಾರಕಿ ಮುಕೇಶ್ ಕುಮಾರಿ (Mukesh Kumari), ದಶಕದ ಹಿಂದೆ ಪತಿಯಿಂದ ದೂರ ಆಗಿದ್ದಳು. ಕಳೆದ ಅಕ್ಟೋಬರ್‌ನಲ್ಲಿ ಬಾರ್ಮರ್‌ನ ಶಾಲಾ ಶಿಕ್ಷಕ ಮನರಾಮ್ (Manaram), ಈಕೆಯನ್ನ ಫೇಸ್ಬುಕ್ ಮೂಲಕ ಪರಿಚಯ ಮಾಡ್ಕೊಂಡಿದ್ದ. ಬಳಿಕ ಇಬ್ಬರೂ ಭೇಟಿಯಾಗಲು ಶುರುಮಾಡಿದ್ದರು. ಇವರ ಸ್ನೇಹ ಆತ್ಮೀಯತೆಗೆ ತಿರುಗಿತ್ತು.
ಆಕೆ ಆತನೊಂದಿಗೆ ಮದುವೆಯಾಗಲು ಬಯಸಿದ್ದಳು. ಮುಕೇಶ್ ಕುಮಾರಿ ಪತಿಗೆ ವಿಚ್ಛೇದನ ನೀಡಿದ್ದರೆ, ಮನರಮ್‌ನ ಡಿವೋರ್ಸ್ ಕೇಸ್ ಕೋರ್ಟ್ನಲ್ಲಿ ಬಾಕಿ ಇತ್ತು. ಪೊಲೀಸರ ಪ್ರಕಾರ, ಮುಕೇಶ್ ಕುಮಾರಿ ಮದುವೆಯಾಗಲು ಮನರಮ್ಗೆ ಒತ್ತಡ ಹಾಕುತ್ತಿದ್ದಳು. ಇದೇ ವಿಚಾರ ಜಗಳವಾಗಿ ವಿಕೋಪಕ್ಕೆ ಹೋಗಿದೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕಾರ್ಮಿಕರ ಕೆಲಸದ ಅವಧಿ ವಾರಕ್ಕೆ 48 ಗಂಟೆಯಿಂದ 60 ಗಂಟೆಗೆ ಏರಿಕೆ! ಕರ್ನಾಟಕ ಏನು ಮಾಡುತ್ತೆ?
ಸೆಪ್ಟೆಂಬರ್ 10 ರಂದು ಮುಕೇಶ್ ಕುಮಾರಿ ತನ್ನ ಆಲ್ಟೋ ಕಾರನ್ನು ಬಾರ್ಮರ್‌ನಲ್ಲಿರುವ ಮಣಾರಾಮ್‌ನ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಳು. ಗ್ರಾಮದ ಜನರನ್ನು ವಿಚಾರಿಸಿ ಮನರಮ್‌ನ ಮನೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಳು. ಅಲ್ಲಿ ಆತನ ಕುಟುಂಬಸ್ಥರ ಭೇಟಿಯಾಗಿ ಇಬ್ಬರ ಸಂಬಂಧದ ಬಗ್ಗೆ ತಿಳಿಸಿದ್ದಾಳೆ. ಇದು ಮನರಮ್‌ನ ಕೆರಳಿಸಿದೆ. ಕೊನೆಗೆ ಸ್ಥಳೀಯ ಪೊಲೀಸರು ಅಲ್ಲಿಗೆ ಬಂದಿದ್ದಾರೆ. ಪೊಲೀಸರು ಒಂದಷ್ಟು ಕೌನ್ಸೆಲಿಂಗ್ ಮಾಡಿದ ನಂತರ, ಕುಳಿತು ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಇದನ್ನೂ ಓದಿ:ಉಪೇಂದ್ರ ದಂಪತಿ ಫೋನ್ ಹ್ಯಾಕ್ ಆಗಿದ್ದು ಹೇಗೆ..? ಇಂಚಿಂಚೂ ಮಾಹಿತಿ VIDEO
ಅಂತೆಯೇ ಇಬ್ಬರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಒಪ್ಪಿದ್ದರು. ಆದರೆ ಸಂಜೆ ವೇಳೆ ಮನರಮ್, ಆಕೆಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾನೆ. ಪರಿಣಾಮ ಮುಕೇಶ್ ಕುಮಾರಿ ಅಲ್ಲೇ ಜೀವ ಬಿಟ್ಟಿದ್ದಾಳೆ. ಬಳಿಕ ಕೇಸ್ ಮುಚ್ಚಿಹಾಕಲು ಆರೋಪಿ, ಮುಕೇಶ್ ಕುಮಾರಿಯನ್ನ ಆಕೆಯ ಕಾರಿನ ಡ್ರೈವರ್ಸೀಟಿನಲ್ಲಿ ಇರಿಸಿ ಆಪಘಾತವೆಂದು ಬಿಂಬಿಸಲು ರಸ್ತೆಯಲ್ಲಿ ಉರುಳಿಸಿದ್ದ. ಬಳಿಕ ಮನೆಗೆ ಬಂದು ಏನೂ ನಡೆದಿಲ್ಲ ಎನ್ನುವಂತೆ ಮಲಗಿಕೊಂಡಿದ್ದ.
ಅಪಘಾತ ಎಂದು ಪೊಲೀಸರು ತನಿಖೆ ಆರಂಭಿಸಿದಾಗ ಸಣ್ಣ ಅನುಮಾನ ಬಂದಿತ್ತು. ಹೀಗಾಗಿ ಕುಲಂಕುಶವಾಗಿ ಪರಿಶೀಲನೆ ಮಾಡಿದ್ದಾರೆ. ಅಪಘಾತವಾದ ಸ್ಥಳದಲ್ಲಿ ಮನರಾಮ್ ಮತ್ತು ಮುಕೇಶ್ ಕುಮಾರ್ ಫೋನ್ಗಳು ಸಿಕ್ಕಿದ್ದವು. ಮನರಾಮ್ನ ಫೋನ್ ಸಿಕ್ಕಿರೋದು ಅನುಮಾನಕ್ಕೆ ಕಾರಣವಾಗಿತ್ತು. ತೀವ್ರ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ.
ಇದನ್ನೂ ಓದಿ:ಗುಡ್ನ್ಯೂಸ್.. ಐಟಿ ರಿಟರ್ನ್ಸ್ ಡೆಡ್ಲೈನ್ ವಿಸ್ತರಣೆ..! ಯಾವಾಗ ಲಾಸ್ಟ್ ಡೇಟ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ