/newsfirstlive-kannada/media/media_files/2025/09/16/it-returns-2025-09-16-07-07-53.jpg)
2025-26ರ ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವುದಕ್ಕೆ ನಿನ್ನೆ ಕೊನೆಯ ದಿನವಾಗಿತ್ತು. ಇದೀಗ ಒಂದು ದಿನದ ಮಟ್ಟಿಗೆ ಐಟಿ ರಿಟರ್ನ್ಸ್ನ ಡೆಡ್ಲೈನ್ ವಿಸ್ತರಣೆ ಮಾಡಲಾಗಿದೆ. ನೀವು ಇನ್ನೂ ಫೈಲ್ ಮಾಡದಿದ್ದರೆ ಇಂದು ಮಧ್ಯರಾತ್ರಿ 12 ಗಂಟೆಯೊಳಗೆ ಮಾಡಿಬಿಡಿ ಎಂದು ಸಿಬಿಡಿಟಿ ಸೂಚಿಸಿದೆ.
ದೇಶದಲ್ಲಿ ಪ್ರತಿ ವರ್ಷ ಜುಲೈ 30 ರವರೆಗೂ ಐ.ಟಿ.ರಿಟರ್ನ್ಸ್ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುತ್ತಿತ್ತು. ಕೆಲವೊಮ್ಮೆ ಬೇರೇ ಬೇರೆ ಕಾರಣಗಳಿಂದ ಐ.ಟಿ.ರಿಟರ್ನ್ಸ್ ಸಲ್ಲಿಕೆಯ ಡೆಡ್ ಲೈನ್ ಅನ್ನು ಆದಾಯ ತೆರಿಗೆ ಇಲಾಖೆಯು ವಿಸ್ತರಣೆ ಮಾಡುತ್ತಿತ್ತು. ಈ ಬಾರಿ ಮೊದಲೇ ಸೆಪ್ಟೆಂಬರ್ 15 ರವರೆಗೆ ಕಾಲಾವಕಾಶ ನೀಡಿತ್ತು. ಇದೀಗ ಒಂದು ವಿಸ್ತರಣೆ ಮಾಡಿದೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕಾರ್ಮಿಕರ ಕೆಲಸದ ಅವಧಿ ವಾರಕ್ಕೆ 48 ಗಂಟೆಯಿಂದ 60 ಗಂಟೆಗೆ ಏರಿಕೆ! ಕರ್ನಾಟಕ ಏನು ಮಾಡುತ್ತೆ?
ಕಳೆದ ವರ್ಷ ಜುಲೈ 30 ರೊಳಗೆ 7.28 ಕೋಟಿ ಮಂದಿ ಐ.ಟಿ. ರಿಟರ್ನ್ಸ್ ಸಲ್ಲಿಸಿದ್ದರು. ಈ ವರ್ಷ ಸೆಪ್ಟೆಂಬರ್ 15 ರವರೆಗೆ 6.69 ಕೋಟಿ ಜನರು ಐ.ಟಿ.ರಿಟರ್ನ್ಸ್ ಸಲ್ಲಿಸಿದ್ದಾರೆ. ಈ ವರ್ಷ 8 ಕೋಟಿ ಜನರು ಐ.ಟಿ.ರಿಟರ್ನ್ಸ್ ಸಲ್ಲಿಕೆ ಮಾಡಬಹುದು ಎಂದು ಚಾರ್ಟೆಡ್ ಅಕೌಂಟೆಂಟ್ಗಳು ಅಂದಾಜು ಮಾಡಿದ್ದಾರೆ.
ಒಂದು ವೇಳೆ ಇಂದು ಮಧ್ಯರಾತ್ರಿ 12 ಗಂಟೆಯೊಳಗೆ ಐ.ಟಿ.ರಿಟರ್ನ್ಸ್ ಸಲ್ಲಿಕೆ ಮಾಡದಿದ್ದರೆ ಡಿಸೆಂಬರ್ 31 ರವರೆಗೆ ಐ.ಟಿ. ರಿಟರ್ನ್ಸ್ ಸಲ್ಲಿಕೆ ಮಾಡಲು ಅವಕಾಶ ಇದೆ. ಆದರೇ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಆದಾಯ ಇದ್ದರೆ ಒಂದು ಸಾವಿರ ರೂಪಾಯಿ ದಂಡ ಪಾವತಿಸಬೇಕು. ವಾರ್ಷಿಕ 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಇದ್ದರೆ 5 ಸಾವಿರ ದಂಡ ಪಾವತಿಸಬೇಕು. ಜೊತೆಗೆ ತೆರಿಗೆಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಇದನ್ನೂ ಓದಿ:ಪಾಸಿಟೀವ್ ವಿಷಯದೊಂದಿಗೆ ದಿನ ಆರಂಭಿಸಿ.. ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..!
ಐಟಿ ರಿಟರ್ನ್ಸ್ ಫೈಲ್ ಮಾಡಲು ಇನ್ನೂ ಹತ್ತು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಐ.ಟಿ. ರಿಟರ್ನ್ಸ್ ಫೈಲ್ ಮಾಡದೇ ಇರುವವರು ಬಾಕಿ ಉಳಿದಿರುವ ಕೆಲವೇ ಗಂಟೆಗಳಲ್ಲಿ ಐ.ಟಿ. ರಿಟರ್ನ್ಸ್ ಫೈಲ್ ಮಾಡಿ. ಆದಾಯ ತೆರಿಗೆ ಇಲಾಖೆಗೆ ಪಾವತಿಸಬೇಕಾದ ದಂಡದಿಂದ ಬಚಾವ್ ಆಗಿ.
ವರ್ಷ ಐ.ಟಿ. ರಿಟರ್ನ್ಸ್ ಫೈಲ್ ಮಾಡಿದವರಿಗೆ ಕೆಲವೇ ಗಂಟೆಗಳಲ್ಲಿ ಐ.ಟಿ. ರೀಫಂಡ್ ಕೂಡ ಬರುತ್ತಿದೆ. ತ್ವರಿತಗತಿಯಲ್ಲಿ ರೀಫಂಡ್ ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ನೀಡುತ್ತಿದೆ. ನೀವು ಕೆಲಸ ಮಾಡುವ ಕಂಪನಿಯಿಂದ ಫಾರಂ 16(ಎ) ಮತ್ತು (ಬಿ) ಪಡೆದು ನೀವೇ ಅಥವಾ ಚಾರ್ಟರ್ಡ್ ಅಕೌಂಟೆಂಟ್ಗಳ ನೆರವು ಪಡೆದು ಐ.ಟಿ.ರಿಟರ್ನ್ಸ್ ಫೈಲ್ ಮಾಡಿ.
ಇದನ್ನೂ ಓದಿ:ಇನ್ಪೋಸಿಸ್ ನಲ್ಲಿ 400 ಮಂದಿಗೆ ಲೇ ಆಫ್ : ಕಾರಣವೇನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.