ರಿಯಲ್ ಸ್ಟಾರ್ ಉಪ್ಪೇಂದ್ರ.. ಕನ್ನಡ ಚಿತ್ರರಂಗಕ್ಕೆ ಡಿಫರೆಂಟ್ ಅಂದರೆ ಏನು ಅಂತ ತೋರಿಸಿಕೊಟ್ಟ ನಟ, ನಿರ್ದೇಶಕ ಬುದ್ಧಿವಂತ. ಆದ್ರೆ ಇದೇ ಬುದ್ದಿವಂತನನ್ನೇ ಸೈಬರ್ ಖದೀಮರು ದಡ್ಡರನ್ನಾಗಿಸಿದ್ದು, ದಂಪತಿ ಸಮೇತ ಸದಾಶಿವನಗರ ಠಾಣೆ ಮೆಟ್ಟಿಲೇರುವಂತೆ ಆಗಿದೆ.
ಜಸ್ಟ್ ಒಂದು ಆರ್ಡರ್ ಕಾಲ್ .. ಮೂವರ ಫೋನೂ ಹ್ಯಾಕ್ ಮಾಡ್ಬಿಟ್ಟಿದೆ.. ಏನಾಗ್ತಿದೆ ಅಂತ ಗೊತ್ತಾಗದೇ ಅಲ್ಲಿ ಸೆಲೆಬ್ರೀಟಿಸ್ ಒದ್ದಾಡ್ತಿದೆ.. ನಾಲ್ಕು ಗೋಡೆಯಲ್ಲಿ ಕುಳಿತು ಕೈ ಬೆರಳಲ್ಲೇ ಆಟ ಆಡ್ತಿರೋ ಸೈಬರ್ಸ್ ಕ್ಲೀನ್ ಆಗಿ ಮೂರು ನಾಮ ಹಾಕ್ಬಿಟ್ಟಿದ್ದಾರೆ..
ನಟಿ ಪ್ರಿಯಾಂಕ : ಹಲೋ ಯಾರು?
ಸೈಬರ್ ವಂಚಕ : ಹಲೋ ಮೇಡಂ ನಿಮಗೆ ಒಂದು ಪಾರ್ಸೆಲ್ ಇದೆ.. ಆದರೆ ಅಡ್ರೆಸ್ ಗೊತ್ತಾಗ್ತಿಲ್ಲ.. ಒಂದು ಕೆಲ್ಸ ಮಾಡಿ, ನಾನು ಒಂದು ನಂಬರ್ ಕೊಡ್ತೀವಿ ಅದಕ್ಕೆ ಡಯಲ್
ನಟಿ ಪ್ರಿಯಾಂಕ : ಓಕೆ ಯಾವುದು ಆ ನಂಬರ್
ಸೈಬರ್ ವಂಚಕ : ಓಕೆ ಹೇಳ್ತೀವಿ ನೋಟ್ ಮಾಡ್ಕೊಂಡು ಬಿಡಿ *121*9279295167#
ಕಾಲ್ ಟ್ರ್ಯಾಪಿಂಗ್ ಆಪರೇಷನ್!
ಮೊದಲಿಗೆ ತಮ್ಮ ಫೋನ್ನಿಂದ ಕಾಲ್ ಮಾಡಿದಾಗ, ಕನೆಕ್ಟ್ ಆಗ್ತಿರ್ಲಿಲ್ವಂತೆ.. ಹೀಗಾಗಿ ಪತಿ ಉಪೇಂದ್ರ ಮೊಬೈಲ್ನಿಂದ ಕರೆ ಮಾಡಿದ್ರೆ ಆಗಲೂ ನೋಟ್ ರೀಚೇಬಲ್.. ಆಮೇಲೆ ಮ್ಯಾನೇಜರ್ ಮಹಾದೇವ್ ಮೊಬೈಲ್ನಿಂದ್ಲೂ ಕಾಲ್ ಮಾಡಿದಾಗಲೂ ಕನೆಕ್ಟ್ ಆಗದೇ ಇದ್ದಾಗ ದಂಪತಿ ಗೊಂದಲಕ್ಕೆ ಒಳಗಾಗಿದ್ರು.. ಅತ್ತ ಸೈಬರ್ ವಂಚಕರು ಮೂವರನ್ನ ಫೋನ್ ಅನ್ನೂ ಹ್ಯಾಕ್ ಮಾಡಿ ಅವ್ರಿಗೆ ಬರ್ತಿದ್ದ ಫೋನ್ಗಳನ್ನ ತಮಗೆ ಫಾರ್ವರ್ಡ್ ಮಾಡಿಕೊಳ್ತಿದ್ರು.. ಪ್ರಿಯಾಂಕ ವಾಟ್ಸ್ ಆ್ಯಪ್ ಅನ್ನು ತನ್ನ ಸಿಸ್ಟಮ್ ನಲ್ಲಿ ಲಾಗಿನ್ ಮಾಡಿ ಆಟ ಶುರುಮಾಡಿದ್ರು.. ಪ್ರಿಯಾಂಕ ದಿನನಿತ್ಯ ಕಾಂಟ್ಯಾಕ್ಟ್ ಇರೋರಿಗೆ ಮಾತ್ರ ಹಣಕ್ಕಾಗಿ ಮೆಸೇಜ್ ಹೋಗಿತ್ತು.
ಇದನ್ನೂ ಓದಿ:ಪಾಸಿಟೀವ್ ವಿಷಯದೊಂದಿಗೆ ದಿನ ಆರಂಭಿಸಿ.. ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..!
ಸೈಬರ್ ವಂಚಕರು : ನನಗೆ ಒಂಚೂರು ಅರ್ಜೆಂಟ್ ಇದೆ.. ನಿಮ್ಮಿಂದ ಸಹಾಯ ಆಗ್ಬೇಕಿತ್ತು..
ಪ್ರಿಯಾಂಕ ಸ್ನೇಹಿತ : ಏನ್ ಹೇಳಿ ಮೇಡಂ
ಸೈಬರ್ ವಂಚಕರು : ನಿಮ್ಮ ಅಕೌಂಟ್ನಲ್ಲಿ 55 ಸಾವಿರ ಇರ್ಬೋದಾ? ನಾನು 2 ಗಂಟೆಯಲ್ಲಿ ಅದನ್ನರಿಟರ್ನ್ ಮಾಡ್ಬಿಡ್ತೀನಿ, ನನ್ನ ಯುಪಿಐ ಯಾಕೋ ಕೈ ಕೊಟ್ಟಿದೆ.. ನನಗೆ ತುಂಬಾ ಅರ್ಜೆಂಟ್ ಇದೆ..
ಪ್ರಿಯಾಂಕ ಸ್ನೇಹಿತ : ಓಕೆ ಖಂಡಿತಾ ಮೇಡಂ ಅಕೌಂಟ್ ಡಿಟೇಲ್ಸ್ ಕಳುಹಿಸಿ..
ಇದನ್ನೂ ಓದಿ:ಕುರುಬ ಸಮುದಾಯ ST ಪಟ್ಟಿಗೆ ಸೇರಿಸುವ ಬಗ್ಗೆ ಇವತ್ತು ಮಹತ್ವದ ಸಭೆ, ಭಾರೀ ಕುತೂಹಲ
ಇದು ನಟಿ ಪ್ರಿಯಾಂಕ ಅವ್ರ ಹೆಸ್ರಲ್ಲಿ ಸೈಬರ್ ವಂಚಕರು ವಾಟ್ಸಾಪ್ ಮೂಲಕ ತನ್ನ ಪರಿಚಯಸ್ಥರಿಗೆ ಮಾಡಿರೋ ವಾಟ್ಸಾಪ್ ಮೇಸೇಜ್.. ಇದೊಂದು ಸಂದೇಶ ಅಷ್ಟೇ ಅಲ್ಲ ಬ್ಯಾಕ್ ಟು ಬ್ಯಾಕ್ ಇಂತಹ ಮೆಸೇಜ್, ಆಡಿಯೋ ಕಾಲ್ ತನ್ನ ಸ್ನೇಹಿತರಿಗೆ, ಸಂಬಂಧಿಕರಿಗೆ ಹೋಗ್ತಿದೆ ಅಂತ ಗೊತ್ತಾದಾಗ ನಾವು ಟ್ರ್ಯಾಪ್ ಆಗಿದ್ದೀವಿ.. ಮೊಬೈಲ್ ಹ್ಯಾಕ್ ಆಗಿದೆ ಅನ್ನೋದು ದಂಪತಿಗೆ ಗೊತ್ತಾಗಿದೆ.. ತಕ್ಚಣ ಎಚ್ಚೆತ್ತ ಉಪ್ಪೇಂದ್ರ ದಂಪತಿ ಸದಾಶಿವನಗರ ಠಾಣೆಗೆ ದೂರು ಕೊಟ್ಟಿದ್ದು, ಇಂತಹ ಸಂದೇಶ ಬಂದ್ರೆ ದಯವಿಟ್ಟು ಹಣ ಕಳುಹಿಸಬೇಡಿ ಅಂತ ಮನವಿ ಮಾಡಿ ಎಚ್ಚರಿಸಿದ್ದಾರೆ.
ಏನೇ ಹೇಳಿ.. ಡೇ ಬೈ ಡೇ ಸೈಬರ್ ವಂಚಕರ ಗಾಳಕ್ಕೆ ಬೀಳುತ್ತಿರೋರ ಸಂಖ್ಯೆ ಹೆಚ್ಚಾಗ್ತಾನೇ ಇದೆ.. ಮೊನ್ನೆ ಎಕ್ಸ್ ಎಂಎಲ್ ಅವ್ರು 30 ಲಕ್ಷ ಕಳೆದುಗೊಂಡ್ರು ಈಗ ಸೆಲೆಬ್ರಿಟಿ, ನಾಳೆ ನಿಮಗೂ ಹೀಗೆ ಆದ್ರೂ ಅಚ್ಚರಿ ಇಲ್ಲ.. ಸೋ ಮತ್ತೆ ಮತ್ತೆ ಹೇಳ್ತಿದ್ದೀವಿ ಸೈಬರ್ ವಂಚರ ಬಗ್ಗೆ ಇರ್ಲಿ ಎಚ್ಚರ.. ಫೋನ್ ಮಾಡಿ ಸುಳ್ಳು ಹೇಳಿ ಹೆದರಿಸಿ ದುಡ್ಡು ಕೀಳೋರ ಬಗ್ಗೆ ಬಿ ಅಲರ್ಟ್.
ಇದನ್ನೂ ಓದಿ: ಬಿಲ್ಡಿಂಗ್ನಿಂದ ತಳ್ಳಿ ಮಗುವಿನ ಜೀವ ತೆಗೆದ ಕೇಸ್; ಅಸಲಿ ಸತ್ಯ ಬಾಯಿಬಿಟ್ಟ ಮಲತಾಯಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ