/newsfirstlive-kannada/media/media_files/2025/09/16/bidar-stepmother-2025-09-16-08-02-36.jpg)
ತಂದೆಗೆ ಎರಡನೇ ಹೆಂಡ್ತಿಯಾದವಳು, ಪುಟ್ಟ ಬಾಲಕಿಗೆ ತಾಯಿ ಆಗ್ತೀನಿ ಎಂದು ಬಂದಿದ್ದ ಮಲತಾಯಿ ರಾಕ್ಷಸಿಯಾಗ್ಬಿಟ್ಟಿದ್ದಾಳೆ. ಬಿಲ್ಡಿಂಗ್‌ನಿಂದ ಬಿದ್ದು ಮೊಮ್ಮಗಳು ಜೀವ ಬಿಟ್ಟಳು ಅನ್ಕೊಂಡಿದ್ದ ಅಜ್ಜಿಗೆ ಮಲತಾಯಿಯ ಕ್ರೌರ್ಯವನ್ನ ಸಿಸಿಟಿವಿ ಬಿಚ್ಚಿಟ್ಟಿದೆ.
ಹೌದು, ತಾಯಿ ಸ್ಥಾನ ತುಂಬುತ್ತೀನಿ ಅಂತ ಬಂದಿದ್ದ ಮಲತಾಯಿಯೇ ಬಾಲಕಿ ಜೀವವನ್ನ ಬಲಿ ಪಡೆದಿದ್ದಾಳೆ. 3ನೇ ಮಹಡಿಯಿಂದ 7 ವರ್ಷದ ಶಾನವಿಯನ್ನ ತಳ್ಳಿ ಮಲತಾಯಿ ರಾಧಾ ಹ*ಗೈದಿರೋ ಘಟನೆ ಬೀದರ್‌ನ ಆದರ್ಶ ಕಾಲೋನಿಯಲ್ಲಿ ನಡೆದಿದೆ.
ಇದನ್ನೂ ಓದಿ: ಗುಡ್ನ್ಯೂಸ್.. ಐಟಿ ರಿಟರ್ನ್ಸ್ ಡೆಡ್ಲೈನ್ ವಿಸ್ತರಣೆ..! ಯಾವಾಗ ಲಾಸ್ಟ್ ಡೇಟ್..?
ಸಿಸಿಟಿವಿಯಲ್ಲಿ ಮಲತಾಯಿ ರಾಧಾ ಓಡಾಡುವ ದೃಶ್ಯ ಕೂಡ ಸೆರೆಯಾಗಿದೆ. ಬಾಲಕಿ ಜೊತೆ 3ನೇ ಮಹಡಿಯಲ್ಲಿದ್ದ ಮಲತಾಯಿ ಕುರ್ಚಿ ಮೇಲೆ ಉಲ್ಟಾ ಬುಟ್ಟಿ ಇಟ್ಟು ಅದರ ಮೇಲೆ ಬಾಲಕಿಯನ್ನ ನಿಲ್ಲಿಸಿದ್ಲು. ಕೆಳಗಡೆ ಬಾಲಕಿಗೆ ಏನನ್ನೋ ತೋರಿಸೋ ಹಾಗೆ ಮಹಡಿ ಮೇಲಿಂದ ಬಾಲಕಿಯನ್ನ ತಳ್ಳಿದ್ದಾಳೆ. ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಬಯಲಾಗಿದೆ.
ರಾಕ್ಷಸಿ ಮಲತಾಯಿ!
ಶಾನವಿ ತಾಯಿ ಟಿಬಿ ಕಾಯಿಲೆಗೆ ತುತ್ತಾಗಿ 6 ವರ್ಷಗಳ ಹಿಂದೆ ಮೃತಪಟ್ಟಿದ್ರು. ಬಳಿಕ ಶಾನವಿ ತಂದೆ ಸಿದ್ಧಾಂತ 2023ರಲ್ಲಿ ರಾಧಾಳ ಜೊತೆ ಎರಡನೇ ಮದ್ವೆಯಾಗಿದ್ರು. ಸಿದ್ಧಾಂತ ಮತ್ತು ರಾಧಾಗೆ ಎರಡು ಅವಳಿ ಮಕ್ಕಳ ಜನನ ಆಗಿತ್ತು. ರಾಧಾಗೆ ಎರಡು ಮಕ್ಕಳ ಆದ ಬಳಿಕ ಶಾನವಿಯನ್ನ ಕಂಡ್ರೆ ಕತ್ತಿ ಮಸೆಯುತ್ತಿದ್ಲು. ಯಾವಾಗ್ಲೂ ಶಾನವಿಗೆ ಬೈಯ್ಯೋದು ಮತ್ತು ಮನೆಗೆಲಸವನ್ನ ರಾಧಾ ಬಾಲಕಿ ಕೈಯಲ್ಲಿ ಮಾಡಿಸ್ತಿದ್ಲು. ಆಗಸ್ಟ್ 27ರಂದು ಕಟ್ಟಡದಿಂದ ಬಿದ್ದು ಶಾನವಿ ಸಾ*ನ್ನಪ್ಪಿದ್ಲು. ನಾವೆಲ್ಲಾ ಬಾಲಕಿ ಆಟವಾಡೋಕೆ ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ಲು ಅನ್ಕೊಂಡಿದ್ವಿ. ಹೀಗಾಗಿ ಆಕಸ್ಮಿಕ ಸಾವು ಎಂದು ಗಾಂಧಿ ಗಂಜ್ ಠಾಣೆಗೆ ದೂರು ದಾಖಲಾಗಿತ್ತು. ಆದ್ರೆ ಪಕ್ಕದ ಮನೆಯ ಸಿಸಿ ಕ್ಯಾಮೆರಾದಲ್ಲಿ ಶಾನವಿ ತಳ್ಳಿದ್ದ ದೃಶ್ಯ ಸೆರೆಯಾಗಿದೆ..
ಸದ್ಯ ಮಲತಾಯಿ ರಾಧಾಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಸ್ತಿಗಾಗಿ ತಳ್ಳಿರೋದಾಗಿ ಆರೋಪಿ ರಾಧಾ ತಪ್ಪೊಪ್ಪಿಕೊಂಡಿದ್ದಾಳೆ.. ತನ್ನ ಅವಳಿ ಮಕ್ಕಳಿಗೆ ಶಾನವಿ ಮುಳುವಾಗ್ತಾಳೆಂದು ಮಲತಾಯಿ ರಾಧಾ ಶಾನವಿನಾ ಕೊ* ಮಾಡಿದ್ದಾಳೆ ಎಂದು ಮೃತ ಬಾಲಕಿ ಅಜ್ಜಿ ವಿಜಯಶ್ರೀ ದೂರಿನ ಮೇರೆಗೆ FIR ದಾಖಲಾಗಿದೆ. ತಾಯಿ ಇಲ್ಲದ ಶಾನವಿಗೆ ರಾಧಾನೇ ತಾಯಿ ಆಗ್ಬೇಕಿತ್ತು. ಆದ್ರೆ ಚಿಕ್ಕಮ್ಮನಿಂದಲೇ ಪುಟ್ಟ ಬಾಲಕಿ ಹ*ಯಾಗಿರೋದು ನಿಜಕ್ಕೂ ದುರಂತ.
ಇದನ್ನೂ ಓದಿ:ಕುರುಬ ಸಮುದಾಯ ST ಪಟ್ಟಿಗೆ ಸೇರಿಸುವ ಬಗ್ಗೆ ಇವತ್ತು ಮಹತ್ವದ ಸಭೆ, ಭಾರೀ ಕುತೂಹಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ