/newsfirstlive-kannada/media/media_files/2025/08/20/darshan-5-2025-08-20-13-17-47.jpg)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಡೆವಿಲ್ ಸಿನಿಮಾದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ ಎನ್ನಲಾಗಿದೆ. ಇದರಿಂದ ಚಿತ್ರತಂಡವು ಡೆವಿಲ್ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದ್ರೆ ನೆಮ್ಮದಿಯಾಗ್ ಇರ್ಬೇಕು ಎನ್ನುವ ಸಾಂಗ್ ಈಗಾಗಲೇ ತಯಾರಾಗಿದ್ದು ಇದೇ ಆಗಸ್ಟ್​ 24 ರಂದು ಭಾನುವಾರ ಬೆಳಗ್ಗೆ 10:05ಕ್ಕೆ ರಿಲೀಸ್ ಆಗಲಿದೆ.
ದರ್ಶನ್ ಅವರು ಪ್ರಕರಣವೊಂದರಲ್ಲಿ ಹೈಕೋರ್ಟ್​ನಿಂದ ಜಾಮೀನು ಪಡೆದು ಹೊರ ಬಂದಿದ್ದರು. ಆದರೆ ಸುಪ್ರೀಂ ಕೋರ್ಟ್​ ಈ ಜಾಮೀನು ಬಗ್ಗೆ ವಿಚಾರಣೆ ನಡೆಸಿ ದರ್ಶನ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಿದೆ. ಇನ್ನು ಆರು ತಿಂಗಳವರೆಗೆ ದರ್ಶನ್ ಜೈಲಿನಲ್ಲಿ ಇರಬೇಕಾಗಿದೆ. ಇದರಿಂದ ದರ್ಶನ್ ಇಲ್ಲದೇ ಡೆವಿಲ್ ಮೂವಿಯ ಮೊದಲ ಹಾಡು ಭಾನುವಾರ ಬೆಳಗ್ಗೆ ಬಿಡುಗಡೆಯಾಗಲಿದೆ.
/filters:format(webp)/newsfirstlive-kannada/media/media_files/2025/08/20/darshan_devil-2025-08-20-13-18-07.jpg)
ಇದ್ರೆ ನೆಮ್ಮದಿಯಾಗ್ ಇರ್ಬೇಕು ಸಾಂಗ್ ಈಗಾಗಲೇ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದೇ ಬಿಡುಗಡೆಯಾಗಬೇಕಿತ್ತು. ಆದರೆ ಇದಕ್ಕಿಂತ ಒಂದು ದಿನ ಮೊದಲೇ ಸುಪ್ರೀಂ ಕೋರ್ಟ್​ ತೀರ್ಪು ಬಂದಿದ್ದರಿಂದ ದರ್ಶನ್ ಅವರು ಜೈಲಿಗೆ ಹೋಗಬೇಕಾಯಿತು. ಹೀಗಾಗಿ ಇದ್ರೆ ನೆಮ್ಮದಿಯಾಗ್ ಇರ್ಬೇಕು ಸಾಂಗ್ ಬಿಡುಗಡೆಯ ದಿನಾಂಕ ಮುಂದೂಡಲಾಗಿತ್ತು.
ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅಕ್ಟೋಬರ್​ನಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ ಎನ್ನಲಾಗುತ್ತಿದೆ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 57ನೇ ಸಿನಿಮಾವಾಗಿದ್ದು ಮೂವಿಯಲ್ಲಿ ರಚನಾ ರೈ ಹೀರೋಯಿನ್ ಆಗಿ ಅಭಿನಯ ಮಾಡಿದ್ದಾರೆ. ಈ ಸಿನಿಮಾಗೆ ಮ್ಯೂಸಿಕ್ ಡೈರೆಕ್ಟರ್​ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.
ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ " ದಿ ಡೆವಿಲ್ " ನ , ಮೊದಲನೆ ಹಾಡು ಬಿಡುಗಡೆ
— Darshan Thoogudeepa (@dasadarshan) August 20, 2025
The Devil Unleashes The Heat on 24th August! 💥#IdreNemdiyaagIrbek First Single from #TheDevil Drops at 10.05 AM! 😎
A @AJANEESHB Musical 🎶
#RachanaRai@YoodleeFilms#ShriJaimathaCombines… pic.twitter.com/Tz7vAbN3SM
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us