/newsfirstlive-kannada/media/media_files/2025/08/20/abhishek_sharma-2025-08-20-12-47-01.jpg)
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಏಷ್ಯಾಕಪ್ ಟಿಕೆಟ್ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ ಎಂಬ ಕ್ಯೂರಿಯಾಸಿಟಿಗೆ ಕೊನೆಗೂ ಬ್ರೇಕ್ ಬಿದ್ದಿದೆ. 15 ಜನರ ಬಲಿಷ್ಠ ತಂಡವನ್ನು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಪ್ರಕಟಿಸಿದ್ದಾರೆ. ಹಾಗಾದ್ರೆ, ಈ ಏಷ್ಯಾಕಪ್ನಲ್ಲಿ ಯಾರೆಲ್ಲಾ ಇದ್ದಾರೆ.
ಬಹು ನಿರೀಕ್ಷಿತ ಏಷ್ಯಾಕಪ್ ಟೀಮ್ ಸೆಲೆಕ್ಷನ್ ಕೌತುಕತೆಗೆ ಬ್ರೇಕ್ ಬಿದ್ದಿದೆ. ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಏಷ್ಯನ್ ಸಮರಕ್ಕೆ ಬಲಿಷ್ಠ ತಂಡವನ್ನ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಪ್ರಕಟಿಸಿದ್ದಾರೆ. ದುಬೈ ಕಂಡೀಷನ್ಸ್ಗೆ ಅನುಗುಣವಾಗಿಯೇ 15 ಜನರ ತಂಡವನ್ನ ಆಯ್ಕೆ ಮಾಡಿದ್ದಾರೆ.
ಸೂರ್ಯನೇ ನಾಯಕ... ಶುಭ್ಮನ್ ಉಪನಾಯಕ..!
ಏಷ್ಯಾಕಪ್ನಲ್ಲಿ ಸೂರ್ಯಕುಮಾರ್ ನಾಯಕತ್ವದಲ್ಲೇ ಟೀಮ್ ಇಂಡಿಯಾ ಮುನ್ನಡೆಯಲಿದೆ. ಹಾಲಿ ಚಾಂಪಿಯನ್ಸ್ ಟೀಮ್ ಇಂಡಿಯಾವನ್ನು ಮತ್ತೆ ಚಾಂಪಿಯನ್ ಪಟ್ಟಕ್ಕೇರಿಸುವ ಬಿಗ್ ಚಾಲೆಂಜ್ ಸೂರ್ಯ ಮುಂದಿದೆ. ಆದ್ರೆ, ಟಿ20 ತಂಡಕ್ಕೆ ಕಮ್ಬ್ಯಾಕ್ ಮಾಡ್ತಾರಾ ಇಲ್ವಾ ಎಂಬ ಚಿಂತೆಯಲ್ಲಿದ್ದ ಶುಭ್ಮನ್ಗೆ ಬಿಸಿಸಿಐ ಡಬಲ್ ಗುಡ್ನ್ಯೂಸ್ ನೀಡಿದೆ. ಒಂದ್ಕಡೆ ತಂಡದಲ್ಲಿ ಸ್ಥಾನ ನೀಡಿರುವ ಸೆಲೆಕ್ಷನ್ ಕಮಿಟಿ, ಉಪ ನಾಯಕತ್ವವನ್ನೂ ನೀಡಿದೆ.
‘ಪವರ್ ಹಿಟ್ಟರ್ಸ್’ಗೆ ಮಣೆ ಹಾಕಿದ ಸೆಲೆಕ್ಷನ್ ಕಮಿಟಿ..!
ಬ್ಯಾಟ್ಸ್ಮನ್ಗಳ ವಿಚಾರದಲ್ಲಿ ಕಾಂಪ್ರಮೈಸ್ ಆಗದ ಸೆಲೆಕ್ಷನ್ ಕಮಿಟಿ, ಪವರ್ ಹಿಟ್ಟರ್ಗಳಿಗೆ ಆದ್ಯತೆ ನೀಡಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮ, ರಿಂಕು ಸಿಂಗ್ರಂಥ ಸ್ಪೋಟಕ ಬ್ಯಾಟರ್ಗಳಿಗೆ ಮಣೆಹಾಕಿರುವ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, ಲೋವರ್ ಆರ್ಡರ್ನಲ್ಲಿ ಜಿತೇಶ್ ಶರ್ಮಾರಂಥ ಡೈನಾಮಿಕ್ ಬ್ಯಾಟರ್ಗೆ ಚಾನ್ಸ್ ನೀಡಿದೆ. ಪವರ್ ಫುಲ್ ಬ್ಯಾಟಿಂಗ್ ಲೈನ್ ಆಪ್ ಹೊಂದಿರುವ ಟೀಮ್ ಇಂಡಿಯಾ, ಆನ್ಫೀಲ್ಡ್ನಲ್ಲಿ ಸಿಕ್ಸರ್ಗಳ ಮಳೆ ಸುರಿಸೋದು ಖಾಯಂ.
ಮೂವರು ಆಲ್ರೌಂಡರ್ಸ್.. ಇವ್ರೇ ಗೇಮ್ ಚೇಂಜರ್ಸ್!
ಆಲ್ರೌಂಡರ್ ಕೋಟಾದಲ್ಲಿ ವಾಷಿಂಗ್ಟನ್ ಸುಂದರ್ ಮಿಸ್ ಆಗಿದ್ದಾರೆ. ಆದ್ರೆ, ಹಾರ್ದಿಕ್ ಪಾಂಡ್ಯ, ಶಿವಂ ದುಬೆಯಂಥ ಸಿಕ್ಸ್ ಹಿಟ್ಟಿಂಗ್ ಮಷಿನ್ಸ್ ತಂಡದಲ್ಲಿದ್ದಾರೆ. ಸಿಂಗಲ್ ಹ್ಯಾಂಡ್ ಆಗಿ ಮ್ಯಾಚ್ ಗೆಲ್ಲಿಸುವ ಇವರು, ಸ್ಪಿನ್ ಫ್ರೆಂಡ್ಲಿ ಪಿಚ್ಗಳಲ್ಲಿ ಚೆಂಡನ್ನು ಔಟ್ ಆಫ್ ದಿ ಪಾರ್ಕ್ ಸಿಡಿಸೋದ್ರಲ್ಲಿ ಪಂಟರ್ಸ್.
ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮಾತ್ರವಲ್ಲ, ಬ್ಯಾಟಿಂಗ್ನಲ್ಲಿ ಕಾಣಿಕೆ ನೀಡಬಲ್ಲ ಅಕ್ಷರ್, ಬೌಲಿಂಗ್ನಲ್ಲೂ ಚಮತ್ಕಾರ ಮಾಡ್ತಾರೆ. ಯುಎಇ ಕಂಡೀಷನ್ಸ್ಗೆ ಪರ್ಫೆಕ್ಟ್ ಚಾಯ್ಸ್ ಆಗಿರುವ ಅಕ್ಷರ್ ಪಟೇಲ್, ಏಷ್ಯಾಕಪ್ನಲ್ಲಿ ಗೇಮ್ ಚೇಂಜರ್ ಪ್ಲೇಯರ್ ಆಗ್ತಾರೆ ಅನ್ನೋ ನಿರೀಕ್ಷೆಯಿದೆ.
ಸ್ಪಿನ್ನರ್ಗಳಾಗಿ ವರುಣ್ ಚಕ್ರವರ್ತಿ, ಕುಲ್ದೀಪ್..!
ಯುಎಇನಲ್ಲಿ ಏಷ್ಯಾಕಪ್ ಕಾರಣಕ್ಕೆ ವಾಷ್ಟಿಂಗ್ಟನ್ ಸುಂದರ್ಗೆ ಸ್ಥಾನ ಫಿಕ್ಸ್ ಅಂತಾನೇ ಊಹಿಸಲಾಗಿತ್ತು. ಆದ್ರೆ, ಸುಂದರ್ನ ಡ್ರಾಪ್ ಮಾಡಿರುವ ಸೆಲೆಕ್ಷನ್ ಕಮಿಟಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಚೈನಾಮನ್ ಕುಲ್ದೀಪ್ ಯಾದವ್ಗೆ ಮಣೆಹಾಕಿದೆ. ಈ ಟ್ರ್ಯಾಕ್ಗಳಲ್ಲಿ ಆಡಿರುವ ಅನುಭವ ಹೊಂದಿರುವ ಇವರಿಬ್ಬರು, ಏಷ್ಯಾಕಪ್ನಲ್ಲಿ ಜಾದೂ ಮಾಡೋದು ಬಹುತೇಕ ಫಿಕ್ಸು.
ಇನ್ನು 2024ರ ಟಿ20 ವಿಶ್ವಕಪ್ ಬಳಿಕ ಟಿ20 ತಂಡಕ್ಕೆ ವಾಪಸ್ ಆಗಿರುವ ಜಸ್ಪ್ರೀಪ್ ಬೂಮ್ರಾ ಮೇಲೆ ಏಷ್ಯಾಕಪ್ ಗೆಲ್ಲಿಸುವ ಭಾರ ಇದೆ. ಬೂಮ್ರಾಗೆ ಆರ್ಷ್ದೀಪ್ ಸಿಂಗ್ ಸಾಥ್ ನೀಡಲಿದ್ದಾರೆ. ಪರ್ಫೆಕ್ಟ್ ಆಟಗಾರರನ್ನ ಹೊಂದಿರೋ ಸ್ಪಿನ್ ಹಾಗೂ ಪೇಸ್ ಅಟ್ಯಾಕ್ ಸಖತ್ ಸ್ಟ್ರಾಂಗ್ ಆಗಿದೆ.
ಇದನ್ನೂ ಓದಿ: KL ರಾಹುಲ್ ಅದ್ಭುತ ಬ್ಯಾಟಿಂಗ್.. ಆದರೂ ಏಷ್ಯಾ ಕಪ್ನಲ್ಲಿ ಕನ್ನಡಿಗನಿಗೆ ಅವಕಾಶವಿಲ್ಲ..!
ಶಿವಂ ದುಬೆ, ರಿಂಕು ಸಿಂಗ್, ಹರ್ಷಿತ್ ಸರ್ಪ್ರೈಸ್ ಎಂಟ್ರಿ..!
ಏಷ್ಯಾಕಪ್ನ ಟೀಮ್ ಇಂಡಿಯಾದಲ್ಲಿ ಸರ್ಪ್ರೈಸ್ ಎಂಟ್ರಿ, ರಿಂಕು ಸಿಂಗ್, ಶಿವಂ ದುವೆ ಹಾಗೂ ಹರ್ಷಿತ್ ರಾಣಾ. ಯಾಕಂದ್ರೆ, ಜಿತೇಶ್ ಶರ್ಮಾ ಎಂಟ್ರಿಯಿಂದ ರಿಂಕು ಸಿಂಗ್ಗೆ ಸ್ಥಾನ ಸಿಗೋದು ಅನುಮಾನವಾಗಿತ್ತು. ಆದ್ರೆ, ಫಿನಿಷರ್ ಆಗಿ ರಿಂಕು ಸಿಂಗ್ ಸ್ಥಾನ ಉಳಿಸಿಕೊಂಡರೆ, ವಾಷಿಗ್ಟಂನ್ ಸುಂದರ್ನ ಓವರ್ ಟೇಕ್ ಮಾಡಿರುವ ಶಿವಂ ದುಬೆ ಸರ್ಪ್ರೈಸ್ ಎಂಟ್ರಿ ನೀಡಿದ್ದಾರೆ. ಇವರ ನಡುವೆ ಗಂಭೀರ್ ಶಿಷ್ಯ ಹರ್ಷಿತ್ ರಾಣಾ ಏಷ್ಯಾಕಪ್ನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ತರಿಸಿದೆ.
ಇಂಡಿಯನ್ ಟೈಗರ್ಸ್ ಆನ್ಫೀಲ್ಡ್ನಲ್ಲಿ ಘರ್ಜಿಸ್ತಾರಾ..?
ಏಷ್ಯಾಕಪ್ನ ಟೀಮ್ ಇಂಡಿಯಾ ಸಖತ್ ಸ್ಟ್ರಾಂಗ್ ಇದೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ಸಮತೋಲನ ಕಾಯ್ದುಕೊಂಡಿದೆ. ಇದಕ್ಕಿಂತ ಮಿಗಿಲಾಗಿ ಟಿ20 ಸ್ಪೆಷಲಿಸ್ಟ್ಗಳ ದಂಡೇ ಸೂರ್ಯಕುಮಾರ್ ಸೇನೆಯಲ್ಲಿದೆ. ಪೇಪರ್ ಮೇಲೆ ಬಲಿಷ್ಠವಾಗಿ ಕಾಣ್ತಿರುವ ಇಂಡಿಯನ್ ಟೈಗರ್ಸ್, ಆನ್ಫೀಲ್ಡ್ನಲ್ಲಿ ಘರ್ಜಿಸಿದ್ರೆ, ಏಷ್ಯಾಕಪ್ ಚಾಂಪಿಯನ್ ಆಗಿ ಮತ್ತೆ ಮರೆದಾಡುವುದ್ರಲ್ಲಿ ಅನುಮಾನ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ