/newsfirstlive-kannada/media/media_files/2025/08/20/kl_rahul-8-2025-08-20-08-38-39.jpg)
2025ರ ಏಷ್ಯಾ ಕಪ್ಗೆ ಟೀಮ್ ಇಂಡಿಯಾದ ಸೆಲೆಕ್ಷನ್ ರೇಸ್ನಲ್ಲಿ ಘಟಾನುಘಟಿಗಳ ಅಬ್ಬರದ ನಡುವೆ ಸರ್ಪ್ರೈಸ್ ಹೆಸರುಗಳ ಎಂಟ್ರಿಯಾಗಿವೆ. ಐಪಿಎಲ್ ಅಖಾಡದಲ್ಲಿ ಅಬ್ಬರಿಸಿದ್ದ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಏಷ್ಯಾ ಕಪ್ನಲ್ಲಿ ಆಡೋ ಕನಸು ಕಾಣುತ್ತಿದ್ದ ಕನ್ನಡಿಗ, ಅನುಭವಿ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಅವರು ಮತ್ತೆ ಅವಕಾಶ ವಂಚಿತರಾಗಿದ್ದಾರೆ.
ಯುಎಇನಲ್ಲಿ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಈ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಆಟಗಾರರನ್ನು ಒಳಗೊಂಡ ಈ ತಂಡದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ರನ್ನು ಕೈಬಿಡಲಾಗಿದೆ. ತಂಡದಲ್ಲಿ ವಿಕೆಟ್ ಕೀಪರ್ಗಳಾಗಿ ಯಂಗ್ಸ್ಟರ್ಸ್ ಆದ ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ ಇಬ್ಬರು ಸ್ಥಾನ ಪಡೆದಿದ್ದು ಒಂದಾದರೆ, ಟಿ20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಕೆ.ಎಲ್ ರಾಹುಲ್ ಅವರಿಗೆ ಸ್ಥಾನ ನೀಡಲಾಗಿಲ್ಲ ಎಂದು ಹೇಳಲಾಗಿದೆ.
2024ರಲ್ಲಿ ನಡೆದ ಟಿ20 ವಿಶ್ವಕಪ್ ತಂಡದಿಂದ ಕೆ.ಎಲ್ ರಾಹುಲ್ ಅವರನ್ನು ಹೊರಗಿಡಲಾಗಿತ್ತು. ಇದಾದ ಮೇಲೆ ಈ ವರ್ಷದ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೆ.ಎಲ್ ರಾಹುಲ್ಗೆ ಅವಕಾಶ ನಿರಾಕರಣೆ ಮಾಡಿತ್ತು. ಜೊತೆಗೆ ಕಳೆದ ಒಂದು ವರ್ಷದಿಂದ ಭಾರತದ ಪರವಾಗಿ ರಾಹುಲ್ ಟಿ20 ಪಂದ್ಯಗಳನ್ನು ಆಡಿಲ್ಲ. ಈ ಎಲ್ಲವೂ ಕನ್ನಡಿಗನನ್ನ ಏಷ್ಯಾಕಪ್ನಿಂದ ದೂರ ಇಟ್ಟಿವೆ ಎನ್ನಬಹುದು.
ಇದನ್ನೂ ಓದಿ: ಡ್ರೈವರ್, ನಿರ್ವಾಹಕರು, ಕ್ಲೀನರ್ಗಳಿಗೆ ಗುಡ್ನ್ಯೂಸ್.. ಅಪಘಾತವಾದ್ರೆ 1, 2, 5 ಲಕ್ಷ ರೂಪಾಯಿ ಪರಿಹಾರ
/filters:format(webp)/newsfirstlive-kannada/media/media_files/2025/08/04/kl-rahul-delhi-capitals-2025-08-04-09-53-03.jpg)
ಚಾಂಪಿಯನ್ ಟ್ರೋಫಿ, ಐಪಿಎಲ್ ಹಾಗೂ ಇಂಗ್ಲೆಂಡ್ ವಿರುದ್ಧ ಕೆ.ಎಲ್ ರಾಹುಲ್ ಪರ್ಫಾಮೆನ್ಸ್ ಗಮನಿಸಿದರೆ ಅವಕಾಶ ನೀಡಬೇಕಿತ್ತು. 2025ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ ಮೇಲೆ ಕೆ.ಎಲ್ ರಾಹುಲ್ ಬ್ಯಾಟಿಂಗ್ ಫಾರ್ಮ್ ಅತ್ಯುತ್ತಮವಾಗಿದೆ. ಡೆಲ್ಲಿ ಪರ ಅದ್ಭುತ ಪ್ರದರ್ಶನ ನೀಡಿದ್ದ ರಾಹುಲ್, ಆಡಿದ 13 ಪಂದ್ಯಗಳಲ್ಲಿ 149.72 ಸ್ಟ್ರೈಕ್ ರೇಟ್‌ನಲ್ಲಿ 539 ರನ್ ಬಾರಿಸಿದ್ದರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಬೆಸ್ಟ್ ಬ್ಯಾಟಿಂಗ್ ಮಾಡಿದ್ದ ಕೆ.ಎಲ್ ರಾಹುಲ್, 2 ಸೆಂಚುರಿ, 2 ಅರ್ಧಶತಕಗಳಿಂದ ಒಟ್ಟು 532 ರನ್ಗಳನ್ನು ಗಳಿಸಿದ್ದರು. ಇದರ ಜೊತೆಗೆ ಏಕದಿನ ಸೇರಿ ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿ, ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲೂ ಆಡುವುದಕ್ಕೆ ಕೆ.ಎಲ್ ರಾಹುಲ್ ಅವರು ಫೀಟ್ ಆಗಿದ್ದಾರೆ. ಈ ಎಲ್ಲದರ ಮಧ್ಯೆ ಕೆ.ಎಲ್ ರಾಹುಲ್ ಅವರನ್ನು ಏಷ್ಯಾಕಪ್ನಿಂದ ಹೊರಗಿಟ್ಟಿರುವುದು ಬೇಸರದ ಸಂಗತಿ ಎನ್ನಬಹುದು.
ಏಷ್ಯಾ ಕಪ್ಗೆ ಟೀಮ್ ಇಂಡಿಯಾ
ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ