/newsfirstlive-kannada/media/media_files/2025/08/24/darshan9-2025-08-24-12-36-32.jpg)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಂದು ಡಬಲ್ ಸಂಭ್ರಮ. ಇಷ್ಟು ದಿನ ನಟ ದರ್ಶನ್​ ಅಭಿನಯದ ದಿ ಡೆವಿಲ್​ ಸಿನಿಮಾದ ಮೊದಲು ಹಾಡು ಯಾವಾಗ ರಿಲೀಸ್​ ಆಗುತ್ತೆ ಅಂತ ಫ್ಯಾನ್ಸ್​ ಕಾಯುತ್ತಿದ್ದರು.
ಇದೀಗ ಡೆವಿಲ್​ ಸಿನಿಮಾದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಮೊದಲ ಸಾಂಗ್ ರಿಲೀಸ್ ಆಗಿದೆ. ಆ ಬೆನ್ನಲ್ಲೇ ಮತ್ತೆ ಡೆವಿಲ್​ ಸಿನಿಮಾದ ದಿನಾಂಕವನ್ನು ಅನೌನ್ಸ್​ ಮಾಡಲಾಗಿದೆ.
/newsfirstlive-kannada/media/media_files/2025/08/20/darshan-5-2025-08-20-13-17-47.jpg)
ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದೀಗ ಸಿನಿಮಾ ರಿಲೀಸ್​ ಡೇಟ್ ಬಗ್ಗೆ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು, ಡಿಸೆಂಬರ್ 12ರಂದು ರಾಜ್ಯಾದ್ಯಂತ ರಿಲೀಸ್​ ಆಗಲಿದೆ.
/filters:format(webp)/newsfirstlive-kannada/media/media_files/2025/08/24/darshan8-2025-08-24-12-33-13.jpg)
ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 57ನೇ ಸಿನಿಮಾವಾಗಿದ್ದು, ಮೂವಿಯಲ್ಲಿ ರಚನಾ ರೈ ಹೀರೋಯಿನ್ ಆಗಿ ಅಭಿನಯಿಸಿದ್ದಾರೆ. ಈ ಸಿನಿಮಾಗೆ ಮ್ಯೂಸಿಕ್ ಡೈರೆಕ್ಟರ್​ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.
ದರ್ಶನ್ ಅವರು ಪ್ರಕರಣವೊಂದರಲ್ಲಿ ಹೈಕೋರ್ಟ್​ನಿಂದ ಜಾಮೀನು ಪಡೆದು ಹೊರ ಬಂದಿದ್ದರು. ಆದರೆ ಸುಪ್ರೀಂ ಕೋರ್ಟ್​ ಈ ಜಾಮೀನು ಬಗ್ಗೆ ವಿಚಾರಣೆ ನಡೆಸಿ ದರ್ಶನ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಿದೆ. ಇನ್ನು, 6 ತಿಂಗಳವರೆಗೆ ದರ್ಶನ್ ಜೈಲಿನಲ್ಲಿ ಇರಬೇಕಾಗಿದೆ. ಇದರಿಂದ ದರ್ಶನ್ ಇಲ್ಲದೇ ಡೆವಿಲ್ ಸಿನಿಮಾವನ್ನು ಅಭಿಮಾನಿಗಳು ವೀಕ್ಷಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us