ವಿಶ್ವದಾದ್ಯಂತ 7700 ಕೋಟಿ ಹಣ ಗಳಿಸಿದ 'ಅವತಾರ್ 3', ಆದರೂ ಜೇಮ್ಸ್‌ ಕ್ಯಾಮರೂನ್ ಚಿತ್ರಕ್ಕೆ ದೊಡ್ಡ ಆಘಾತವಾಗಿದೆ..

"ಅವತಾರ್ ಫೈರ್ ಅಂಡ್ ಆಶ್" (Avatar: Fire and Ash) ವಿಶ್ವದಾದ್ಯಂತ ಒಟ್ಟು 7700 ಕೋಟಿ ರೂಪಾಯಿ ಗಳಿಸಿದೆ. ಜಗತ್ತಿನ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಟಾಪ್ 50ರಲ್ಲಿ ಸ್ಥಾನ ಪಡೆಯುವಲ್ಲಿ ಅವತಾರ್ ಫೈರ್ ಮತ್ತು ಆಶ್ ವಿಫಲವಾಗಿದೆ.

author-image
Ganesh Kerekuli
Avatar_ Fire and Ash
Advertisment

"ಅವತಾರ್ ಫೈರ್ ಅಂಡ್ ಆಶ್" (Avatar: Fire and Ash) ವಿಶ್ವದಾದ್ಯಂತ ಒಟ್ಟು 7700 ಕೋಟಿ ರೂಪಾಯಿ ಗಳಿಸಿದೆ. ಜಗತ್ತಿನ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಟಾಪ್ 50ರಲ್ಲಿ ಸ್ಥಾನ ಪಡೆಯುವಲ್ಲಿ ಅವತಾರ್ ಫೈರ್ ಮತ್ತು ಆಶ್ ವಿಫಲವಾಗಿದೆ. 


ಜೇಮ್ಸ್ ಕ್ಯಾಮರೂನ್ ಅವರ "ಅವತಾರ್: ಫೈರ್ ಅಂಡ್ ಆಶ್" ತನ್ನ ಮೊದಲ ಎರಡು ವಾರಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಈ ಚಿತ್ರವು ವಿಶ್ವಾದ್ಯಂತ ಒಟ್ಟು 7700 ಕೋಟಿ ಹಣ ಗಳಿಸಿದೆ. ಅದರ ಬೃಹತ್ ಕಲೆಕ್ಷನ್ ಹೊರತಾಗಿಯೂ ವಿಶ್ವದಾದ್ಯಂತ ಸಾರ್ವಕಾಲಿಕ ಗಳಿಕೆಯ ಟಾಪ್ 10 ಅಥವಾ ಟಾಪ್ 50 ರಲ್ಲಿ ಅದು ಸ್ಥಾನ ಪಡೆದಿಲ್ಲ.

ಇದನ್ನೂ ಓದಿ: ನಟಿ ರಶ್ಮಿಕಾ ಮಂದಣ್ಣ, ನಟ ವಿಜಯ ದೇವರಕೊಂಡ ಇಬ್ಬರೂ ಇಟಲಿ ಪ್ರವಾಸ: ಪೋಟೋದಲ್ಲಿ ಕೊಟ್ಟ ಸುಳಿವು ಏನು?

Avatar_ Fire and Ash (1)

ಈ ಚಿತ್ರ 100ನೇ ಸ್ಥಾನದಲ್ಲಿದೆ

ಬಾಕ್ಸ್ ಆಫೀಸ್ ಮೋಜೊದ (Box Office Mojo) ಇತ್ತೀಚಿನ ಟ್ರ್ಯಾಕಿಂಗ್ ವರದಿಯು ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದೆ. "ಅವತಾರ್: ಫೈರ್ ಅಂಡ್ ಆಶ್" ಪ್ರಸ್ತುತ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ 100ನೇ ಸ್ಥಾನದಲ್ಲಿದೆ. ಟಾಪ್ 10 ರಲ್ಲಿ ಸ್ಥಾನ ಪಡೆಯಲು ಕಷ್ಟಪಡಬೇಕಾಗುತ್ತದೆ ಎಂದು ಹೇಳಿದೆ. 

ಸಾರ್ವಕಾಲಿಕ ಗಳಿಕೆಯ 5 ಚಿತ್ರಗಳು

ಜೇಮ್ಸ್ ಕ್ಯಾಮರೂನ್ ಅವರ "ಅವತಾರ್" (2009) ಇನ್ನೂ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಐತಿಹಾಸಿಕ 2.9 ಬಿಲಿಯನ್ ಡಾಲರ್ ಗಳಿಸಿದೆ. "ಅವೆಂಜರ್ಸ್: ಎಂಡ್‌ಗೇಮ್" (2019) ಎರಡನೇ ಸ್ಥಾನದಲ್ಲಿದೆ.‌ ನಂತರ "ಅವತಾರ್: ದಿ ವೇ ಆಫ್ ವಾಟರ್" (2022). ಕ್ಲಾಸಿಕ್ ಚಿತ್ರ "ಟೈಟಾನಿಕ್" ನಾಲ್ಕನೇ ಸ್ಥಾನದಲ್ಲಿದೆ. ಮತ್ತು ಚೀನೀ ಚಿತ್ರ "ನೆ ಝಾ 2" ಐದನೇ ಸ್ಥಾನದಲ್ಲಿದೆ. ಈ ಅಂಕಿಅಂಶಗಳ ಪ್ರಕಾರ ನೋಡೋದಾದ್ರೆ ಬೃಹತ್ ಬಜೆಟ್ ಮತ್ತು ಅದ್ಭುತ ದೃಶ್ಯಗಳ ಹೊರತಾಗಿಯೂ, "ಅವತಾರ್: ಫೈರ್ ಅಂಡ್ ಆಶ್" ಗಳಿಕೆ ಅಷ್ಟಕಷ್ಟೇ. 

ಭಾರತದಲ್ಲಿ "ಅವತಾರ್: ಫೈರ್ ಅಂಡ್ ಆಶ್" 

ಈ ಚಿತ್ರವು ಭಾರತದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದೆ.  ಮೊದಲ ವಾರದಲ್ಲಿ ₹109.5 ಕೋಟಿ ಗಳಿಸಿತು. ಎರಡನೇ ವಾರದ 8ನೇ ದಿನದಲ್ಲಿ ₹7.65 ಕೋಟಿ ಮತ್ತು 9ನೇ ದಿನದಂದು ₹10 ಕೋಟಿ ಗಳಿಸಿತು. 11 ಮತ್ತು 12 ನೇ ದಿನಗಳಲ್ಲಿ ₹5 ಕೋಟಿ ಮತ್ತು 13 ನೇ ದಿನದಂದು ₹5.25 ಕೋಟಿ ಗಳಿಕೆಯಾಗಿದೆ. 14 ನೇ ದಿನದ ಗಳಿಕೆ ₹6.9 ಕೋಟಿ ಹಣ ಗಳಿಸಿದೆ. 15 ನೇ ದಿನದಂದು ಬೆಳಿಗ್ಗೆ 9:10 IST ವರೆಗೆ ₹2.48 ಕೋಟಿ (ಸುಮಾರು ₹162.68 ಕೋಟಿ) ಗಳಿಸಿದೆ. ಒಟ್ಟು ₹162.68 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಪ್ರಾಜೆಕ್ಟ್ ಚೀತಾಗೆ ಭಾರತದಲ್ಲಿ ಯಶಸ್ಸು! ಭಾರತದಲ್ಲಿ ಹುಟ್ಟಿದ್ದ 19 ಚೀತಾಗಳು, ಒಟ್ಟಾರೆ 30 ಚೀತಾಗಳ ಆವಾಸಸ್ಥಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Avatar: Fire and Ash James Cameron
Advertisment