/newsfirstlive-kannada/media/media_files/2025/11/11/dharmendra-2025-11-11-09-43-13.jpg)
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (Actor Dharmendra) ಇಂದು ನಿಧನರಾದರು. ಅವರು ಹಲವು ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ದಿನಗಳ ಹಿಂದೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್ 10 ರಂದು ಧರ್ಮೇಂದ್ರ ಅವರ ಆರೋಗ್ಯ ಗಮನಾರ್ಹವಾಗಿ ಹದಗೆಟ್ಟಿತ್ತು. ಧರ್ಮೇಂದ್ರ ಅವರಿಗೆ 89 ವರ್ಷವಾಗಿತ್ತು.
ಇಂದು ಬೆಳಗ್ಗೆ ಧರ್ಮೇಂದ್ರ ನಿಧನರಾಗಿದ್ದು, ದೇಶಾದ್ಯಂತ ಶೋಕದ ಅಲೆ ಎಬ್ಬಿದೆ. ಅವರ ಅಗಲಿಕೆಯಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಹೇಮಾ ಮಾಲಿನಿ ಮತ್ತು ಇಶಾ ಡಿಯೋಲ್ ಬಿಳಿ ಬಟ್ಟೆ ಧರಿಸಿ ಕಾಣಿಸಿಕೊಂಡರು. ಧರ್ಮೇಂದ್ರ ಅವರ ಅಂತ್ಯಕ್ರಿಯೆಯನ್ನು ವಿಲೇ ಪಾರ್ಲೆಯ ಸ್ಮಶಾನದಲ್ಲಿ ನಡೆಸಲಾಯಿತು. ಅವರ ಹಿರಿಯ ಮಗ ಸನ್ನಿ ಡಿಯೋಲ್ ಅವರು ಅಂತ್ಯಕ್ರಿಯೆಯ ಚಿತೆಗೆ ಬೆಂಕಿ ಹಚ್ಚಿದರು.
300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಬಾಲಿವುಡ್ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ಧರ್ಮೇಂದ್ರ ಆರು ದಶಕಗಳ ಕಾಲ ಸಿನಿ ಇಂಡಸ್ಟ್ರಿಯನ್ನು ಆಳಿದ್ದರು. ತಮ್ಮ ಸಿನಿ ಜರ್ನಿಯಲ್ಲಿ 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಶೋಲೆ, ಚುಪ್ಕೆ ಚುಪ್ಕೆ, ಸೀತಾ ಔರ್ ಗೀತಾ, ಧರಂ ವೀರ್​ ನಂತರ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು.
ಇತ್ತೀಚೆಗಿನ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಡಿಸೆಂಬರ್ 25 ರಂದು ರಿಲೀಸ್ ಆಗಲಿರುವ ಅಗಸ್ತ್ಯ ನಂದ ಅವರ ಇಕ್ಕಿಸ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್​ನಲ್ಲಿ ಅತ್ಯಧಿಕ ಸೂಪರ್ ಹಿಟ್ ಸಿನಿಮಾ ಕೊಟ್ಟಿರೋ ಹೆಗ್ಗಳಿಕೆ ಧರ್ಮೇಂದ್ರ ಅವರಿಗಿದೆ. ಒಂದೇ ವರ್ಷದಲ್ಲಿ ಏಳೆಂಟು ಹಿಟ್ ಸಿನಿಮಾ ಕೊಟ್ಟ ಇತಿಹಾಸವಿದೆ. 1980ರಲ್ಲಿ ಖ್ಯಾತ ನಟಿ ಹೇಮಾ ಮಾಲಿನಿ ಅವರನ್ನು ಧರ್ಮೇಂದ್ರ ಮದುವೆ ಆಗಿದ್ದರು. ಧರ್ಮೇಂದ್ರ ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಕೂಡ ಬಾಲಿವುಡ್ ಸ್ಟಾರ್ ನಟರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us