/newsfirstlive-kannada/media/media_files/2025/11/11/dharmendra-2025-11-11-09-43-13.jpg)
ಬಾಲಿವುಡ್​ ಸೂಪರ್ ಸ್ಟಾರ್ ಧರ್ಮೇಂದ್ರ ಅವರ ಆರೋಗ್ಯ ಗಂಭೀರವಾಗಿದೆ. ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ನಿನ್ನೆ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಧರ್ಮೇಂದ್ರ ಆರೋಗ್ಯಕ್ಕೆ ಸಂಬಂಧಿಸಿ ಸುಳ್ಳು ಸುದ್ದಿ ನಂಬಬೇಡಿ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಮಾ ಮಾಲೀನಿ ಅವರು ಸ್ಪಷ್ಟಪಡಿಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಧರ್ಮೇಂದ್ರ ಬಳಲುತ್ತಿದ್ದಾರೆ. ನಿನ್ನೆಯ ದಿನ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧರ್ಮೇಂದ್ರ ಹಿಂದಿ ಚಿತ್ರರಂಗದ ಗೌರವಾನ್ವಿತ ಹಾಗೂ ಜನಪ್ರಿಯ ತಾರೆಗಳಲ್ಲಿ ಒಬ್ಬರು.
300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಬಾಲಿವುಡ್ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ಧರ್ಮೇಂದ್ರ ಆರು ದಶಕಗಳ ಕಾಲ ಸಿನಿ ಇಂಡಸ್ಟ್ರಿಯನ್ನು ಆಳಿದವರು. ತಮ್ಮ ಈ ಜರ್ನಿಯಲ್ಲಿ 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಶೋಲೆ, ಚುಪ್ಕೆ ಚುಪ್ಕೆ, ಸೀತಾ ಔರ್ ಗೀತಾ, ಧರಂ ವೀರ್​ ನಂತರ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಇತ್ತೀಚೆಗಿನ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಡಿಸೆಂಬರ್ 25 ರಂದು ರಿಲೀಸ್ ಆಗಲಿರುವ ಅಗಸ್ತ್ಯ ನಂದ ಅವರ ಇಕ್ಕಿಸ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್​ನಲ್ಲಿ ಅತ್ಯಧಿಕ ಸೂಪರ್ ಹಿಟ್ ಸಿನಿಮಾ ಕೊಟ್ಟಿರೋ ಹೆಗ್ಗಳಿಕೆ ಧರ್ಮೇಂದ್ರ ಅವರಿಗಿದೆ.
ಒಂದೇ ವರ್ಷದಲ್ಲಿ ಏಳೆಂಟು ಹಿಟ್ ಸಿನಿಮಾ ಕೊಟ್ಟ ಇತಿಹಾಸವಿದೆ. 1980ರಲ್ಲಿ ಖ್ಯಾತ ನಟಿ ಹೇಮಾ ಮಾಲಿನಿ ಅವರನ್ನು ಧರ್ಮೇಂದ್ರ ಮದುವೆ ಆಗಿದ್ದರು. ಧರ್ಮೇಂದ್ರ ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಕೂಡ ಬಾಲಿವುಡ್ ಸ್ಟಾರ್ ನಟರಾಗಿದ್ದಾರೆ.
ಇದನ್ನೂ ಓದಿ: ದೆಹಲಿ ಕೃತ್ಯದ ಶಂಕಿತ ವ್ಯಕ್ತಿಯ ಫೋಟೋ ರಿಲೀಸ್..! ಸಿಸಿಟಿ ಫೋಟೋಗಳೂ ಲಭ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us