/newsfirstlive-kannada/media/media_files/2025/09/25/megana-raj-2025-09-25-13-34-05.jpg)
ಧ್ರುವ ಸರ್ಜಾ, ಅತ್ತಿಗೆ ಮೇಘನಾರಾಜ್ Photograph: (ಧ್ರುವ ಸರ್ಜಾ, ಅತ್ತಿಗೆ ಮೇಘನಾರಾಜ್)
ಬೆಂಗಳೂರು: ʻಆಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾರನ್ನ (Druva sarja) ಅತ್ತಿಗೆ ಮೇಘನಾ ರಾಜ್​ (Meghana raj) ʻದೇವರು ಕೊಟ್ಟ ತಮ್ಮʼ ಎಂದು ಬಣ್ಣಿಸಿದ್ದಾರೆ.
ಧ್ರುವ ಸರ್ಜಾ ಏನಂಥ ಕರಿತಾರೆ..?
ಉದಯ ಟಿವಿಯ ‘ಧ್ರುವ ದಸರಾ’ ಕಾರ್ಯಕ್ರಮದಲ್ಲಿ ನಟಿ ಮೇಘನಾ ರಾಜ್ ಸರ್ಪ್ರೈಸ್ ಆಗಿ ಎಂಟ್ರಿ ನೀಡಿದ್ದರು. ಆ ವೇಳೆ ಧ್ರುವ ಸರ್ಜಾ ಮೇಘನಾ ರಾಜ್​ನ್ನ ಕಂಡು ಫುಲ್​ ಸರ್ಪ್ರೈಸ್ ಆದರು. ವೇದಿಕೆ ಮೇಲೆ ಓಡಿ ಹೋಗಿ ಅತ್ತಿಗೆಯನ್ನ ಸ್ವಾಗತಿದರು. ಅದೇ ವೇಳೆ ಇಬ್ಬರು ಧ್ರುವ ಸರ್ಜಾ ಮತ್ತು ಮೇಘನಾ ರಾಜ್ ಹಳೆಯ ನೆನಪುಗಳನ್ನ ಹಂಚಿಕೊಂಡರು. ಧ್ರುವ ನನಗೆ ದೇವರು ಕೊಟ್ಟ ತಮ್ಮ ಎಂದು ಮೇಘನಾ ಹೇಳಿದರು. ನಾನು ಚಿರುನಾ ಮದುವೆಯಾಗುವ ಮೊದಲೇ ಧ್ರುವ ಅವರನ್ನು ಬ್ರದರ್​ ಎಂದು ಕರೆದುಬಿಟ್ಟಿದ್ದೆ ಎಂದಿದ್ದಾರೆ.
ಏನಂದ್ರು ಮೇಘನಾ ರಾಜ್..?
ನಾನು ಒಬ್ಬಳೇ ಮಗಳು ಆಗಿರುವುದರಿಂದ ನನಗೆ ಅಣ್ಣನೋ ಅಥವಾ ತಮ್ಮನೋ ಇದ್ದಿದ್ರೆ ಚೆನ್ನಾಗಿರುತ್ತಿತ್ತು ಎಂದು ಯಾವಾಗಲೂ ಅನಿಸುತ್ತಿತ್ತು. ಕೆಲವು ಸಲ ಲೈಫ್‌ನಲ್ಲಿ ನಮ್ಮ ತಂದೆ-ತಾಯಿಗೆ ಹುಟ್ಟಿಯೇ ಅಣ್ಣ-ತಮ್ಮ ಆಗಬೇಕು ಅನ್ನೋ ಅನಿವಾರ್ಯತೆ ಇಲ್ಲ. ದೇವರು ಒಬ್ಬರನ್ನ ಸೃಷ್ಟಿ ಮಾಡಿ ಕಳುಹಿಸಿರುತ್ತಾರೆ. ಅದರಂತೆ ಧ್ರುವ ನನಗೆ ದೇವರು ಕೊಟ್ಟ ತಮ್ಮ ಎಂದು ಸಂತಸ ವ್ಯಕ್ತಪಡಿಸಿದ್ದರು.
ಇತ್ತ ಧ್ರುವ ಸರ್ಜಾ ಕೂಡ ಅತ್ತಿಗೆಯನ್ನ ಬಿಟ್ಟುಕೊಡದೆ ನಮ್ಮ ತಾಯಿ ಮತ್ತು ಅಣ್ಣ ಇವರನ್ನ ಪರಿಚಯ ಮಾಡಿಸಿದ್ದು ಹೇಗೆ ಅಂದರೆ.. ಇವರು ಅತ್ತಿಗೆ ಅಂದರೆ ಎರಡನೇ ತಾಯಿ ಇದ್ದಂಗೆ. ನಿನ್ನ ಎರಡನೇ ತಾಯಿ ಎಂದು ಪರಿಚಯ ಮಾಡಿಸಿದ್ದರು. ತಾಯಿ ಅಂತ ಕರೆಯೋದಕ್ಕೆ ಆಗುವುದಿಲ್ಲ ಅಲ್ವಾ? ಅದಕ್ಕೆ ಸಿಲ್ ಅಂತ ಕರೀತಿನಿ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಇದನ್ನೂ ಓದಿ:ಕಾಂತಾರ ಸಿನಿಮಾಗೆ ಆಂಧ್ರದಲ್ಲಿ ಬೆದರಿಕೆ..! ಯಾಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ